ಕೋಳಗೇರಿ ಪ್ರದೇಶದ ಜನರಿಗೆ ಸಿಕ್ಯಾಬ್ ಹಾಗೂ ಕೇರಿಂಗ್ ಸೋಲ್ಸ್ ವತಿಯಿಂದ ಸ್ವಚ್ಛತೆಯ ಬಗ್ಗೆ ಅರಿವು

ವಿಜಯಪರ : ಎ.10: ಸಿಕ್ಯಾಬ್ ತಾಂತ್ರಿಕ ವಿದ್ಯಾರ್ಥಿ ಬಳಗ ಹಾಗೂ ಕೇರಿಂಗ್ ಸೋರ್ಸ್ ಸಹಯೋಗದ ಅಡಿಯಲ್ಲಿ ಎಐಸಿಟಿಇ ಚಟುವಟಿಕೆಯ ಅಡಿಯಲ್ಲಿ ಹಮ್ಮಿಕೊಂಡ ವಿಜಯಪುರ ಪ್ರತಿಷ್ಠತ ತಾಂತ್ರಿಕ ವಿದ್ಯಾಲಯವಾದ ಸಿಕ್ಯಾಬ್ ಸಂಸ್ಥೆಯ ಸಿವ್ಹಿಲ್ ಹಾಗೂ ಮೆಕ್ಯಾನಿಕಲ್ ವಿದ್ಯಾರ್ಥಿಗಳಿಂದ ದಿನಾಂಕ 03 ರಿಂದ ಪ್ರಾರಂಭಗೊಂಡ ಸ್ವಚ್ಛತಾ ಅಭಿಯಾನವನ್ನು ಕೊಳಗೇರಿ ಪ್ರದೇಶದಲ್ಲಿ 08-03-2023 ಮುಕ್ತಾಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ಚಟುವಟಿಕೆಗಳ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜೊತೆಗೂಡಿ ಕೊಳಗೇರಿ ಪ್ರದೇಶದಲಿರುವ ನಿವಾಸಿಗಳಿಗೆ ಸ್ವಚ್ಛತೆ ಹಾಗೂ ಅದರ ಮಹತ್ವವನ್ನು ತಿಳಿಸಿಕೊಟ್ಟರು. ಮಲೀನ ವಾತಾವರಣದಿಂದ ಹರಡುವ ವಿಭಿನ್ನ ರೋಗಗಳ ಬಗ್ಗೆ ಅರಿವು ಮೂಡಿಸಿದರು.
ಈ ಚಟುವಟಿಕೆಯಲ್ಲಿ ಸಣ್ಣ ಸಣ್ಣ ಗುಂಪುಗಳನ್ನು ರಚಿಸಿ ಪ್ರತಿ ಪ್ರದೇಶದಲ್ಲಿರುವ ಮಲೀನವನ್ನು ವಿಂಗಡಿಸಿ ಅದನ್ನು ಸ್ವಚ್ಛಗೊಳಿಸಿ ಅಲ್ಲಿರುವ ಮಲೀನವನ್ನು ಬಹಳಷ್ಟು ಮಟ್ಟಿಗೆ ಸುಧಾರಣೆಗೊಳಿಸಿ ಅಲ್ಲಿ ವಾಸಿಸುವ ಜನರಿಗೆ ಇದೇ ರೀತಿಯಾಗಿ ಸ್ವಚ್ಛತೆಯನ್ನು ಇನ್ನು ಮುಂದೆ ಕಾಪಾಡಿಕೊಂಡು ತಮ್ಮೆಲ್ಲರ ಆರೋಗ್ಯವನ್ನು ಕಾಪಾಡಿಕೊಂಡು ಸುದರ ಜೀವನಕ್ಕೆ ಅನಿಯಾಗಬೇಕೆಂದು ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಂಯೋಜಕರಾದ ಪ್ರೊ.ಸಚೀನ ಪಾಂಡೆ, ಪ್ರೊ.ಕುಶಲ ಕಬಾಡೆ, ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರುಗಿತು. ಇದೇ ಸಂದರ್ಭದಲ್ಲಿ ಮಾರ್ಗದರ್ಶನಕ್ಕಾಗಿ ಆಗಮಿಸಿದ ಸಿಕ್ಯಾಬ್ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಆರ್.ಎ. ಕದರಿ ನಾಯ್ಕರ, ಮೆಕಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ.ಸೈಯದ ಅಬ್ಬಾಸಲಿ, ಶಿಕ್ಷಕರಾದ ಪ್ರೊ.ಅಲ್ತಾಪ್ ಭಾಗವಾನ, ಪ್ರೊ.ದೀಲೀಪ್ ಸುತ್ರಾವೆ, ಸುನೀಲ ಥಾನೇದ, ಮೆಬೆಬೂಬ್ ಪ್ರೊ. ಆಸೀಪ್ ದೊಡ್ಡಮನಿ, ಎನ್.ಕೆ, ಸಿವ್ಹಿಲ್ ವಿಭಾಗದ ಮುಖ್ಯಸ್ಥರಾದ ಡಾ.ಅಬ್ಬಾಸ ದುಂಡಸಿ ಹಾಗೂ ಕೇರಿಂಗ್ ಸೋಲ್ಸ್ ಇಂಡಿಯಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿಯಾದ ಶ್ರೀಮತಿ ಸುಫಿಯಾ ದೊಡ್ಡಮನಿ, ಉಪಾಧ್ಯಕ್ಷರಾದ ಎಮ್.ಎಮ್. ದೊಡ್ಡಮನಿ, ಬಂದೇನವಾಜ ಲೋಣಿ, ವಿನಾಯಕ ಕುಂಟೆ, ಜುನೇದ, ನಿಯಾಜ್ ಬಾಗವಾನ, ಶಫೀವುಲ್ಲಾ ಸಂಗಾಪೂರ, ನ್ಯಾಮತ್ತುಲ್ಲ ಪಟೇಲ, ಅಸ್ಲಂ ಕರಜಗಿ, ಮಹಿಳಾ ವಿಭಾಗದ ಮುಖ್ಯಸ್ಥರಾದ ಪ್ರೊ. ಬೇನಜೀರ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೊಳಗೇರಿ ಸಮುದಾಯಕ್ಕೆ ಆರೋಗ್ಯ ಕಾಳಜಿ ವಹಿಸಬೇಕೆಂದು ಮನವಿ ಮಾಡಿಕೊಂಡು, ವಿಜಯಪುರ ನಗರವು ಸುಂದರ, ಸುಸರ್ಜಿತ ಪ್ರವಾಸಿ ತಾಣವಾಗಿ ಪ್ರವಾಸಿಗರನ್ನು ಆಕರ್ಷಣೆಯ ಕೇಂದ್ರವಾಗಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಚಟುವಟಿಕೆಯಲ್ಲಿ ಸುಮಾರು 100 ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡರು ಕೊಳಗೇರಿ ಪ್ರದೇಶದ ನಿವಾಸಿಗರಿಗೆ ಕಳಕಳಿಯಿಂದ ಸ್ವಚ್ಛತೆ ಹೆಚ್ಚು ಮಹತ್ವ ನೀಡಬೇಕೆಂದರು.