ಕೋಲಿ ಸಮಾಜವನ್ನು ಪ.ಪಂಗಡಕ್ಕೆ ಸೇರಿಸಲು ಅಂಬಾಜಿರಾವ್ ಒತ್ತಾಯ


ರಾಯಚೂರು,ಮೇ.೨೯- ರಾಜ್ಯದಲ್ಲಿ ಸುಮಾರು ೩೦ ವರ್ಷ ದಿಂದ ಕೋಲಿ ಸಮಾಜವನ್ನು ರಾಜ್ಯದ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಸೇರಿಸಲು ಮನವಿ ಮಾಡಿ, ಕೇಂದ್ರ ಸರ್ಕಾರಕ್ಕೂ ಶಿಫಾರಸು ಮಾಡಿದೆ. ಮರು ಪರಿಶೀಲಿಸಲು ವಾಪಾಸು ಕಳು ಹಿಸಿದ್ದು, ಸರ್ಕಾರ ಕೂಡಲೇ ಎಚ್ಚೆತ್ತು ಕೊಂಡು ಪರಿಶೀಲನೆ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು
ಬಿಜೆಪಿ ಮುಖಂಡ ಅಂಬಾಜಿರಾವ್ ಮೈದಾರ್ ಕರ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕೋಲಿ ಸಮಾಜ ಅತ್ಯಂತ ಹಿಂದುಳಿದ ಜನಾಂಗವಾಗಿದ್ದು,ಅನೇಕ ವರ್ಷಗಳಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಸೌಲಭ್ಯಗಳನ್ನು ಒದಗಿಸಿಕೊಡ ಬೇಕು ಎಂದು ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರವು ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಬಾರ ದೆಂದು ತಿರಸ್ಕರಿಸಿದೆ. ಕೊಲಿ ಅಥವಾ ಗಂಗಾಮತ ಸಮುದಾಯದ ಜಾತಿಯ ಲಕ್ಷಣಗಳಿವೆ ಪರಿಶಿಷ್ಟ ಪಂಗಡದ ಲಕ್ಷಣಗಳಿಲ್ಲ,ಪ್ರವರ್ಗ ೧ ರಲ್ಲಿ ಕಂಡು ಬರುತ್ತದೆ.ಈ ಮುಂಚೆ ಕೋಲಿ ಸಮಾಜವು ಹಿಂದುಳಿದ ಜಾತಿಗಳ ಪಟ್ಟಿಯಲ್ಲಿತ್ತು,ಜಾತಿ ಲಕ್ಷಣಗಳಿರುವ ಸಮುದಾಯವನ್ನು ಪಂಗಡಕ್ಕೆ ಸೇರಿಸಲು ಅವಕಾಶವಿರುವುದಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಹೇಳಿತ್ತು ಎಂದು ತಿಳಿಸಿದರು.
೩೭ ಪರ್ಯಾಯ ಪದಗಳಲ್ಲಿ ಕೊಲಿ ಸಮುದಾಯಕ್ಕೆ ಇರುವ ಇನ್ನೊಂದು ಹೆಸರು ಮೋಗೆರ್ ಈ ಮೋಗೆರ್ ಜಾತಿಯು ಈಗಾಗಲೆ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯ ಪಟ್ಟಯಲ್ಲಿ ಕ್ರಮ ಸಂಖ್ಯೆ ೭೮ ರಲ್ಲಿ ಕಂಡು ಬರುತ್ತದೆ. ಕೂಡಲೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಆದೇಶಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಘವೇಂದ್ರ, ಸಾಧಿಕ್, ನವೀನ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.