ಕೋಲಾರ ನಗರಸಭೆಯ ಉಳಿತಾಯ ಬಜೆಟ್ ಮಂಡನೆ

ಕೋಲಾರ,ಮಾ,೧೬- ನಗರಸಭೆಯ ೨೦೨೩-೨೪ನೇ ಸಾಲಿನ ಅಯ್ಯ-ವ್ಯಯದಲ್ಲಿ ರೂ ೪,೯೭,೨೪,೪೬೦ ಗಳ ಉಳಿತಾಯದ ಬಡ್ಜೆಟ್‌ನ್ನು ನಗರಸಭೆ ಅಧ್ಯಕ್ಷೆ ಶ್ವೇತಶಬರೀಶ್ ಮಂಡಿಸಿದರು.
ನಗರಸಭೆ ಕಾರ್ಯಲಯದಲ್ಲಿ ಮಂಗಳವಾರ ಆಯೋಜಿಸಿದ್ದ ನಗರಸಭೆಯ ೨೦೨೩-೨೪ನೇ ಸಲಾಇನ ಆಯ-ವ್ಯಯ ಅಂದಾಜು ಪಟ್ಟಿಯನ್ನು ಕಾಯ್ದೆ-೨೦೦೬ ಪ್ರಕರಣ ರೂಲ್ ೧೩೨(೨) ಒರಕಾರ ಸಿದ್ದಪಡೆಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಮಾರ್ಚ್ ೩೧ಕ್ಕೆ ಅಖೈರು ಶಿಲ್ಕು ರೂ ೩೮,೧೯,೧೭,೪೬೦ ಗಳಾಗಿದ್ದು, ನಿರೀಕ್ಷಿತ ಜಮಾ ರೂ,೮೧,೨೨,೨೯,೦೦೦ ಸೇರಿದಂತೆ ಒಟ್ಟು ಅದಾಯ ೧೧೯,೪೧,೪೬,೪೬೦ ಗಳಾಗಿದ್ದು ನಿರೀಕ್ಷಿತ ಖರ್ಚು ರೂ ೧೧೪,೪೪,೨೨,೦೦೦ ಗಳಾಗಿದ್ದು ನಿರೀಕ್ಷಿತ ಉಳಿತಾಯ ರೂ ೪,೯೭,೨೪,೪೬೦ ಗಳಾಗಿದೆ ಎಂದರು.
ಅದಾಯ ವಿವರ –
ನಗರಸಭೆಯ ಅದಾಯದ ನಿರೀಕ್ಷೆಯ ಪ್ರಕಾರ ಆಸ್ತಿ ತೆರಿಗೆ ರೂ ೮,೯೦,೬೮,೦೦೦, ನೀರಿನ ಬಳಕೆದಾರರ ಶುಲ್ಕ ರೂ ೯೯,೯೮ ಲಕ್ಷ ಘನತ್ಯಾಜ್ಯ ನಿರ್ವಾಹಣೆ ಶುಲ್ಕ ರೂ ೭೦ ಲಕ್ಷ ಮಳಿಗೆಗಳ ಬಾಡಿಗೆ ರೂ ೬೮ ಲಕ್ಷ ಕಟ್ಟಡಗಳ ಪರವಾನಗಿ ಶುಲ್ಕ ರೂ ೬೦ ಲಕ್ಷ ಲೈಸನ್ಸ್ ಫೀಯಿಂದ ರೂ ೩೮ ಲಕ್ಷ ಒಳಚರಂಡಿ ಬಳಕೆ ಹಾಗೂ ಸಂರ್ಪಕ ಶುಲ್ಕ ರೂ ೪೭ ಲಕ್ಷ ಮಾರುಕಟ್ಟೆ ಬಸ್ ನಿಲ್ದಾಣ ಮತ್ತು ಸಂತೆ ಶುಲ್ಕ ರೂ ೧೫,೭೫ ಲಕ್ಷ, ಜಾಹಿರಾತು ತೆರಿಗೆ ರೂ ೭,೬೮ ಲಕ್ಷ ಹಾಗೂ ಇತರೆ ವಸೂಲಿ ರೂ,೩.೮೯.೭೫.೦೦೦ಗಳನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು,
