ಕೋಲ್ಕುಂದದಲ್ಲಿ ಕಾನೂನು ಅರಿವು ನೆರವು

ಸೇಡಂ, ನ,08 : ತಾಲೂಕಿನ ಕೋಲ್ಕುಂದ ಗ್ರಾಪಂ ವ್ಯಾಪ್ತಿಯ ಶ್ರೀ ವೀರಭದ್ರೇಶ್ವರ ದೇವಾಲಯ ಮುಂಭಾಗದ ಆವರಣದಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ,ತಾಲೂಕು ಆಡಳಿತ, ಅಭಿಯೋಜನಾ ಇಲಾಖೆ, ಪೆÇಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳು ಸೇಡಂ ರವರ ಸಂಯುಕ್ತ ಆಶ್ರಯದಲ್ಲಿ (ಕಾನೂನು ಅರಿವು ನೆರವು) “ಕಾನೂನು ಅರಿವಿನಿಂದ ನಾಗರೀಕರ ಸಬಲೀಕರಣ ಜಾಗೃತಿ” ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ವಿಜಯಕುಮಾರ್ ಜಟ್ಲಾ ಸಿವಿಲ್ ಹಿರಿಯ ನ್ಯಾಯಾಧೀಶರು ಸೇಡಂ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ವೇಳೆಯಲ್ಲಿ ಭೀಮ್ಶಪ್ಪ ಅಧ್ಯಕ್ಷರು ಗ್ರಾಮ ಪಂಚಾಯಿತಿ ಕೋಲ್ಕುಂದ ಮುಖ್ಯ ಅತಿಥಿಗಳು ಶ್ರೀ ಮಲ್ಲನಗೌಡ ಬೆನಕನಹಳ್ಳಿ ಅಧ್ಯಕ್ಷರು ನ್ಯಾಯವಾದಿಗಳ ಸಂಘ ಸೇಡಂ ಉಮಾ ರೆಡ್ಡಿ ಗ್ರಾಮ ಪಂಚಾಯತ್ ಸದಸ್ಯರು ಕೋಲ್ಕುಂದ ವಿಶೇಷ ಉಪನ್ಯಾಸಕರು ನಾರಾಯಣ ರೆಡ್ಡಿ ರುದ್ರವಾರ್ ಹಿರಿಯ ನ್ಯಾಯವಾದಿಗಳು ಸೇಡಂ ಕಾರ್ಯಕ್ರಮ ನಿರೂಪಣೆ ಶಾಂತಕುಮಾರ ಬ ಹಿರೇಮಠ ನ್ಯಾಯವಾದಿಗಳು ಸಹ ಕಾರ್ಯದರ್ಶಿ ನ್ಯಾಯವಾದಿಗಳ ಸಂಘ ಸೇಡಂ ಪೆÇಲೀಸ್ ಇಲಾಖೆ ಸಿಬ್ಬಂದಿ ವರ್ಗ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.