ಕೋಲಾರ ಆಯ್ಕೆ ಬಗ್ಗೆ ಸಿದ್ದು ವಿವರಣೆ

ಕೋಲಾರ,ಜ,೧೧- ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮುಂಬರಲಿರುವ ಚುನಾವಣೆಗೆ ಕೋಲಾರ ವಿಧಾನಸಭಾ ಕ್ಷೇತ್ರವನ್ನೆ ಏಕೆ ಆಯ್ಕೆ ಮಾಡಿ ಕೊಂಡರು ಎಂಬ ಪ್ರಶ್ನೆಗೆ ಸಿದ್ದರಾಮಯ್ಯನವರು ವಿವರಿಸಿದ್ದು ಹೀಗೆ……
ಕೋಲಾರ ವಿಧಾನ ಸಭಾ ಕ್ಷೇತ್ರದಿಂದ ಸ್ವರ್ಧಿಸಿದರೆ ರಾಜಧಾನಿ ಬೆಂಗಳೂರಿಗೆ ಕೇವಲ ೬೫ ಕಿ.ಮಿ. ಅಂತರದಲ್ಲಿದ್ದು ಒಂದೂವರೆ ಗಂಟೆ ಪ್ರಯಾಣವಾಗಿದೆ. ತುರ್ತು ಕಾರ್ಯಕ್ರಮಗಳಿಗೆ, ಸಭೆಗಳಿಗೆ ಹಾಜರಾಗಲು ಅನುಕೂಲಕರವಾಗಿರುತ್ತದೆ. ಪ್ರತಿವಾರವು ಭೇಟಿ ನೀಡ ಬಹುದು ಇದರಿಂದ ರಾಜ್ಯದಲ್ಲಿ ಪ್ರವಾಸ ಮಾಡಲು ಅನುಕೊಲಕರವಾಗುವುದು ಎಂದು ಅಭಿಪ್ರಾಯ ವ್ಯಕ್ತ ಪಡೆಸಿದ್ದಾರೆ.
ಕೋಲಾರ ಕ್ಷೇತ್ರದ ಸಾಮಾನ್ಯ ಜನರು ಸಹ ಯಾವ ಮಧ್ಯವರ್ತಿಗಳಿಲ್ಲದೆ ನೇರವಾಗಿ ಭೇಟಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಲು ಅನುಕೂಲಕರವಾಗುವುದು. ನನ್ನ ಉಸ್ತುವಾರಿಯಾಗಿ ೧೦ ಮಂದಿ ಮುಖಂಡರ ಕೋರ್ ಕಮಿಟಿ ರಚಿಸಲಾಗುವುದು ಅವರು ನನ್ನ ಗೈರು ಹಾಜರಾತಿಯಲ್ಲಿ ತೀರ್ಮಾನ, ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಕೋಲಾರದಲ್ಲಿ ಆರ್.ಎಲ್. ಜಾಲಪ್ಪನವರು ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಶ್ರೀದೇವರಾಜ ಅರಸು ಅವರ ಹೆಸರಿನಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಮಿತಿಯಲ್ಲಿ ನನ್ನನ್ನು ಸೇರ್ಪಡೆ ಮಾಡಿ ಕೊಂಡಿದ್ದ ಹಿನ್ನಲೆಯಲ್ಲಿ ನನಗೂ ಅವಿಭಜಿತ ಕೋಲಾರ ಜಿಲ್ಲೆಗೂ ಅವಿನಾಭಾಜ್ಯ ಸಂಬಂಧ ಇದೆ.ಈ ಹಿಂದೆ ಜನತಾಪಕ್ಷ ಹಾಗೂ ಜೆ.ಡಿ.ಎಸ್. ಪಕ್ಷದ ಸಂಘಟನೆಯಲ್ಲಿ ಇದ್ದಾಗ ಕೋಲಾರ ಜಿಲ್ಲೆಯ ಬಹುತೇಕ ಮುಖಂಡರ ಸಂರ್ಪಕ ಇತ್ತು,ಕಳೆದ ೧೯೯೮ರಲ್ಲಿ ಅಹಿಂದ ವರ್ಗಗಳ ಸಂಘಟನೆಯ ಹೋರಾಟದ ನಾಯಕತ್ವ ವಹಿಸಿದ್ದ ಸಂದರ್ಭದಲ್ಲಿ ಕೋಲಾರದಲ್ಲಿ ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ದಲಿತ ಸಂಘರ್ಷ ಸಮಿತಿಗಳ ನಡುವೆ ನನ್ನ ಭಾಂದವ್ಯವಯ ಉತ್ತಮವಾಗಿತ್ತು ಎಂದಿದ್ದಾರೆ.
