ಕೋಲಿಸಮಾಜ ಎಸ್ಟಿಗೆ ಸೇರುವದು ಯಾವಾಗ?

ಚಿಂಚೋಳಿ ಮೇ 3: ಚಿಂಚೋಳಿ ತಾಲೂಕಿನ ಉಪ ಚುನಾವಣೆ ಸಂದರ್ಭದಲ್ಲಿ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಅವರು ಚಿಂಚೋಳಿಗೆ ಆಗಮಿಸಿ ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುತ್ತೇನೆ ಎಂದು ಎರಡು ವರ್ಷ ಆಯ್ತು ಇನ್ನು ಸೇರಿಸಿಲ್ಲ ಕೋಲಿಸಮಾಜ ಎಸ್ಟಿಗೆ ಸೇರುವದು ಯಾವಾಗ ? ಎಂದು ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅನೀಲಕುಮಾರ್ ಜಮಾದಾರ್ ಅವರು ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
ಚಿಂಚೋಳಿ ತಾಲೂಕ ತಾಲೂಕ ಪಂಚಾಯತ ಗಳಲ್ಲಿ ಕೋಲಿ ಸಮಾಜ ಕೆಟಗೇರಿ ಇಲ್ಲದಂತಾಗಿದೆ ಚುನಾವಣಾ ಆಯೋಗವು ಮತ್ತು ಬಿಜೆಪಿಯ ಶಾಸಕರು ಸದಸ್ಯರು ಕೈವಾಡ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ. ಅವರು ಚುನಾವಣೆ ಸಂದರ್ಭದಲ್ಲಿ ಬಂದು ಬುಡುಬುಡಿಕೆ ಅಂತೆ ಮಾತನಾಡಿ ಸಮಾಜದ ಜನರಿಗೆ ಮರಳು ಮಾಡುತ್ತಿದ್ದಾರೆ ಈಗಾದರೂ ಕೂಡ ನಮ್ಮ ಕೋಲಿ ಸಮಾಜದವರು ಎಚ್ಚೆತ್ತುಕೊಂಡು ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಚಿಂಚೋಳಿಯ ಶಾಸಕರು ಅಭಿವೃದ್ಧಿಯಲ್ಲಿ ಕೈಜೋಡಿಸಿ ಕೆಲಸವನ್ನು ಮಾಡಬೇಕು. ಆದರೆ ಹಿಂದುಳಿದ ವರ್ಗಕ್ಕೆ ತುಳಿಯುವ ಕೆಲಸ ಮಾಡಬಾರದು ಹಾಗೂ ಕೋಲಿ ಸಮಾಜದ ಎಲ್ಲಾ ಪಕ್ಷದಲ್ಲಿ ಇರುವ ಮುಖಂಡರು ಪಕ್ಷಬೇಧ ಎಲ್ಲ ಮರೆತು ಎಲ್ಲರೂ ಒಗ್ಗೂಡಿ ಕೋಲಿ ಸಮಾಜ ಎಸ್ಟಿಗೆ ಸೇರಿಸು ವರೆಗೂ ಹೋರಾಟ ಮಾಡೋಣ ಹಾಗೂ ಚಿಂಚೋಳಿ ತಾಲೂಕ ಪಂಚಾಯತ ಚುನಾವಣೆಯ ಚುನಾವಣಾ ಆಯೋಗ ತಾಲೂಕ ಪಂಚಾಯತ್ ಮೀಸಲಾತಿಯನ್ನು ಮರುಪರಿಶೀಲನೆ ಮಾಡಿ ಸರಿಪಡಿಸಬೇಕೆಂದು ಎಂದು ಅನೀಲಕುಮಾರ್ ಜಮಾದಾರ್ ಅವರು ಆಗ್ರಹಿಸಿದ್ದಾರೆ