ಕೋಲಿ ಸಮಾಜದ ಹೋರಾಟ ಯಶಸ್ವಿಗೆ ಮನವಿ

ಚಿಂಚೋಳಿ,ಸೆ.15- ತಾಲೂಕಿನ ಕೋಲಿ ಸಮಾಜದ ವತಿಯಿಂದ ಕೈಗೊಂಡಿರುವ ಎಸ.ಟಿ ಹೋರಾಟದ ಕುರಿತು ಪೂರ್ವಭಾವಿ ಸಭೆ ಸೇರಲಾಯಿತು. ಸಭೆಯಲ್ಲಿ ಇದೇ ಸೆಪ್ಟೆಂಬರ್ 16 ನೇ ತಾರೀಖು ಕಲಬುರ್ಗಿಯಲ್ಲಿ ಕೋಲಿ, ಕಬ್ಬಲಿಗ ಎಸ್.ಟಿ ಹೋರಾಟ ಸಮಿತಿ ವತಿಯಿಂದ ಕೋಲಿ ಸಮಾಜವನ್ನು ಎಸ್.ಟಿ ಗೆ ಸೇರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯನ್ನು ಯಶಸ್ವಿಗೊಳಿಸುವ ಕುರಿತು ಚರ್ಚಿಸಲಾಯಿತು ಪ್ರತಿಭಟನೆಯಲ್ಲಿ ಚಿಂಚೋಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಲು ನಿರ್ಧರಿಸಲಾತು.
ಚಿಂಚೋಳಿ ತಾಲೂಕಿನ ಪ್ರತಿ ಗ್ರಾಮದಿಂದ ಕೋಲಿ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕೋಲಿ, ಕಬ್ಬಲಿಗ ಎಸ್.ಟಿಗಾಗಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಚಿಂಚೋಳಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷರಾದ ಗಿರಿರಾಜ ನಾಟೀಕಾರ, ಅವರು ಮನವಿ ಮಾಡಿದ್ದಾರೆ.