ಕಳೆದ ೨೦೦೭-೦೮ ಸಂದರ್ಭದಲ್ಲಿ ನಮ್ಮ ಸಮುದಾಯದ ವರ್ತೂರು ಪ್ರಕಾಶ್ ನನ್ನ ಚುನಾವಣೆಯಲ್ಲಿ ಕೆಲಸ ಮಾಡಿದ್ದರು, ತಮ್ಮ ತಾಯಿಯವರ ತವರು ಕ್ಷೇತ್ರವಾದ ಕೋಲಾರದಲ್ಲಿ ನನಗೆ ಸನ್ಮಾನ ಮಾಡಲು ಮುಂದಾಗ ನಮ್ಮ ಸಮುದಾಯದವರು ವರ್ತೂರು ಪ್ರಕಾಶ್ ಅವರೊಂದಿಗೆ ಕೈ ಜೋಡಿಸಿದ ಸಂದರ್ಭದಲ್ಲಿ ಹೆಚ್ಚಿನ ಬೆಂಬಲ ನೀಡಿದ್ದರು. ಆಗಾ ವರ್ತೂರು ಪ್ರಕಾಶ್ ಅವರಿಗೆ ಚುನಾವಣೆಗೆ ಸ್ವರ್ಧಿಸಲು ಪ್ರಯತ್ನಿಸಿದಾಗ ಕಾಂಗ್ರೇಸ್ ಪಕ್ಷದಲ್ಲಿ ಟಿಕೆಟ್ ನೀಡಲಿಲ್ಲ.ನಂತರದಲ್ಲಿ ಸಮುದಾಯದವರು ಹಾಗೂ ಇತರೆ ಅಹಿಂದ ವರ್ಗಗಳ ಬೆಂಬಲದಿಂದ ಪಕ್ಷೇತರರಾಗಿ ಸ್ವರ್ಧಿಸಿ ಆಯ್ಕೆಯಾದರು ಎಂದು ನೆನಪಿಸಿದ್ದಾರೆ.
ವರ್ತೂರು ಪರಿಚಯ !
ಒಟ್ಟಾರೆಯಾಗಿ ವರ್ತೂರು ಪ್ರಕಾಶ್ ಸಿದ್ದರಾಮಯ್ಯ ಅವರನ್ನು ಮುಖ್ಯ ಮಂತ್ರಿ ಮಾಡುವುದೆ ನನ್ನ ಗುರಿ ಹಾಗೂ ನನ್ನ ಕೊನೆ ಆಸೆ ಎಂದು ಕೋಲಾರಕ್ಕೆ ಬಂದು ಪರಿಚಿತರಾದರು ಎಂಬುವುದು ಸೂರ್ಯ ಚಂದ್ರರಷ್ಟೆ ಸತ್ಯವಾದ ಮಾತಾಗಿದೆ. ಇದರ ಜೂತೆಗೆ ನಾನು ಹುಟ್ಟು ಕಾಂಗ್ರೇಸ್ ಪಕ್ಷದವನು. ನನ್ನ ಮೈಯಲ್ಲಿ ಹರಿಯುತ್ತಿರುವುದು ಕಾಂಗ್ರೇಸ್ ರಕ್ತ, ನಮ್ಮ ತಂದೆ ರಂಗಪ್ಪನವರು ಕಾಂಗ್ರೇಸ್ ಪಕ್ಷದವರು,ನಮ್ಮ ತಂದೆಯವರಿಗೆ ಸಿಕ್ಕಿದ್ದ ಶಾಸಕ ಸ್ಥಾನದ ಅವಕಾಶವನ್ನು ತಮ್ಮ ಸ್ನೇಹಿತ ಕೆ.ಆರ್.ಪುರಂ ಕೃಷ್ಣಪ್ಪನವರಿಗೆ ಬಿಟ್ಟು ಕೊಟ್ಟಿದ್ದರು ಎಂದು ಕ್ಷೇತ್ರದ ಜನತೆಗೆ ಹೇಳಿದ್ದರು ಇದನ್ನು ಜನತೆ ಮರೆತಿಲ್ಲ.
ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಯಾಗುವುದು ಹಾಗೂ ನಾನು ಒಂದು ಬಾರಿ ಶಾಸಕನಾಗುವುದು ಇಷ್ಟೆ ನನ್ನ ಕೊನೆಯ ಆಸೆ ಅಮೇಲೆ ನಾನು ೫೦ ವರ್ಷಕ್ಕೆ ರಾಜಕೀಯವನ್ನು ತ್ಯೆಜಿಸಿ ಮಠವನ್ನು ಸ್ಥಾಪಿಸುತ್ತೇನೆ, ಅದರೆ ಖಾವಿ ತೋಡುವುದಿಲ್ಲ. ಅನಾಥರಿಗೆ, ವೃದ್ದರಿಗೆ, ಆಶಕ್ತರಿಗೆ ಆಶ್ರಯ ಕಲ್ಪಿಸುವ ಮೂಲಕ ಜನಸೇವೆ ಮಾಡುತ್ತೇನೆ, ನನಗೆ ಹಣ ಮಾಡುವ ಆಸೆ ಇಲ್ಲ. ಜಮೀನುಗಳು ಮಾರಿದ್ದು, ಲಾರಿ ಲೋಡ್ ಮಾಡುವಷ್ಟು ಚೀಲದ ಮೂಟೆಗಳಲ್ಲಿ ಹಣ ಇದೆ ಎಂದು ನರಸಾಪುರ ಸಮೀಪದ ಪ್ರವಾಸಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸಭೆಯೊಂದರಲ್ಲಿ ಬಡಾಯಿ ಕೊಚ್ಚಿ ಕೊಂಡಿದ್ದರು ಎನ್ನುತ್ತಾರೆ.
ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಪ್ರಥಮವಾಗಿ ಫ್ಲೆಕ್ಸಿಗಳ ಮೂಲಕ ಅಬ್ಬರದ ಪ್ರಚಾರ ಗಿಟ್ಟಿದವರು,ಮತದಾರರಿಗೆ ಹಣ ಹಂಚಿದವರು, ಬಿರಿಯಾನಿ ತಿನ್ನಿಸಿದರು,, ದೇವಾಲಯಗಳಿಗೆ, ಸಮುದಾಯಗಳಿಗೆ ಒಂದಷ್ಟು ಮಂದಿ ತಮ್ಮ ಕಷ್ಟಗಳನ್ನು ಹೇಳಿ ಕೊಂಡವರಿಗೆ ಹಣ ಹಂಚುವ ಮೂಲಕ ಹಣ ಬಲದಿಂದಲೂ ಗೆಲ್ಲಬಹುದು ಎಂದು ಎಲೆ ಅಡಿಕೆಗೆ ಮೀಸಲಾಗಿದ್ದ ಪವಿತ್ರವಾದ ಕ್ಷೇತ್ರದಲ್ಲಿ ಭ್ರಷ್ಟ ರಾಜಕಾರಣದ ಫಾಠ ಕಲಿಸಿದ ಕೀರ್ತಿ ಇದೇ ವರ್ತೂರು ಪ್ರಕಾಶ್ ಅವರಿಗೆ ಸಲ್ಲುತ್ತದೆ ಎಂದು ಹೇಳುತ್ತಾರೆ.
ಇಲ್ಲದೆ ಹೋಗಿದ್ದರೆ ವರ್ತೂರು ನಿಂದ ಬಂದು ಕೋಲಾರದಲ್ಲಿ ಶಾಸಕರಾಗಲು ಅವರೇನು ಸಾಧನೆ ಮಾಡಿದ್ದರು, ಅವರು ಕುರುಬರ ಪೇಟೆಯ ೪-೫ ಕುಟುಂಬದವರಿಗೆ ಪರಿಚಯ ಇದ್ದಿದ್ದು ಬಿಟ್ಟರೆ ಯಾರಿಗೆ ಪರಿಚಯ ಇದ್ದರು. ಅವರ ಮುಖ ನೋಡಿದ್ದವರು ಯಾರು ಎಂದು ಸಮುದಾಯ ಮುಖಂಡರು ಅಗಾಗ್ಗೆ ನೆನಪಿಸಿ ಕೊಳ್ಳುವುದುಂಟು,