ಕೋಳಾರ ಕೈಗಾರಿಕಾ ಪ್ರದೇಶದಲ್ಲಿ ಲಸೀಕಾಕರಣ ಪರಿಶೀಲಿಸಿದ ಜಿಲ್ಲಾಧಿಕಾರಿಗಳು

ಬೀದರ ಮೇ 28: 18 ರಿಂದ 44 ವಯೋಮಾನದವರಿಗೆ ಬೀದರ ಜಿಲ್ಲೆಯಾದ್ಯಂತ ಕೋವಿಡ್ ಲಸಿಕಾಕರಣ ತೀವ್ರವಾಗಿ ನಡೆಯುತ್ತಿದೆ. ರಾಜ್ಯ ಗುರುತಿಸಿರುವ ದುರ್ಬಲ ಗುಂಪಿನ ಫಲಾನುಭವಿಗಳು ಮತ್ತು ರಾಜ್ಯ ಕೋರೋನಾ ಮುಂಚೂಣಿ ಕಾರ್ಯಕರ್ತರ ಪಟ್ಟಿಯಲ್ಲಿ ಔಷಧಿ ತಯ್ಯಾರಿಸುವ ಕಂಪನಿ ಸಿಬ್ಬಂದಿಗಳಿಗೆ, ಆಯಿಲ್ ಇಂಡಸ್ಟಿಸ್ ಮತ್ತು ಗ್ಯಾಸ್ ಸರಬರಾಜು ಮಾಡುವವರಿಗೂ ಕೂಡ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೇ.27 ರಂದು ಕೋಳಾರ ಕೈಗಾರಿಕಾ ಪ್ರದೇಶದಲ್ಲಿ

ನಡೆದ ಕೋವಿಡ್ ಲಸಿಕಾಕರಣದ ಸ್ಥಳಕ್ಕೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್. ಅವರು ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶ್ರೀವೆನ್ ಫಾರ್ಮಾ ಸೈನ್ಸಸ್ ಘಟಕ ಮತ್ತು ಸಾಯಿ ಲೈಫ್ ಸೈನ್ಸಸ್ ಘಟಕದವರಿಗೆ ಕೋವಿಡ್ ಲಸಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿಯ ಸತೀಶ ವಾಲೆ ಹಾಗೂ ಇನ್ನೀತರರು ಇದ್ದರು.

ಹುಮನಾಬಾದ ತಾಲ್ಲೂಕಿನಲ್ಲಿ: ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿಯೂ ಕೂಡ ಮೇ.27 ರಂದು ಕೋವಿಡ್ ಲಸಿಕಾಕರಣ ನಡೆಯಿತು. ಹುಮನಾಬಾದ ತಾಲ್ಲೂಕಿನ ಆರ್ಸಿಎ???ಎಂನಲ್ಲಿನ ಸಿಬ್ಬಂದಿಗೆ ಲಸಿಕಾಕರಣ ನಡೆಯಿತು. ಈ ಸಂದರ್ಭದಲ್ಲಿ ಹುಮನಾಬಾದ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ನಾಗನಾಥ ಹುಲಸೂರೆ ಮತ್ತು ಇತರರು ಇದ್ದರು.