ಕೋಳಾರ(ಕೆ) ಗ್ರಾಮದಲ್ಲಿ ಸುಸಜ್ಜಿತವಾದ ಡಿಜಿಟಿಲ್ ಗ್ರಂಥಾಲಯ ನಿರ್ಮಾಣ

ಬೀದರ:ನ.24:ಗ್ರಾಮ ಪಂಚಾಯತ್ ಕೋಳಾರ್,ಕೆ ಇಂದು ಬೀದರ ತಾಲೂಕ್ ಪಂಚಾಯತಿಯ ಉದ್ಯೋಗ ಖಾತ್ರಿ ಸಾಹಯಕ ನಿರ್ದೇಶಕರಾದಂತ ಲಕ್ಷ್ಮಿ ಬೀರಾದರ್ ಅವರು ನರೇಗಾ ಯೋಜನೆಯಡಿ ನಿರ್ಮಾಣಗೊಂಡಿರುವ, ಅಭಿವೃದ್ಧಿ ಕಾಮಗಾರಿಯನ್ನು
ಹಾಗೂ ಡಿಜಿಟಲ್ ಗ್ರಂಥಾಲಯ ವೀಕ್ಷಣೆ ಮಾಡಲಾಯಿತು.
ಈ ಗ್ರಂಥಾಲಯವು ಆಧುನಿಕ ದಿಂದ ಕೂಡಿದೆ ಇಲ್ಲಿ ಸಾಹಿತ್ಯ ಬುಕ್, ಇ- ಬುಕ್ಸ್, ವೈಫೈ ಸೌಲಭ್ಯ ಒಳಗೊಂಡಿದೆ. ಗ್ರಾಮಸ್ಥರು, ಓದು ಪ್ರಿಯರು ಮತ್ತು ಶಾಲೆಯ ಮಕ್ಕಳು ಗ್ರಾಮದ ಡಿಜಿಟಲ್ ಗ್ರಂಥಾಲಯ ಸದುಪಯೋಗ ಪಡೆಯಬೇಕು ಎಂದು ಉದ್ಯೋಗ ಖಾತ್ರಿ ಯೋಜನೆಯ ಸಾಹಯಕ ನಿರ್ದೇಶಕರಾದಂತ ಲಕ್ಷ್ಮಿ ಬೀರಾದರ್ ಅವರು ಹೇಳಿದರು.
ದಿನವೂ ಗ್ರಂಥಾಲಯಕ್ಕೆ ಭೇಟಿ ನೀಡಿದವರ ಸಂಖ್ಯೆ ಹೆಚ್ಚಳವಾಗಿದೆ.ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುವವರಿಗೆ ಸಹಾಯವಾಗಲಿದೆ ಎಂದು ಕೋಳಾರ ಕೆ ಅಭಿವೃದ್ಧಿ ಅಧಿಕಾರಿಗಳಾದ ಕುಮೊದಾ ನೀಲಾ ವಿದ್ಯಾರ್ಥಿಗಳಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಗುರುನಾಥ್ ಬೀರಾದರ್, ತಾಂತ್ರಿಕ್ ಸಂಯೋಜಕರಾದ ಅಮರ್ ಬೀರಾದರ್, ಡಿಯೋ ಶಿವಕುಮಾರ್, ವಿದ್ಯಾರ್ಥಿಗಳು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಇದ್ದರು.