ಕೋಳಕೂರ ರಸ್ತೆಯ ದುರಸ್ತಿ ಯಾವಾಗ? : ರಾಯಪ್ಪ ಕೋಳಕೂರ

ಜೇವರ್ಗಿ :ಜೂ.19: ತಾಲೂಕಿನ ಕೋಳಕೂರು ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ, ಸಂಬದಪಟ್ಟ ಅಧಿಕಾರಿಗಳು ಕೊಡಲೆ ರಸ್ತೆ ದುರಸ್ತಿ ಮಾಡಬೇಕೆ ಎಂದು ತಾಲೂಕ ಬಿಜೆಪಿ ಎಸ್ ಸಿ ಮೋರ್ಚಾ ಉಪಾಧ್ಯಕ್ಷರಾದ ರಾಯಪ್ಪ ಕೋಳಕೂರ್ ಒತ್ತಾಯಿಸಿದ್ದಾರೆ.

ಜೇವರ್ಗಿಯಿಂದ ಕೊಳಕೂರಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ತಗ್ಗು ಗುಂಡುಗಳಿಂದ ಕೂಡಿದೆ. ಸಾರ್ವಜನಿಕರು ತಮ್ಮ ಜೀವವನ್ನ ಕೈಯಲ್ಲಿಡಿದುಕೊಂಡು ಸಂಚಾರ ಮಾಡುತ್ತಿದ್ದಾರೆ. ಆದರೆ ಇತ್ತ ಕಡೆ ಯಾವುದೇ ಅಧಿಕಾರಿಗಳಾಗಲಿ ಶಾಸಕರಾಗಲಿ ಗಮನ ಹರಿಸಿಲ್ಲ. ಕೂಡಲೇ ರಸ್ತೆ ದುರಸ್ತಿ ಮಾಡಬೇಕು ಇಲ್ಲವಾದರೆ ಒಂಬತ್ತು ಹಳ್ಳಿಗಳ ಸಾರ್ವಜನಿಕರು ಉಗ್ರವಾಗಿ ಹೋರಾಟ ಮಾಡಬೇಕಾಗುತ್ತದೆ.

ಜೇವರ್ಗಿಯಿಂದ ಸುಮಾರು 9 ಕ್ಕು ಅಧಿಕ ಹಳ್ಳಿಗಳಿಗೆ ಹೋಗಲು ಜನರು ಈ ರಸ್ತೆಯನ್ನೆ ಬಳಸುತ್ತಾರೆ. ಕೋಳಕೂರ ಒಂದು ಜಿಲ್ಲಾ ಪಂಚಾಯತ್ ಕ್ಷೇತ್ರವಾಗಿದ್ದರು ಕೂಡ ಸರಿಯಾದ ರಸ್ತೆ ಮಾಡಿಲ್ಲ. ಶಾಸಕರು ಸ್ವಲ್ಪ ಕ್ಷೇತ್ರದಕಡೆ ಗಮನಹರಿಸಿ ಅನುದಾನ ಬಿಡುಗಡೆ ಮಾಡಬೇಕು ಹಾಗೂ ಸಂಭಂದಪಟ್ಟ ಅಧೀಕಾರಿಗಳು ಈ ರಸ್ತೆಯನ್ನು ಸುದಾರಣೆ ಮಾಡಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕುಲ ಮಾಡಬೇಕು. ಕಾಮಗಾರಿ ಆದರು ಕೂಡ ಅದು ಕಳಪೆ ಕಾಮಗಾರಿ ಯಾಗುತ್ತಿದೆ. ಅಧೀಕಾರಿಗಳು ಸ್ವಲ್ಪ ಗಮನ ಹರಿಸಿ ಕಳೆಪೆ ಕಾಮಗಾರಿ ಮಾಡುವ ಗುತ್ತೆದಾರರ ವಿರುದ್ದ ಕ್ರಮ ಕೈಗೊಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕೋಳಕೂರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಗ್ರವಾದ ಹೋರಾಟಮಾಡಬೇಕಾಗುತ್ತದೆ ಎಂದು ತಾಲೂಕ ಬಿಜೆಪಿ ಎಸ್ ಸಿ ಮೋರ್ಚಾ ಉಪಾಧ್ಯಕ್ಷರಾದ ರಾಯಪ್ಪ ಕೋಳಕೂರ ಒತ್ತಾಯಿಸಿದ್ದಾರೆ.