ಕೋಲ್ಕತ್ತಾ ಮೇಲೆ ರೈಡ್ ಮಾಡಿದ ರಾಜಸ್ಥಾನ

ಕೋಲ್ಕತ್ತಾ:ಜೋಸ್ ಬಟ್ಲರ್ ಅವರ ಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಕೋಲ್ಕತ್ತಾ ವಿರುದ್ಧ 2 ವಿಕೆಟ್ ಗಳ ರೋಚಕ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತು.ಕೋಲ್ಕತ್ತಾ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 224 ರನ್ ಕಲೆ ಹಾಕಿತು.
224 ರನ್ ಗುರಿ ಬೆನ್ನತ್ತಿದ ರಾಜಸ್ಥಾನ ತಂಡಕ್ಕೆ ಓಪನರ್ ಗಳಾದ ಯಶಸ್ವಿ ಜೈಸ್ವಾಲ್(19 ರನ್) ಮತ್ತು ಜೋಸ್ ಬಟ್ಲರ್ ಮೊದಲ ವಿಕೆಟ್ ಗೆ 22ರನ್ ಸೇರಿಸಿದರು. ಸಂಜು ಸ್ಯಾಮ್ಸನ್ 12 ರನ್ ಗಳಿಸಿ ಪೆವಿಲಿಯನ್ ಸೇರಿದರು. ಬಟ್ಲರ್ಗೆ ಸಾಥ್ ನೀಡಿದ ರಿಯಾನ್ ಪರಾಗ್ 50 ರನ್ ಗಳ ಜತೆಯಾಟ ನೀಡಿದರು. ಬಟ್ಲರ್ 55 ಎಸೆತದಲ್ಲಿ ಶತಕ ಹೊಡೆದರು. ರಿಯಾನ್ ಪರಾಗ್ 34ರನ್,
ಧ್ರುವ ಜುರೆಲ್ 2, ಆರ್.ಅಶ್ವಿನ್ 8, ಹೆಟ್ಮೇಯರ್ 0, ಕೊನೆಯಲ್ಲಿ ರೊವಮನ್ ಪೊವೆಲ್ 26 ರನ್ ಹೊಡೆದರು.
ಕೊನೆಯ ಓವರ್ನಲ್ಲಿ ಗೆಲ್ಲಲು 9 ರನ್ ಬೇಕಿದ್ದಾಗ ಬಟ್ಲರ್ ಸಿಕ್ಸರ್ ಹೊಡೆದು ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
ಕೋಲ್ಕತ್ತಾ ಪರ ಹರ್ಷಿತ್ ರಾಣಾ 45ಕ್ಕೆ 2, ಸುನಿಲ್ ನರೈನ್ 30ಕ್ಕೆ 2, ವರಣ್ ಚಕ್ರವರ್ತಿ 36ಕ್ಕೆ 2 ವಿಕೆಟ್ ಪಡೆದರು.
ನರೈನ್ ಶತಕಕ್ಕೆ ನಲುಗಿದ ರಾಜಸ್ಥಾನ
ಆಲ್ರೌಂಡರ್ ಸುನಿಲ್ ನರೈನ್ ಅವರ ಶತಕದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಎದುರಾಳಿ ರಾಜಸ್ಥಾನ ತಂಡಕ್ಕೆ ಗೆಲ್ಲಲು 224 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿತ್ತು.
ಕೆಕೆಆರ್ ಪರ ಫಿಲ್ ಸಾಲ್ಟ್ (10ರನ್) ಆವೇಶ್ಗೆ ಬಲಿಯಾದರು. ರಘುವನ್ಶಿ ಸಾಥ್ ಪಡೆದ ನರೈನ್ 49 ಎಸೆತಗಳಲ್ಲಿ ಶತಕ ಹೊಡೆದರು. ಸುನಿಲ್ ನರೈನ್ ( 56 ಎಸೆತ, 13 ಬೌಂಡರಿ, 6 ಸಿಕ್ಸರ್) 109ರನ್ ಹೊಡೆದರು. ರಘುವನ್ಶಿ 30, ಶ್ರೇಯಸ್ 11, ರಸೆಲ್ 13, ರಿಂಕು ಸಿಂಗ್ ಅಜೇಯ 20 ರನ್ ಹೊಡೆದರು.
ರಾಜಸ್ಥಾನ ಪರ ಆವೇಶ್ ಖಾನ್ 35ಕ್ಕೆ2, ಕುಲ್ದೀಪ್ ಸೇನ್ 46ಕ್ಕೆ2, ಬೌಲ್ಟ್ 31ಕ್ಕೆ 1, ಚಾಹಲ್ 54ಕ್ಕೆ 1 ವಿಕೆಟ್ ಪಡೆದರು.