ಕೋಲಾರಮ್ಮ ಕೆರೆ ಸುಂದರೀಕರಣ,ಪಾರ್ಕ್ ನಿರ್ಮಾಣ

ಕೋಲಾರ,ಜೂ,೧೬-ಜಿಲ್ಲಾ ಕೇಂದ್ರದ ಕೋಲಾರಮ್ಮ ಕೆರೆಯು ಗಿಡಗಂಟೆಗಳು ಬೆಳೆಯುವ ಮೂಲಕ ತನ್ನ ಮೂಲರೂಪ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ಕೋಲಾರಮ್ಮ ಕೆರೆಯನ್ನು ಗಮನಿಸಿದ ಸಂಸದ ಮುನಿಸ್ವಾಮಿ ಮುತುವರ್ಜಿಯಿಂದ ಇದೀಗ ಸುಂದರೀಕರಣಗೊಂಡಿದ್ದು, ಕೆರೆಯ ದಡದಲ್ಲಿ ಪಾರ್ಕ್ ನಿರ್ಮಾಣವಾಗಿ ಸಾರ್ವಜನಿಕರನ್ನು ಸೆಳೆಯುತ್ತಿದೆ.
ಕೋಲಾರ ನಗರಕ್ಕೆ ಹೆಗ್ಗುರುತಾಗಿರುವ ಕೋಲಾರಮ್ಮ ಕೆರೆ ಸಂಸದ ಮುನಿಸ್ವಾಮಿ ಮುತ್ತು ವರ್ಜಿಯಿಂದ ಸುಂದರೀಕರಣವಾಗಿದೆ, ಸಂಸದರ ಅಭಿಲಾಷೆಯಂತೆ ಕೆರೆಯ ದಡದಲ್ಲಿ ಪಾರ್ಕ್ ನಿರ್ಮಾಣವಾಗಿದ್ದು ಸಾರ್ವಜನಿಕರು ಹಾಗೂ ದೂರದ ಪ್ರವಾಸಿತಾಣಗಳಿಗೆ ತೆರಳುವ ಪ್ರಯಾಣಿಕರಿಗೆ ವಿಶ್ರಾಂತಿ ಪಡೆದುಕೊಳ್ಳಲು ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ.
ಕೋಲಾರಮ್ಮ ಕೆರೆ ಸುಂದರೀಕರಣ ಗೊಳ್ಳುವ ಜೊತೆಗೆ ಪಾರ್ಕಿನಲ್ಲಿ ವಾಕಿಂಗ್ ಪಾತ್ ಹಾಗೂ ಪಾರ್ಕ್ ನಿರ್ಮಾಣವಾಗುವಲ್ಲಿ ಸಂಸದ ಮುನಿಸ್ವಾಮಿ ಪ್ರಮುಖ ಪಾತ್ರವಹಿಸಿದ್ದರು. ದಶಕಗಳ ಕಾಲದಿಂದ ಕರೆಯ ಒತ್ತುವರಿ, ಮುಳ್ಳಿನ ಗಿಡಗಂಟೆಗಳು ಬೆಳೆದು ತನ್ನ ಮೂಲರೂಪವನ್ನು ಕಳೆದುಕೊಂಡಿದ್ದ ಕೋಲಾರಮ್ಮ ಕೆರೆಯನ್ನು ಸಂಸದರು ತನ್ನ ಸ್ವಂತ ಹಣದಿಂದ ಪುನಚೇತನಗೊಳಿಸಿದ್ದರು.
ಸಂಸದ ಮುನಿಸ್ವಾಮಿ ಸುದ್ಧಿಗಾರರೊಂದಿಗೆ ಮಾತನಾಡಿ, ಕೆರೆಯು ಒಂದು ಸಾವಿರಕ್ಕೂ ಹೆಚ್ಚು ವಿಸ್ತೀರ್ಣ ಹೊಂದಿದ್ದ ಕೆರೆಯನ್ನು ೮೦ ಲಕ್ಷ ವೆಚ್ಚದಲ್ಲಿ ತಮ್ಮ ಸ್ವಂತ ದುಡ್ಡಿನಿಂದ ಕೆರೆಯಲ್ಲಿನ ಗಿಡಗಂಟೆಗಳನ್ನು ತೆಗೆದು ಸ್ವಚ್ಛ ಮಾಡಿಸಿದರು. ನಗರಕ್ಕೆ ಅಂಟಿಕೊಂಡು ಬೆಂಗಳೂರು ತಿರುಪತಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೋಲಾರಮ್ಮ ಕೆರೆ ಈಗ ಸುಂದರೀಕರಣಗೊಂಡ, ಜನತೆ ವಾಕಿಂಗ್ ಮಾಡಲು ವಾಕಿಂಗ್ ಪಾತ್, ಕೆರೆಯ ದಡದಲ್ಲಿ ಪಾರ್ಕ್ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಕೋಲಾರ ಜನತೆ ಅಲ್ಲದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರು ಪಾರ್ಕ್‌ನಲ್ಲಿ ಕೆರೆಯ ಸೌಂದರ್ಯ ವೀಕ್ಷಿಸುತ್ತ ವಿಶ್ರಾಂತಿ ಪಡೆಯಬಹುದು, ಮಕ್ಕಳು ಪಾರ್ಕ್‌ನಲ್ಲಿ ಆಟವಾಡಲು ಸೌಕರ್ಯಗಳು ಒದಗಿಸಲಾಗಿದೆ ಎಂದು ಸಂಸದ ಮುನಿಸ್ವಾಮಿ ವಿವರಿಸಿದರು.