ಕೋಲಾರ ಎ.ಪಿ.ಎಂ.ಸಿ ಬಂದ್

ಕೋಲಾರ,ಡಿ.೨೧: ಎಪಿಎಂಸಿ ಸೆಸ್ ಶುಲ್ಕ ಹೆಚ್ಚಳ ವಾಪಸ್ಸು ಪಡೆಯುವಂತೆ ಆಗ್ರಹಿಸಿ ಕೋಲಾರ ಜಿಲ್ಲೆಯಾದ್ಯಂತ ಎಪಿಎಂಸಿ ಬಂದ್ ಕರೆ ನೀಡಿದ್ದಾರೆ. ಅದರಂತೆ ಕೋಲಾರದಲ್ಲಿ ಏಷ್ಯಾದ ಎರಡನೇ ದೊಡ್ಡ ಎಪಿಎಂಸಿ ಮಾರುಕಟ್ಟೆ ಇಂದು ಬಂದ್ ಆಗಿದೆ.
ಕೋಲಾರ ಜಿಲ್ಲೆಯಾದ್ಯಂತ ಎಪಿಎಂಸಿ ಮಾರುಕಟ್ಟೆಗಳಲ್ಲಿ ಇಂದು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ. ೦.೩೦ ಪೈಸೆ ಇದ್ದ ಸೆಸ್ ಶುಲ್ಕವನ್ನು ೧ ರೂ. ಗೆ ಹೆಚ್ಚಿಸಲಾಗಿತ್ತು. ಈ ಹಿನ್ನಲೆ ಜಿಲ್ಲೆಯಲ್ಲಿ ಮಾರುಕಟ್ಟೆಗಳ ಬಂದ್‌ಗೆ ಕರೆ ನೀಡಿದ್ದಾರೆ. ಈ ಹಿನ್ನಲೆ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತಿದ್ದ ಮಾರುಕಟ್ಟೆ ಇಂದು ಖಾಲಿ ಖಾಲಿಯಾಗಿದೆ. ಇನ್ನು ಕೋಲಾರ ಎಪಿಎಂಸಿ ಪ್ರಾಂಗಣ ಒಳಗೆ ಅಥವಾ ಹೊರಗೆ ವ್ಯವಹಾರ ಮಾಡುವಂತವರಿಗೆ ಒಂದೇ ತೆರಿಗೆ ಜಾರಿಯಾಗಬೇಕು. ಜೊತೆಗೆ ಈ ಹಿಂದೆ ೦.೩೦ ಪೈಸೆ ಇದ್ದ ಚೆಸನ್ನು ಏಕಾಏಕಿ ಶೇ. ೧ ರೂಗೆ ಹೆಚ್ಚಳ ಮಾಡಿದ್ದು, ಹೆಚ್ಚಳ ಮಾಡಿರುವ ಎಪಿಎಂಸಿ ಚೆಸ್ ರದ್ದುಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಕೋಲಾರ ಜೈ ಕರ್ನಾಟಕ ದಲ್ಲಾಳರ ಸಂಘ, ಜೈ ಭಾರತ್ ವರ್ತಕರ ಸಂಘ, ಜೆ.ಎನ್.ಜೆ ತರಕಾರಿ ಮಂಡಿ ಮಾಲೀಕರ ಸಂಘ, ಹಮಾಲರ ಸಂಘ ಸೇರಿದಂತೆ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಈಗಾಗಲೆ ರೈತ ಬಾಂಧವರು ಹಣ್ಣು ಮತ್ತು ತರಕಾರಿಗಳನ್ನು ವಹಿವಾಟಿಗೆ ತರಬಾರದೆಂದು ಮನವಿ ಮಾಡಲಾಗಿತ್ತು. ಅದರಂತೆ ಇಂದು ಎಂಪಿಎಂಸಿ ಮಾರುಕಟ್ಟೆಗಳು ಜಿಲ್ಲೆಯಾದ್ಯಂತ ಖಾಲಿಖಾಲಿಯಾಗಿವೆ.