ಕೋಲಾರ್ ಸಂಸದರಿಂದ ಮಹಿಳೆಗೆ ಅವಹೇಳನ: ಖಂಡನೆ

ಕಲಬುರಗಿ: ಮಾ 10: ಮಾಧ್ಯಮಗಳಲ್ಲಿ ವರದಿಯಾದಂತೆ ಕೋಲಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಎಕ್ಸ್‍ಪೆÇೀವನ್ನು ಉದ್ಘಾಟಿಸಿದ ಕೋಲಾರ್ ಬಿಜೆಪಿ ಸಂಸದ ಮುನಿಸ್ವಾಮಿ ಅವರು ಮಳಿಗೆಯೊಂದರಲ್ಲಿ ಮಾರಾಟ ಮಾಡುತ್ತಿದ್ದ ಒಬ್ಬ ಹೆಣ್ಣು ಮಗಳೊಡನೆ ಅಸಭ್ಯ ಹಾಗೂ ಅನುಚಿತವಾಗಿ ಮಾತನಾಡಿರುವುದು ಖಂಡನೀಯ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆಯ ಜಿಲ್ಲಾಧ್ಯಕ್ಷೆ ಶ್ರೀಮತಿ ಗುಂಡಮ್ಮ ಅವರು ಅಕ್ಷೇಪಿಸಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ, ಮಹಿಳೆಯರ ಸಮಾನತೆ- ಸ್ವಾವಲಂಬನೆ – ಸ್ವಾತಂತ್ರ್ಯಗಳ ಬಗ್ಗೆ ಮಾತನಾಡುವ ಪಕ್ಷದ ಸಂಸದ ಮಹೋದಯರು ಸಾರ್ವಜನಿಕವಾಗಿ ಆಕೆಯ ವೈಯಕ್ತಿಕ ನಂಬಿಕೆಗಳ ಕುರಿತು ಎಲ್ಲೆ ಮೀರಿ ಮಾತನಾಡಿರುವುದು ಅಕ್ಷಮ್ಯ. ಜೊತೆಗೆ ಹಣೆಯಲ್ಲಿ ಕುಂಕುಮ ಇಲ್ಲದಿರುವುದರ ಬಗ್ಗೆ ಆಕ್ಷೇಪಿಸಲು ಆ ಹೆಣ್ಣು ಮಗಳ ಪತಿಯ ಮತ್ತು ಆಕೆಯ ತಂದೆಯ ಕುರಿತು ಮಾತನಾಡಿರುವುದು ಸುಸಂಸ್ಕೃತಿಯ ಪ್ರದರ್ಶನವೆ? ಎಂದು ಅವರು ಹೇಳಿಕೆಯಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ಅμÉ್ಟೀ ಅಲ್ಲದೆ ಹಣದ ಆಮಿಷಕ್ಕೆ ಬಲಿಯಾಗಿ ಆ ಮಹಿಳೆ ಮತಾಂತರವಾಗಿರುವಳೆಂದೂ ಆರೋಪಿಸಿರುವುದು ಸಂಸದರ ಪ್ರಜಾತಂತ್ರ ವಿರೋಧಿ ಧೋರಣೆ ಹಾಗೂ ಅವರೇ ದಿನ ಬೆಳಗಾದರೆ ಪ್ರಮಾಣ ಮಾಡುವ ಸಂವಿಧಾನ ದತ್ತ ಹಕ್ಕುಗಳ ಕುರಿತಾದ ಅಸಹಿಷ್ಣುತೆಯನ್ನು ಬಟಾ ಬಯಲು ಮಾಡಿದೆ. ಇದೇಯೇ ಬಿಜೆಪಿಯ ‘ಭಾರತೀಯ ಸಂಸ್ಕೃತಿ’ಯ ವ್ಯಾಖ್ಯಾನ ?, ಬಿಜೆಪಿಯ ನಾಯಕರು ಅಸಭ್ಯ ಮಾತುಗಳನ್ನಾಡಿದ ಸಂಸದರಿಂದ ಕ್ಷಮಾಪಣೆ ಕೇಳುವಂತೆ ಮಾಡುತ್ತದೆಯೇ ಇಲ್ಲವೆ ಸಮರ್ಥಿಸುತ್ತದೆಯೇ ಎಂಬುದನ್ನು ನಾಡಿನ ಜನತೆ ಗಮನಿಸುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.