ಕೋಲಾರ ತಾಲ್ಲೂಕು ಕಛೇರಿಯಲ್ಲಿ ಅಧಿಕಾರಿಗಳೇ ಕಾಣೆ

ಕೋಲಾರ,ಮೇ,೨೮- ಕೋಲಾರ ತಾಲ್ಲೂಕು ಕಛೇರಿಗೆ ತಮ್ಮ ಸಮಸ್ಯೆಯನ್ನು ಕೇಳಲು ಹೋದ ನಾಗರೀಕರು ಖಾಲಿ ಕುರ್ಚಿಗಳನ್ನು ದರ್ಶನ ಮಾಡಿಕೊಂಡು ಮನೆಗಳಿಗೆ ವಾಪಸ್ಸಾಗುತ್ತಿದ್ದಾರೆ.
ಅಟೆಂಡರ್‌ಗಳನ್ನು ಕೇಳಿದರೆ ಡಿ.ಸಿ.,… ಎ.ಸಿ….. ಕಛೇರಿಗಳಿಗೆ ಹೋಗಿದ್ದಾರೆ ಎಂದು ಹೇಳುತ್ತಾರೆ. ಸುಮಾರು ಮೂರು ತಿಂಗಳಿಂದ ಜನ ಸಾಮಾನ್ಯರ ಕೆಲಸಗಳು ಯಾವುದೂ ತಾಲ್ಲೂಕು ಕಛೇರಿಯಲ್ಲಿ ಕಾರ್ಯಗತಗೊಳ್ಳುತ್ತಿಲ್ಲ.
ಸಾರ್ವಜನಿಕರು ತಾಲ್ಲೂಕು ಕಛೇರಿಯ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಚುನಾವಣಾ ಕೆಲಸಗಳನ್ನು ನಿರ್ವಹಿಸುತ್ತಿರುವುದಾಗಿ ಸಬೂಬು ಹೇಳುತ್ತಾರೆ. ಹಾಗಾದರೆ ಎಷ್ಟು ಮಂದಿ ಚುನವಣಾ ಕೆಲಸ ಮಾಡಿದ್ದಾರೆ ? ಎಷ್ಟು ಮಂದಿಯನ್ನು ಸಾರ್ವಜನಿಕರ ಕೆಲಸಗಳಲ್ಲಿ ನಿಯೋಜಿಸಿದ್ದಾರೆ ? ಎಂಬುದನ್ನು ಜಿಲ್ಲಾಧಿಕಾರಿಗಳೇ ತಿಳಿಸಬೇಕು ಎಂದು “ನಮ್ಮ ಕೋಲಾರ ರೈತ ಸಂW”ದ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‌ಗೌಡ ಒತ್ತಾಯಿಸಿದ್ದಾರೆ.
ಸಾರ್ವಜನಿಕರ ಕೆಲಸಗಳನ್ನು ನಿರ್ವಹಿಸದ ಅಧಿಕಾರಿಗಳನ್ನು ಕರ್ತವ್ಯಲೋಪದಡಿ ಬೇರಡೆಗೆ ಜಿಲ್ಲಾಧಿಕಾರಿಗಳು ವರ್ಗಾವಣೆ ಮಾಡಬೇಕು. ಇಲ್ಲವಾದರೆ ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಸಂಘಟನೆಯು ಕೋಲಾರ ತಾಲ್ಲೂಕು ಕಚೇರಿಯನ್ನು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಕಛೇರಿಯ ಅಧಿಕಾರಿಗಳು ಸುಮಾರು ಹತ್ತು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇವರನ್ನು ವರ್ಗಾವಣೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ” ನಮ್ಮ ಕೋಲಾರ ರೈತ ಸಂಘವು” ಒತ್ತಾಯಿಸಿತ್ತು. ಆದರೂ ಸಹ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಕೋಲಾರ ತಾಲ್ಲೂಕಿಗೆ ಮೂರು ಮಂದಿ ಶಾಸಕರು ಹಾಗೂ ವಿಧಾನ ಪರಿತ್ ಸದಸ್ಯರಿದ್ದು, ಜನಪ್ರತಿಗಳು ತಮ್ಮ ಪಕ್ಷದ ಚುನಾವಣಾ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಇನ್ನು ರೈತರ ಪಾಡಂತೂ ಅದೋಗತಿಯಾಗಿದೆ. ಕೆಲವು ಅಧಿಕಾರಿಗಳು ರೈತರು ಕೇಳುವ ಜಮೀನು ದಾಖಲೆಗಳನ್ನು ನೀಡಿದೆ ಸತಾಯಿಸುತ್ತಿದ್ದಾರೆ. ಇತ್ತ ತಾಲ್ಲೂಕು ಕಚೇರಿಯಲ್ಲಿ ಕೆಲಸಗಳೂ ಆಗದೆ, ಬಿಸಿಲಿನಲಿ ಬೆಂದು ಬೇಸತ್ತು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕು ಹೋಗುತ್ತಿದ್ದಾರೆ.
ರಾಜಿನಾಮೇ ಆಗ್ರಹ- ಕೂಡಲೇ ಶಾಸಕರುಗಳು ಮತ್ತು ವಿಧಾನಪರಿಷತ್ ಸದಸ್ಯರುಗಳು ತಾಲ್ಲೂಕು ಕಚೇರಿಯ ಸಿಬ್ಬಂದಿಯ ಕಾರ್ಯ ವೈಖರಿಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಸಾರ್ವಜನಿಕರ ಕೆಲಸಗಳು ಸುಗಮವಾಗಿ ನಡೆಯಲು ನಿರ್ದೇಶನ ನೀಡಬೇಕು. ಇಲ್ಲವಾದರೆ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿ ಜಾಗ ಖಾಲಿ ಮಾಡ ಬೇಕೆಂದು ನಮ್ಮ ಕೋಲಾರ ರೈತ ಸಂಘವು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ನಮ್ಮ ಕೋಲಾರ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷರು ಕೆಂಬೋಡಿ ಕೃಷ್ಣೇಗೌಡ, ರವಿ, ಗೋಪಾಲಪ್ಪ, ಅಂಬರೀಶ್, ವೆಂಕಟರಾಮಪ್ಪ, ತಮ್ಮೇಗೌಡ, ನಾರಾಯಣಸ್ವಾಮಿ ಹಾಜರಿದ್ದರು.