ಕೋಲಾರ ಜಿಲ್ಲೆಗೆ ಭೈರತಿ ಸುರೇಶ್ ಸಚಿವ ಉಸ್ತುವಾರಿ


ಕೋಲಾರ,ಜೂ,೧೦:ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬೈರತಿ ಸುರೇಸ್ ಅವರನ್ನು ಕಾಂಗ್ರೆಸ್ ಪಕ್ಷವು ನೇಮಕ ಮಾಡಿ ಅಧಿಕೃತ ಅದೇಶ ಬಿಡುಗಡೆ ಮಾಡಿದೆ.
ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ.ಹೆಚ್. ಮುನಿಯಪ್ಪ ಅಥವಾ ಕೃಷ್ಣ ಬೈರೇಗೌಡರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿತ್ತು.
ಅದರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ.ಹೆಚ್.ಮುನಿಯಪ್ಪ ಅವರನ್ನು ನೇಮಕ ಮಾಡಿದಲ್ಲಿ ಜಿಲ್ಲಾ ಶಾಸಕರುಗಳು ಅವರ ಮುಂದೆ ಕೈ ಕಟ್ಟಿ ನಿಲ್ಲ ಬೇಕಾಗುತ್ತದೆ ಹಾಗೂ ತಮ್ಮ ಕ್ಷೇತ್ರದ ಕುರಿತು ಅವರ ಬಳಿ ಮನವಿಗಳನ್ನು ಸಲ್ಲಿಸುವ ಮೂಲಕ ಅವರ ಹೇಳಿದಕ್ಕೆ ಜೀ ಹುಜುರ್ ಎನ್ನ ಬೇಕಾಗುತ್ತದೆ. ಇದರಿಂದ ತಮ್ಮ ಕ್ಷೇತ್ರದ ಅಭಿವೃದ್ದಿ ಕಾರ್ಯಗಳಿಗೆ ತೊಡಕುಂಟಾಗುತ್ತದೆ. ಮತ್ತೆ ಭಿನ್ನಮತಗಳು ಮರುಕಳುಹಿಸುತ್ತದೆ ಎಂದು ಘಟಬಂಧನ್ ಟೀಮ್ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಉಸ್ತುವಾರಿ ಸುರ್ಜಿತ್ ಅವರ ಬಳಿ ಮನವಿ ಮಾಡಿ ಕೊಂಡಿದ್ದರಿಂದ ಕೆ.ಹೆಚ್. ಮುನಿಯಪ್ಪ ಅವರಿಗೆ ಕೋಲಾರ ಜಿಲ್ಲಾ ಉಸ್ತುವಾರಿ ಕೈ ತಪ್ಪುವಂತಾಯಿತು,
ಮುಖ್ಯವಾಗಿ ವಿಧಾನ ಪರಿಷತ್ ಸದಸ್ಯರಾದ ನಸ್ಸೀರ್ ಆಹಮದ್, ಅನಿಲ್ ಕುಮಾರ್, ಶಾಸಕರಾದ ಕೊತ್ತೂರು ಮಂಜುನಾಥ್ ಅವರನ್ನು ಸರಿತೊಗಿಸಿ ಕೊಂಡು ಹೋಗಲಚಿಚಿ ಕಷ್ಟಕರವಾಗುತ್ತದೆ. ಮೂಲತಃ ಕೋಲಾರದ ಕ್ಷೇತ್ರದವರೇ ಅಗಿರುವ ಬ್ಯಾಟರಾಯನ ಪುರದ ಶಾಸಕ ಹಾಗೂ ಕಂದಾಯ ಸಚಿವರಾದ ಕೃಷ್ಣಬೈರೇಗೌಡರನ್ನು ಕೋಲಾರ ಜಿಲ್ಲಾ ಉಸ್ತುವಾರಿಯಾಗಿ ನೇಮಿಸ ಬೇಕೆಂದು ಘಟಬಂಧನ್ ನಿಯೋಗವು ಪಕ್ಷದ ಹೈ ಕಮಾಂಡ್‌ಗೆ ನೇಮಕ ಮಾಡ ಬೇಕೆಂದು ಕೋರಲಾಗಿತ್ತು.
ಅದರೆ ಕೆ.ಹೆಚ್. ಮುನಿಯಪ್ಪ ಅವರು ತಮಗೆ ಕೋಲಾರ ಜಿಲ್ಲೆ ಅಥವಾ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ನೀಡ ಬೇಕೆಂದು ಮನವಿ ಸಲ್ಲಿಸಿದ್ದ ಹಿನ್ನಲೆಯಲ್ಲಿ ಇಬ್ಬರನ್ನು ಬಿಟ್ಟು ಮೂರನೇಯವರಾದ ಬೈರತಿ ಸುರೇಶ್ ಅವರನ್ನು ನೇಮಕ ಮಾಡುವ ಮೂಲಕ ಇಬ್ಬರಿಗೂ ಸಮಾಧಾನ ಪಡೆಸಲಾಗಿದೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಪಟ್ಟ ಶಿಷ್ಯ ಬೈರತಿ ಸುರೇಶ್ ಅವರನ್ನು ಹಿಂದುಳಿದ ಜಿಲ್ಲೆಯ ಕೋಲಾರಕ್ಕೆ ನೇಮಕ ಮಾಡಲು ಮುಖ್ಯ ಕಾರಣ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಿಂದ ಸ್ವರ್ಧಿಸ ಬೇಕೆಂಬ ಇಚ್ಚೆ ಇತ್ತು ಈ ಸಂದರ್ಭದಲ್ಲಿ ಕೋಲಾರದ ಅಭಿವೃದ್ದಿಗೆ ಅನೇಕ ಆಶ್ವಾಸನೆಗಳನ್ನು ನೀಡಿದ್ದರು. ಇವುಗಳನ್ನು ಈಡೇರಿಸುವ ದೆಸೆಯಲ್ಲಿ ಸಿದ್ದರಾಮಯ್ಯ ಅವರು ಸ್ವಇಚ್ಚೆಯಿಂದ ಬೈರತಿ ಸುರೇಶ್ ಅವರನ್ನು ನಿಯೋಜಿಸಿದ್ದಾರೆ ಎನ್ನಲಾಗಿದೆ