ಕೋಲಾರ ನಗರ ಬಂದ್ ಯಶಸ್ವಿ

ಕೋಲಾರ,ನ.೧೯: ದತ್ತಪೀಠಕ್ಕೆ ತೆರೆಳುತ್ತಿದ್ದ ಮಾಲಾಧಾರಿಗಳ ಬಸ್ ಮೇಲೆ ಕಿಡಿಗೇಡಿಗಳ ಕಲ್ಲು ತೂರಾಟ ನಡೆಸಿದ್ದ ಪ್ರಕರಣವನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಕೋಲಾರ ನಗರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.


ಹೌದು ಕಳೆದ ಶನಿವಾರ ರಾತ್ರಿ ಹನ್ನೊಂದು ಗಂಟೆಗೆ ಚಿಕ್ಕಮಗಳೂರಿನ ದತ್ತಪೀಠಕ್ಕೆ ೨೬ ಜನ ದತ್ತ ಮಾಲಾದಾರಿಗಳು ಮಿನಿ ಬಸ್ ವೊಂದರಲ್ಲಿ ಹೊರಟಿದ್ದರು. ಈ ವೇಳೆ ಕೋಲಾರ ನಗರದ ಕ್ಲಾಕ್ ಟವರ್ ಬಳಿ ಕೆಲ ಕೀಡಿಗೇಡಿಗಳು ಬಸ್ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಘಟನೆಯಲ್ಲಿ ಮೂರು ಮಂದಿ ಮಾಲಾದಾರಿಗಳು ಗಾಯಗೊಂಡು ಆಸ್ಪತ್ರೆ ಗೆ ಸೇರಿದ್ದರು. ಪ್ರಕರಣವನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಕೆರೆ ನೀಡಿದ್ದ ಬಂದ್ ಗೆ ಕೋಲಾರದಲ್ಲಿ ವ್ಯಾಪಕ ಬೆಂಬಲ ದೊರಕಿದ್ದು, ಸಾರ್ವಜನಿಕರು ಅಂಗಡಿ ಮುಗಟ್ಟುಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ನೀಡಿದರು. ಕಳೆದ ರಾತ್ರಿಯಿಂದ ಬೆಂಬಿಡದೆ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಹಿಂದೂಪರ ಸಂಘಟನೆಗಳು ಬೈಕ್ ರ್ಯಾಲಿ ನಡೆಸಿ ನಂತರ ನಗರದಾದ್ಯಂತ ಬೃಹತ್ ಪ್ರತಿಭಟನೆ ರ್ಯಾಲಿ ನಡೆಸಿ ಎಂಜಿ ರಸ್ತೆಯಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಿಂದೂ ಜಾಗೃತಿ ವೇದಿಕೆಯ ಉಲ್ಲಾಸ್ ಮತ್ತು ಸಂಸದ ಎಸ್‌ಮುನಿಸ್ವಾಮಿ ಭಾಗವಹಿಸಿ ರಾಜ್ಯದಲ್ಲಿ ಹಿಂದುಗಳ ಹತ್ಯೆಯನ್ನು ಮುಸ್ಲಿಂ ಸಂಘಟನೆಗಳು ವ್ಯವಸ್ಥಿತವಾಗಿ ಮಾಡುತ್ತಿದ್ದು ಹಿಂದುಗಳು ಹೆಚ್ಚತ್ತುಕೊಳ್ಳಬೇಕಾಗಿದೆ ಎಂದರು.
ಕೋಲಾರ ಬಂದ್ ಕಾರ್ಯಕ್ರಮಕ್ಕೆ ಆಗಮಿಸಲು ಬಂದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋಸ್ ಮುತಾಲಿಕ್ ಅವರನ್ನು ಕೋಲಾರದ ಗಡಿಯಲ್ಲಿ ತಡೆದು ವಶಕ್ಕೆ ಪಡೆಯಲಾಯಿತು.ಮುತಾಲಿಕ್ ಅವರಿಗೆ ಕೋಲಾರ ಪ್ರವೇಶಕ್ಕೆ ನಿರ್ಭಂದ ಹೇರಲಾಗಿತ್ತು. ಅದರೂ ಅವರು ಕೋಲಾರಕ್ಕೆ ಬರಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದಾಗ ಸ್ಥಳದಲ್ಲಿ ಬಿಗಿವಿನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಮಾತನಾಡಿದ ಅವರು ಬಿಜೆಪಿ ಸರ್ಕಾರ ಇಂದು ನಡೆದುಕೊಳ್ಳುತ್ತಿರುವ ಕ್ರಮ ಸರಿಯಿಲ್ಲ, ಹಿಂದು ಸಮಾಜದವರು ಮೇಲೆ ದೌರ್ಜನ್ಯ ಮಾಡಿದವರ ಮೇಲೆ ಪ್ರತಿಭಟನೆ ಮಾಡಲು ಸಹ ಸರ್ಕಾರ ಅವಕಾಶ ಮಾಡಿಕೊಡದ ಬಗ್ಗೆ ನೋವು ಸಿಟ್ಟು ಆಗುತ್ತಿದೆ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇಡೀ ಹಿಂದೂ ಸಮಾಜ ಎಚ್ಚೇತ್ತುಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.
ಒಟ್ಟಾರೆ ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದ ಕೋಲಾರ ಬಂದ್ ಶಾಂತಿಯುತವಾಗಿ ಮುಗಿದಿದ್ದು,ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಬಿಗಿಬಂದೋಬಸ್ತ್ ವ್ಯವಸ್ಥೆ ಮಾಡಿದ ಪರಿಣಾಮ ಯಾವುದೇ ಅಹಿತಕರ ಘಟನೆ ಇಲ್ಲದೆ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.