ಕೋಲ್ಕತಾದಲ್ಲಿ ಮತ್ತೊಬ್ಬ ಮಾಡೆಲ್ ಆತ್ಮಹತ್ಯೆ

ಕೋಲ್ಕತ್ತ(ಪಶ್ಚಿಮ ಬಂಗಾಳ), ಜು.18- ರಾಜ್ಯದಲ್ಲಿ ಮಾಡೆಲ್ ಗಳ ಸಾವಿನ ಸರಣಿ ಮುಂದುವರೆದಿದ್ದು ನಗರದಲ್ಲಿ ಮತ್ತೋರ್ವ ಮಾಡೆಲ್ ಟವಲ್ ಬಳಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮಾಡೆಲಿಂಗ್ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದ ಮತ್ತು ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದ ಪೂಜಾ(24) ತಾನು ವಾಸಿಸುತ್ತಿದ್ದ ಮನೆಯಲ್ಲೇ ಕುತ್ತಿಗೆಗೆ ಟವಲ್ ಸುತ್ತಿಕೊಂಡು ನೇಣಿಗೆ ಶರಣಾಗಿದ್ದಾರೆ.
ಆತ್ಮಹತ್ಯೆಗೂ‌ ದಿನ ಪೂಜಾ ಹೋಟೆಲ್ ಗೆ ಹೋಗಿದ್ದು ಅಲ್ಲಿಂದ ಬಂದ ನಂತರ ಮಲಗಿದ್ದಾರೆ. ಏಕಾಏಕಿ ಅವರಿಗೆ ಮಧ್ಯರಾತ್ರಿ ಕರೆ ಬಂದಿದೆ. ಈ ಕರೆಯನ್ನು ಸ್ವೀಕರಿಸಿದ ನಂತರ ಅವರು ರೂಮ್ ಗೆ ಹೋಗಿ ನೇಣಿಗೆ ಶರಣಾಗಿದ್ದಾರೆ .
ಈ ಸಾವಿಗೆ ಅವರ ಬಾಯ್ ಫ್ರೆಂಡ್ ಕಾರಣ ಎನ್ನುವುದು ಪೂಜಾಳ ಸಂಬಂಧಿಕರ ಆರೋಪವಾಗಿದೆ.ಪೂಜಾ ರೂಮ್ ಗೆ ಹೋದ ವಿಷಯ ತಿಳಿಯುತ್ತಿದ್ದಂತೆಯೇ ಹಲವರು ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದೇ ಇದ್ದಾಗ ಮನೆಗೆ ಬಂದು ಬಾಗಿಲು ತೆಗೆಯುವ ಪ್ರಯತ್ನ ಮಾಡಿದ್ದಾರೆ. ಒಳಗಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇರುವ ಕಾರಣಕ್ಕಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಗಿಲು ಒಡೆದು ನೋಡಿದಾಗ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪೂಜಾ ಅವರ ಮೃತದೇಹ ದೊರೆತಿದೆ ಎನ್ನಲಾಗುತ್ತಿದೆ. ಆದರೆ, ರೂಮ್ ನಲ್ಲಿ ಯಾವುದೇ ಡೆತ್ ನೋಟ್ ಮತ್ತು ಸಾವಿನ ಕುರುಹು ದೊರೆತಿಲ್ಲ ಎಂದು ತಿಳಿದು ಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.