ಕೋಳಂಕ್ಕಿ ಗುಡ್ಡಕೆ ಬೆಂಕಿ:ಗಿಡಗಳು ಭಸ್ಮ

ರಾಯಚೂರು, ಮೇ.೨- ನಗರದ ಹೊರವಲಯದ ಮಲಿಯಾಬಾದ್ ಅರಣ್ಯ ಪ್ರದೇಶದ ಕೋಳಂಕ್ಕಿ ಗುಡ್ಡಕೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಔಷಧೀಯ ಗಿಡಗಳು ಬೆಂಕಿಗೆ ಆಹುತಿಯಾಗಿವೆ.ಮಲಿಯಾಬಾದ್ ಅರಣ್ಯ ಪ್ರದೇಶ ಗುಡ್ಡಗಳಿಂದ ಕೂಡಿದ್ದು , ಅದರಲ್ಲಿ ಕೋಳಕ್ಕಿ ಗುಡ್ಡ ಅನೇಕ ಔಷಧಿ ಸಸ್ಯಗಳನ್ನು ಹೊಂದಿದೆ.ಗುಡ್ಡಕ್ಕೆ ಬೆಂಕಿ ಬಿದ್ದಿರುವ ಹಿಂದೆ ಕಿಡಿಗೇಡಿಗಳ ಕೃತ್ಯ ಇದೆ ಎಂದು ಹತ್ತಿರದ ನಿವಾಸಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.