ಕೋಲ್ಕತ್ತಾ ಎದುರು ಪಂಜಾಬ್ ಕಿಂಗ್

ಕೋಲ್ಕತ್ತಾ : ಜಾನಿ ಬೇರ್ ಸ್ಟೊ ಅವರ ಶತಕದ ನೆರವಿನಿಂದ ಪಂಜಾಬ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಈಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 261 ರನ್ ಕಲೆ ಹಾಕಿತು.ಪಂಜಾಬ್ 18.4 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತು.
ಪಂಜಾಬ್ ಪರ ಪ್ರಭಾ ಸಿಮ್ರಾನ್ ಸಿಂಗ್ 54 ರನ್, ಜಾನಿ ಬೇರ್ ಸ್ಟೊ _108 ರನ್, ರೂಸೌ 26 ರನ್, ಶಶಾಂಕ್ ಅಜೇಯ68ರನ್ ಹೊಡೆದರು.
ಇದಕ್ಕೂ ಮುನ್ನ ಉತ್ತಮ ಆರಂಭ ಪಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಪಂಜಾಬ್ ತಂಡಕ್ಕೆ 262 ರನ್ಗಳ ಬೃಹತ್ ಟಾರ್ಗೆಟ್ ಅನ್ನು ನೀಡಿತು.
ಪಂಜಾಬ್ ಬೌಲರ್ಸ್ ಕೋಲ್ಕತ್ತಾ ರನ್ ವೇಗಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಕೆಕೆಆರ್ 6 ವಿಕೆಟ್‍ಗಳನ್ನು ಕಳೆದುಕೊಂಡು 261 ರನ್‍ಗಳನ್ನು ಕಲೆ ಹಾಕಿತು.
ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಫಿಲೀಪ್ ಸಾಲ್ಟ್ (75ರನ್) ಮತ್ತು ಸುನಿಲ್ ನರೈನ್ (71ರನ್) ಮೊದಲ ವಿಕೆಟ್‍ಗೆ 138 ರನ್ ಸೇರಿಸಿದರು.
ನಂತರ ಬಂದ ವೆಂಕಟೇಶ್ ಅಯ್ಯರ್ 39, ಆ್ಯಂಡ್ರೆ ರಸೆಲ್ 24, ನಾಯಕ ಶ್ರೇಯಸ್ 28, ರಿಂಕುಸಿಂಗ್ 5 ರನ್ ಹೊಡೆದರು.
ಪಂಜಾಬ್ ಪರ ಅರ್ಷದೀಪ್ 45ಕ್ಕೆ 2, ಹರ್ಷಲ್ ಪಟೇಲ್, ರಾಹುಲ್ ಚಾಹರ್, ಸ್ಯಾಮ್ ಕರ್ರನ್ ತಲಾ 1 ವಿಕೆಟ್ ಪಡೆದರು.