ಕೋಲಿ ಸಮಾಜ ಎಸ್‍ಟಿಗೆ ಸೇರಿಸಲು ಆಗ್ರಹಿಸಿಮಾ. 20ಕ್ಕೆ ಕಲಬುರಗಿ ಚಲೋ – ಬೃಹತ ಪ್ರತಿಭಟನೆ

ಶಹಾಬಾದ:ಮಾ.14:ಸುಮಾರು 40 ವರ್ಷಗಳಿಂದ ಕೋಲಿ ಕಬ್ಬಲಿಗ ಸಮಾಜದ ಬೇಡಿಕೆಗಳು ಈಡೇರಿಸದ ಕೇಂದ್ರ ಸರ್ಕಾರದ ವಿರುದ್ಧ ಮಾರ್ಚ್ 20 ರಂದು ಕಲಬುರಗಿ ಚಲೋ ಎಂಬ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೋಲಿ ಕಬ್ಬಲಿಗೆ ಎಸ್‍ಟಿ ಹೋರಾಟ ಸಮಿತಿ ಅಧ್ಯಕ್ಷ ಲಚ್ಚಪ್ಪ ಜಮಾದಾರ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಎಸ್‍ಟಿ ಹೋರಾಟ ಸಮಿತಿ ವತಿಯಿಂದ ಕೋಲಿ ಕಬ್ಬಲಿಗೆ ಜಾತಿಗಳಿಗೆ ಎಸ್‍ಟಿಯಲ್ಲಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ “ಕಲಬುರಗಿ ಚಲೋ” ಬೃಹತ ಪ್ರತಿಭಟನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರದಿಂದ ನೇಮಕಗೊಂಡ ಆಯೋಗಗಳು ಈ ಸಮುದಾಯಗಳನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸಲು ಯೋಗ್ಯವಾಗಿದೆ ಎಂದು ಶಿಫಾರಸ್ಸು ಮಾಡಿ ಮೂರು ವರ್ಷಗಳು ಗತಿಸಿದರೂ ಇದುವರೆಗೂ ಬೇಡಿಕೆ ಈಡೇರಿಲ್ಲ ಎಂದು ಆರೋಪಿಸಿದರು. ಕೇಂದ್ರ ಸರಕಾರ ಚುನಾವಣೆ ಸಂದರ್ಭದಲ್ಲಿ ಕೋಲಿ ಸಮಾಜದ ಮತಗಳಿಗಾಗಿ ಕೋಲಿ ಸಮಾಜದ ಬಗ್ಗೆ ಕಾಳಜಿ ತೋರಿಸುತ್ತಾರೆ ಅವರಿಗೆ ನಿಜವಾದ ಕಾಳಜಿ ಇದ್ದರೆ ಕೋಲಿ ಸಮಾಜಕ್ಕೆ ಎಸ್‍ಟಿ ಪಟ್ಟಿಯಲ್ಲಿ ಸೇರಿಸಬೇಕಿತ್ತು. ಕೋಲಿ ಸಮಾಜವು ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ, ಸರಕಾರ ಮಾಜಿ ಮುಖ್ಯ ಸಚೇತಕ ದಿ.ವಿಠ್ಠಲ್ ಹೇರೂರು ಅವರು ತಮ್ಮ ಜೀವನ ಪೂರ್ತಿ ಎಸ್‍ಟಿ ಸೇರ್ಪಡೆಗಾಗಿ ಹೋರಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮುಖಂಡರು ಆಶ್ವಾಸನೆ ನೀಡಿ ಜಾರಿಕೊಳ್ಳುತ್ತಾರೆ. ಬದಲಾಗಿ ಘೋಷಣೆ ಮಾಡಿದ್ದನ್ನು ಪರಿಪೂರ್ಣವಾಗಿ ಮಾಡಬೇಕು ಎಂದು ಹೇಳಿದರು. ಮಾರ್ಚ್ 20 ರಂದು ಜಗತ್ ವೃತ್ತದಿಂದ ತಿಮ್ಮಾಪುರ ವೃತ್ತದಿಂದ ಡಿಸಿ ಕಛೇರಿಯವರೆಗೆ ನಡೆಯಲಿರುವ ಕಲಬುರಗಿ ಚಲೋ ಎಂಬ ಬೃಹತ ಪ್ರತಿಭಟನೆಗೆ ಕೋಲಿ ಕಬ್ಬಲಿಗೆ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಬೆಣ್ಣೂರಿನ ಪೂಜ್ಯರಾದ ಭರದ್ವಾಜ ಪೂಜ್ಯರು, ಕೋಲಿ ಸಮಾಜದ ತಾಲೂಕ ಅಧ್ಯಕ್ಷ ಶಿವಕುಮಾರ ತಳವಾರ, ದೇವಿಂದ್ರ ಕಾರೋಳ್ಳಿ, ಶಿವು ನಾಟೀಕಾರ, ತಿಪ್ಪಣ್ಣ ನಾಟೀಕಾರ, ಶರಣು ಶ್ರೀಪತಿ, ದೇವಿಂದ್ರ ಜಮಾದರ, ಲೋಹಿತ ಮಲಖೇಡ, ನಾಗರಾಜ ಯಡ್ರಾಮಿ, ಶರಣು ಹಲಕಟ್ಟಿ, ರಾಜು ಸಣಮೋ, ಶಿವುರಾಜ ನಾಟೀಕಾರ, ಸುಧೀರ ಕಿರಣಗಿ, ಭಾಗಪ್ಪ ಕೊಡಸಾ, ಮಹೇಶ ಯಲ್ಲೇರಿ, ಶಿವು ಬುರ್ಲಿ, ಇತರರು ಪಾಲ್ಗೊಂಡಿದರು.