ಕೋಲಾರ ಮಂಡಲ ಕಾರ್ಯಕಾರಣಿ ಸಭೆ

ಕೋಲಾರಏ.೩:ಕೋಲಾರ ಮಂಡಲ ಬಿಜಿಪಿ ರೈತ ಮೋರ್ಚಾ ಅಧ್ಯಕ್ಷರಾದ ಅಶ್ವತಗೌಡ ರವರ ಅಧ್ಯಕ್ಷತೆಯಲ್ಲಿ ಕೋಲಾರ ಮಂಡಲ ಬಿಜಿಪಿ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಕೋಲಾರ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಭೆಗೆ ಮುಖ್ಯ ಅತಿಥಿಯಾಗಿ ರಾಜ್ಯ ಬಿಜಿಪಿ ರೈತ ಮೋರ್ಚಾ ಉಪಾಧ್ಯಕ್ಷ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಲೋಕೇಶ ಗೌಡರನ್ನು ಸ್ವಾಗತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ದೇಶದಲ್ಲಿ ಬಿಜಿಪಿ ರೈತ ಮೋರ್ಚಾ ಪದಾಧಿಕಾರಿಗಳು ೧೦ ಕೋಟೆ ಇದ್ದಾರೆ. ಕೇಂದ್ರದ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಗಳು ರೈತರ ಪರವಾಗಿ ರೈತರ ಅರ್ಥಿಕ ಅಭಿವೃದ್ಧಿಗೆ ವಿಶೇಷ ಕಾಯಿದೆಗಳು ಮತ್ತು ಮಸೂದೆ ಗಳು ಜಾರಿಗೆ ತರಲಾಗಿದೆ. ನಮ್ಮ ದೇಶದ ಡೈನಾಮಿಕ್ ಲೀಡರ್ ಮತ್ತು ಜನಪ್ರಿಯ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರನ್ನು ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತ ಪಡಿಸುವ ಸಾಧನಗಳು ಮತ್ತು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು. ಇಂತಹ ಸಮಯದಲ್ಲಿ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಜವಾಬ್ದಾರಿಗಳನ್ನು ಅರಿತುಕೊಂಡ ಕೇಂದ್ರದ ಮತ್ತು ರಾಜ್ಯ ಸರ್ಕಾರಗಳ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಜನ ಸಾಮಾನ್ಯರಿಗೂ ತಲುಪಲು ಸಹಕಾರ ನೀಡಬೇಕಾಗುತ್ತದೆ ಎಂದು ತಿಳಿಸಿದರು. ಎಲ್ಲಾ ಪದಾಧಿಕಾರಿಗಳು ಒಂದೇ ಕುಟುಂಬದ ಸದಸ್ಯ ರಂತೆ ಪ್ರೀತಿ ವಿಶ್ವಾಸ ದಿಂದ ಸಂಘಟಿತರಾಗಬೇಕು. ಪ್ರತಿಯೊಂದು ಇಲಾಖೆಯಲ್ಲಿ ಅಧಿಕಾರಿಗಳು ಸಂಪರ್ಕ ಇಟ್ಟುಕೊಂಡು ಜನರ ಸೇವೆ ಮಾಡಿ ಎಂದರು.ರಾಜ್ಯ ಬಿಜಿಪಿ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಹಾಗೂ ಕೋಲಾರ ಜಿಲ್ಲಾ ಬಿಜಿಪಿ ರೈತ ಮೋರ್ಚಾ ಉಸ್ತುವಾರಿ ಜಯರಾಮರೆಡ್ಡಿ ಮಾತನಾಡಿ, ಇಂದು ಕೋಲಾರ ಜಿಲ್ಲೆಯಲ್ಲಿ ಬಿಜಿಪಿ ಪಕ್ಷದ ರೈತ ಮೋರ್ಚಾ ಪದಾಧಿಕಾರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳನ್ನು ಜನ ಸಾಮಾನ್ಯರಿಗೆ ಅರಿವು ಮೂಡಿಸುವ ಮೂಲಕ ರೈತರಿಗೆ ವಿವಿಧ ತಂತ್ರಜ್ಞಾನದ ಕೃಷಿ ಮಾಡಿಕೊಂಡ ಅರ್ಥಿಕ ಅಭಿವೃದ್ದಿಗೆ ಸಹಾಯವಾಗುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಈ ಶಿವಣ್ಣ, ನರೇಶ, ಉಪಾಧ್ಯಕ್ಷ ಹೆಚ್ ಶ್ರೀನಿವಾಸ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಬೈಚ್ಚಪ್ಪ, ತಾಲ್ಲೂಕು ಉಪಾಧ್ಯಕ್ಷ ಶಿವರುದ್ರಪ್ಪ, ಸಿದ್ದನಂಜಪ್ಪ, ಬೆಗ್ಲಿಹೂಸಹಳ್ಳಿ ಮಂಜುನಾಥಗೌಡ, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಕಾರ್ಯದರ್ಶಿಗಳಾದ ವಿಜಯಕುಮಾರ್, ಲಕ್ಷ್ಮಣ, ರಮೇಶ, ಈಶ್ವರಗೌಡ, ದ್ಯಾವರಪ್ಪ, ಕೃಷ್ಣಾಪುರ ನಾಗರಾಜ, ಬೆಟ್ಟಹೂಸಪುರ ಶ್ರೀನಿವಾಸ, ಕುರಗಲ್ ಬೈರೇಗೌಡ, ಮುದುವತಿ ವೆಂಕಟರಾಮಪ್ಪ, ಪಾರಿಹೋಸಹಳ್ಳಿ ವಿಶ್ವನಾಥಗೌಡ ಉಪಸ್ಥಿತರಿದ್ದರು.
ತಾಲೂಕು ಪ್ರಧಾನ ಕಾರ್ಯದರ್ಶಿ ರಾಮಾಪುರ ಅಶ್ವತ ಸ್ವಾಗತಿಸಿ, ಉಪಾಧ್ಯಕ್ಷ ಪ್ರಭಾಕರ್ ವಂದಿಸಿದರು.