ಕೋಳಿವಾಡ ಶಾಲೆಯಲ್ಲಿ ಸಾರವರ್ಧಿತ ಅಕ್ಕಿ ಮಾಹಿತಿ ತಿಳಿವಳಿಕೆ ಕಾರ್ಯಕ್ರಮ

ಯಾದಗಿರಿ:ನ.23: ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (ಎಫ್.ಎಸ್.ಎಸ್.ಎ.ಐ), ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ ಯಾದಗಿರಿ, ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸಾರವರ್ಧಿತ ಅಕ್ಕಿಯ ಮಹತ್ವವನ್ನು ಕುರಿತು ವಿವರಿಸುವ ಕಾರ್ಯಕ್ರಮ ನಗರದ ಕೋಳಿವಾಡ ಸರ್ಕರಿ ಶಾಲೆಯಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚಂದ್ರಕಾಂತ ರೆಡ್ಡಿ, ಈ ಅಕ್ಕಿಯಲ್ಲಿ 12 ಜೀವಸತ್ವ, ಫೆÇೀಲಿಕ್ ಆಮ್ಲಯುಕ್ತ, ಕಬ್ಬಿಣದಂಶ ವನ್ನು ಹೊಂದಿರುವ ವಿಶೇಷ ಅಕ್ಕಿ ಯಾಗಿದೆ.

ಇದನ್ನು ಸೇವಿಸುವದರ ಮೂಲಕ ವಿದ್ಯಾರ್ಥಿಗಳು ಸುದೃಢ ದೇಹ ಮತ್ತು ಆರೋಗ್ಯಕರ ಮನಸ್ಸು ಹೊಂದಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಅಧಿಕಾರಿಗಳಾದ ಡಾ|| ಭಗವಂತ ಅನವಾರ, ಡಾ|| ಪ್ರಕಾಶ, ಎಎಫ್.ಸಿ.ಎಸ್.ಸಿ. ಜಿಲ್ಲಾ ವ್ಯವಸ್ಥಾಪಕಿ ಶ್ರೀಮತಿ ಶಿಲ್ಪಾ ಸುರಪುರ, ಬಸವಂತಪ್ಪ, ಪ್ರಭು ಕಣ್ಣನ್, ಮದ್ಯಾಹ್ನದ ಬಿಸಿಯೂಟ ಸಹಾಯಕ ನಿರ್ದೇಶಕ ಕನಕಪ್ಪ, ಬಸವಂತಪ್ಪ ಇಂಬಾಡಿ ಸಗಟು ಮಳಿಗೆ ವ್ಯವಸ್ಥಾಪಕರು ಮತ್ತು ಟಾಟಾ ಏಜೆನ್ಸಿ ಭಾರತ ಸರ್ಕಾರ ಮತ್ತು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಕೋಲಿವಾಡ ಮುಖ್ಯೋಪಾಧ್ಯಾಯರು ಮತ್ತು ಪಾತ್ನ ಅಧಿಕಾರಿಗಳು ಹಾಗೂ ಶಾಲಾ ಸಿಬ್ಬಂದಿ ಭಾಗವಹಿಸಿದ್ದರು.