ಕೋಲಾರ ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ಕೋಟೆ ಮಧುಸೂದನ್ ಆರ್ ನೇಮಕ

ಕೋಲಾರ,ಏ,೨-ಬೆಂಗಳೂರಿನ ಟೌನ್ ಹಾಲ್‌ನಲ್ಲಿ ನಡೆದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಜಾಗೃತಿ ಸಮಾವೇಶದಲ್ಲಿ ಯುವಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಬೆಳ್ಳೂರು ತಿರುಮಲೇಶ್ ಮತ್ತು ಕೋಲಾರ ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ಕೋಟೆ ಮಧುಸೂದನ್ ಆರ್ ಅವರನ್ನು ಪ್ರಸನ್ನಾನಂದಪುರಿ ಸ್ವಾಮೀಜಿಯವರ ಸಮ್ಮುಖದಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷರಾದ ಟಿ.ಆರ್.ತುಳಸಿರಾಮ್ ರವರು ನೇಮಕ ಮಾಡಿದರು.
ಪದಾಧಿಕಾರಿಗಳ ನೇಮಕ ಮಾಡಿ ಮಾತನಾಡಿದ ಅವರು, ಅವಕಾಶ ವಂಚಿತ ಸಮುದಾಯದ ಯುವಕರನ್ನು ಗುರುತಿಸಿ ಅವರನ್ನು ಮುಖ್ಯ ಭೂಮಿಕೆಗೆ ತರುವುದು ನಮ್ಮ ಜವಾಬ್ದಾರಿಯಗಬೇಕು, ಈ ನಿಟ್ಟಿನಲ್ಲಿ ಸಮುದಾಯದ ಯುವಕರನ್ನು ಸಂಘಟಿಸಿ ಮಹಾಸಭಾದ ಯುವ ಘಟಕವನ್ನು ಮತ್ತಷ್ಟು ಬಲಪಡಿಸಬೇಕೆಂದು ಕರೆ ನೀಡಿದರು.
ಈ ಸಂಧರ್ಭದಲ್ಲಿ ಕೋಲಾರ ಜಿಲ್ಲಾ ವಾಲ್ಮೀಕಿ ನಾಯಕ ಸಮುದಾಯದ ಜಿಲ್ಲಾ ಮುಖಂಡರಾದ ಹೆಚ್.ನರಸಿಂಹಯ್ಯ, ಕುವೆಂಪು ನಗರದ ಆನಂದ ಕುಮಾರ್, ಕೋಟೆ ಶ್ರೀನಿವಾಸ್, ಕುರುಗಲ್ ಗಿರೀಶ್, ನವೀನ್, ಮುನಿರಾಜು, ಐತರಾಸನಹಳ್ಳಿ ನರಸಿಂಹಯ್ಯ, ವೇಣು, ರಂಗನಾಥ್, ಬೆಳ್ಳೂರು ಅಂಬರೀಶ್, ಕುಡುವನಹಳ್ಳಿ ಅಂಜಿ ಮತ್ತು ಸಮುದಾಯದ ಯುವ ಮುಖಂಡರು ಹಾಜರಿದ್ದರು.