ಸರ್ಕಾರದ ಅನುದಾನದ ನಿರೀಕ್ಷೆ ಪ್ರಕಾರ ಎಸ್.ಎಫ್.ಸಿ. ಅನುದಾನ ರಾಜ್ಯ ಹಣಕಾಸು ಆಯೋಗದ ಅನುದಾನ ರೂ ೨.೫೯ ಕೋಟಿ , ವೇತನ ಅನುದಾನ ರೂ ೫,೨೨ಕೋಟಿ, ವಿದ್ಯುತ್ ಶಕ್ತಿ ಅನುದಾನ ರೂ ೨೧,೫೮ ಕೋಟಿ, ಶಾಸಕರ ಅನುದಾನ ರೂ ೫ಲಕ್ಷ , ಸ್ವಚ್ಚ ಭಾರತ್ ಮಿಷನ್ ಅನುದಾನ ರೂ ೨೫ ಲಕ್ಷ, ಎಸ್.ಎಫ್.ಸಿ. ಬರ ಪರಿಹಾರ ಅನುದಾನ ರೂ ೧೫ ಲಕ್ಷ, ೧೫ನೇ ಹಣಕಾಸು ಯೋಜನೆ ಅನುದಾನ ರೂ ೫,೭೧ ಕೋಟಿ,ಅಮೃತ ಯೋಜನೆ ಅನುದಾನ ರೂ ೭,೮೮ ಕೋಟಿ, ಜಿಲ್ಲಾಧಿಕಾರಿ ಸಿ.ಆರ್.ಎಫ್. ಅನುದಾನ ೨೦ ಲಕ್ಷ, ಪೌರಕಾರ್ಮಿಕರ ಆಶ್ರಯ ಯೋಜನೆ ರೂ ೨,೭೪,೬೦,೦೦೦,ಎಸ್.ಎಫ್.ಸಿ. ವಿಶೇಷ ಅನುದಾನ ರೂ,೪,೬೬,೬೫,೦೦೦, ಬಂಡವಾಳ ಆದಾಯ ರೂ ೪ ಕೋಟಿ, ಶೇ ೨೪,೧೦ %,೭.೨೫%, ೫%,೧%ರ ಅಭಿವೃದ್ದಿಗಾಗಿ ರೂ ೭೭ ಲಕ್ಷ,ಅಸಾಮಾನ್ಯ ಸಾಲ ರೂ ೮,೪೬,೭೦,೦೦೦ ಹಾಗೂ ಪ್ರಾರಂಭಿಕ ಶಿಲ್ಕು ರೂ ೩೮, ೧೯,೧೭,೪೬೦ ಸೇರಿದಂತೆ ಒಟ್ಟು ಅದಾಯ ರೂ ೧೧೯,೪೧,೪೬,೪೬೦ ಗಳ ನಿರೀಕ್ಷಿತ ಅದಾಯವಾಗಿದೆ ಎಂದು ತಿಳಿಸಿದರು,
ಖರ್ಚು ವಿವರ-
ನಗರದ ೩೫ ವಾರ್ಡಗಳ ನೈರ್ಮಲೀಕರಣ ರೂ ೫,೩೫ ಕೋಟಿ, ರಸ್ತೆ ದುರಸ್ತಿ ಹಾಗೂ ರಸ್ತೆ ಮೆಟಿಲಿಂಗ್ ರೂ ೫೦ ಲಕ್ಷ, ಬೀದಿ ದೀಪ ನಿರ್ವಹಣೆ ಹಾಗೂ ವಿದ್ಯುತ್ ಬಿಲ್ ರೂ ೭,೫೨ ಕೋಟಿ,ನೀರು ಸರಬರಾಜು ವಿದ್ಯುತ್ ಬಿಲ್ ರೂ ೧೪.೦೬ ಕೋಟಿ, ಬೀದಿ ದೀಪ ನಿರ್ವಾಹಣೆ ೧.೨೦ ಕೋಟಿ, ಪೈಪ್ ಲೈನ್ ಮತ್ತು ಪಂಪು ಮೋಟರ್ ದುರಸ್ತಿ ರೂ ೫.೫೦ ಕೋಟಿ, ಘನ ತ್ಯಾಜ್ಯ ವಸ್ತುಗಳ ಸಲಕರಣೆಗಳು ಖರೀದಿ ರೂ ೩೫ ಲಕ್ಷ, ಜಮೀನು ಖರೀದಿ ರೂ ೧೦ ಕೋಟಿ, ಕಟ್ಟಡ ನಿರ್ಮಾಣ ರೂ ೧ ಕೋಟಿ,ವಾಹನ ಖರೀದಿ ರೂ ೭೦ ಲಕ್ಷ, ಹೊಸ ರಸ್ತೆ ನಿರ್ಮಾಣ ೩.೦೩,೪೩,೦೦೦, ಹೊಸ ಚರಂಡಿ ನಿರ್ಮಾಣ ರೂ ೭,೪೯ ಕೋಟಿ ಗಳಾಗಿದೆ ಎಂದು ಹೇಳಿದರು,
ಬೀದಿ ದೀಪ ಖರೀದಿಗೆ ರೂ ೮೪,೩೫ ಲಕ್ಷ, ಖಸಾಯಿ ಖಾನೆ ನಿರ್ಮಾಣಕ್ಕಾಗಿ ೩೦ ಲಕ್ಷ ರೂ, ವೇತನ ಪಾವತಿಗೆ ೮.೦೮ ಕೋಟಿ, ಹೊಸ ಬೋರ್ ವೆಲ್ ಕೊರೆಯುವುದು ರೂ ೧,೦೪,೯೪,೦೦೦, ಹೊಸ ಪಂಪ್ ಸೆಟ್ ಖರೀದಿ ರೂ ೩.೩೭,೦೬,೦೦೦, ಹೊಸ ಪೈಪ್ ಲೈನ್ ರೂ ೯೬,೬೬,೦೦೦, ಒಳಚರಂಡಿ ಸಂರ್ಪಕ ರೂ ೫೦,೦೯ ಲಕ್ಷ, ಪಾರ್ಕ್ ಅಭಿವೃದ್ದಿ ಮತ್ತು ಅರಣೀಕರಣ ರೂ.೧,೨೬,೭೪,೦೦೦, ಮಾರುಕಟ್ಟೆ ನಿರ್ಮಾಣ ರೂ ೫ ಕೋಟಿ, ಇತರೆ ವೆಚ್ಚಗಳು ೮,೬೪ ರೂ ಕೋಟಿ, ಇತರೆ ಬಂಡವಾಳ ವೆಚ್ಚಗಳು ರೂ ೧೧,೮೩,೮೯,೦೦೦,ಪೌರ ಕಾರ್ಮಿಕರ ಗೃಹ ಬಾಗ್ಯ ಯೋಜನೆ ೧,೭೪,೬೦,೦೦೦, ಅಸಮಾನ್ಯ ಸಾಲ ಮತ್ತು ಅಮಾನತ ಖಾತೆ ೧೨,೧೭,೭೦,೦೦೦, ಹಾಗೂ ಶೇ ೨೪,೧೦%,೭,೨೫%,೫%, ೧%ರ ಅಭಿವೃದ್ದಿ, ರೂ ೧,೯೫,೭೬,೦೦೦ ಗಳು ಸೇರಿದಂತೆ ಒಟ್ಟು ವೆಚ್ಚ ರೂ ೧೧೪,೪೪,೨೨,೦೦೦ ಗಳಾಗಿದ್ದು, ಉಳಿತಾಯ ರೂ ೪,೯೭,೨೪,೪೬೦ ಗಳಾಗಿದೆ ಎಂದು ವಿವರಿಸಿದರು,
ನಗರಸಭೆ ಸದಸ್ಯರಾದ ಅಪ್ಸರ್, ಪ್ರಸಾದ್ ಬಾಬು ಮುಂತಾದವರು ಮಾತನಾಡಿ ನಗರಸಭೆಯ ಇತಿಹಾಸದಲ್ಲಿ ಪ್ರಪ್ರಥಮವಾಗಿ ೪ ಕೋಟಿ ಉಳಿತಾಯ ಬಜೆಟ್ ಮಂಡಿಸಿದ ಮಹಿಳಾ ಅಧ್ಯಕ್ಷರಾದ ಶ್ವೇತಾ ಶಬರೀಶ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.