ಕೋಲಾರದ ಜನತೆಗೆ ನಮ್ಮ ಕುಟುಂಬದ ಮೇಲೆ ಅಪಾರ ಅಭಿಮಾನ- ಪ್ರಜ್ವಲ್ ರೇವಣ್ಣ

ಕೋಲಾರ, ಜ. ೧೮- ಕೋಲಾರ ಜಿಲ್ಲೆಗೂ ನಮ್ಮ ಕುಟುಂಬದವರಿಗೂ ಅನಿನಾಭಾಜ್ಯ ಸಂಬಂಧವನ್ನು ಹೊಂದಿದೆ. ಅದು ತಲ ತಲಾಂತರಗಳಿಂದ ಹೊಂದಿ ಕೊಂಡು ಬಂದಿರುವ ಬೆಸುಗೆಯಾಗಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ನಗರದಲ್ಲಿ ಮಾದ್ಯಮದವರೊಂದಿಗೆ ಅವರು ಮಾತನಾಡಿ, ಕುಮಾರಸ್ವಾಮಿ ಸಹ ಒಂದು ಸಂದರ್ಭದಲ್ಲಿ ಸ್ಪರ್ಧೆ ಮಾಡಿದರೆ ಈ ಭಾಗದಿಂದಲೇ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು, ನಮ್ಮ ಪಕ್ಷದ ನಮ್ಮ ಮೇಲೆ ಕೋಲಾರದ ಜನತೆಗೆ ಅಪಾರವಾದ ಅಭಿಮಾನವಿದೆ ಎಂದರು.
ಸಿ.ಎಂ.ಇಬ್ರಾಹಿಂ ಅಧ್ಯಕ್ಷರಾದ ಮೇಲೆ ಅಲ್ಪಸಂಖ್ಯಾತರ ಕೂಗು ಎಲ್ಲಾ ಭಾಗಗಳಿಂದ ಜೆ.ಡಿ.ಎಸ್. ಪಕ್ಷದ ಪರ ಕೇಳಿ ಬರುತ್ತಿದೆ, ಮಂಡ್ಯಗೆ ೧೦ ಬಾರಿ ಅಮಿತಾ ಷಾ ಬಂದರೂ ಅದು ದೇವೇಗೌಡರ ಕ್ಷೇತ್ರವಾಗಿದೆ, ಅಮುಲ್‌ಗೆ ನಂದಿನಿಯನ್ನು ಸೇರಿಸುವೆ ಎನ್ನುತ್ತಾರೆ, ಅದು ಯಾರಪ್ಪನ ಆಸ್ತಿ, ನಂದಿನಿಯನ್ನು ಬಡ ರೈತರ ಬೆಳೆಸಿದವರು, ಅದು ಇಂದು ಶಕ್ತಿಯಾಗಿ ಬೆಳೆದಿದೆ ಎಂದು ಹೇಳಿದರು.
ಅಧ್ಯಕ್ಷರ ಪೋಸ್ಟ್ ಅದು ಕ್ಯಾಬಿನೆಟ್ ಪೋಸ್ಟ್ ಆಗಿದೆ ಎಂದು ಷಾ ವಿರುದ್ದ ಪ್ರಜ್ವಲ್ ಕಿಡಿಕಾರಿದ ಅವರು ಯೋಗೇಶ್ವರ್ ಮಾತಿಗೆ ಟಾಂಗ್ ನೀಡಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ, ನಾನು ಸಹ ಗೆಲ್ಲುವುದಿಲ್ಲವೆಂದು ಯೋಗೇಶ್ವರ ಹೇಳಿದ್ದಾರೆ, ಬಿಜೆಪಿ ಅಧಿಕಾರಕ್ಕೆ ಬರವುದಿಲ್ಲ, ಆದರೆ ಅಪರೇಷನ್ ಕಮಲ ಆಗುತ್ತೆ,ಅಧಿಕಾರಕ್ಕೆ ತರುವ ಕೆಲಸ ಆಗಲಿದೆ ಎಂದಿದ್ದಾರೆ ಇವರು ಸ್ವಲ್ಪವಾದರೂ ನಾಚಿಕೆ ಇಲ್ಲದೆ ಯಾವ ಬಾಯಲ್ಲಿ ಹೇಳುತ್ತಿದ್ದಾರೆ, ಗೆಲ್ಲುವ ಆತ್ಮಸ್ಥೈಯವಿಲ್ಲವೇ ? ಎಂದು ಪ್ರಜ್ವಲ್ ರೇವಣ್ಣ ಕಿಡಿಕಾರಿದರು.
ಹಾಸನದಲ್ಲಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ದತ್ತ ಅವರು ಕಾಂಗ್ರೆಸ್‌ಗೆ ಹೋದರೆ ಗೆಲ್ಲುವ ನಂಬಿಕೆಯಿಟ್ಟು ಹೋಗಿದ್ದಾರೆ, ಆದರೆ ಇವತ್ತಿನ ಪರಿಸ್ಥಿಯಲ್ಲಿ ಕಾಂಗ್ರೆಸ್ ಮೂರು ಬಾಗಿಲು ಆಗಿದೆ, ಸಿದ್ದು ಕೋಲಾರ ಸ್ಪರ್ಧೆ ಅವರ ವೈಯಕ್ತಿಕ ವಿಷಯ, ಪಾಪ ಅವರನ್ನು ಕಾಂಗ್ರೇಸ್‌ನವರು ಹರಿಕೆ ಕುರಿಯನ್ನಾಗಿ ಮಾಡುತ್ತಿದ್ದಾರೆ, ಅವರದ್ದೇ ಪಾರ್ಟಿಯಲ್ಲಿ ಅವರನ್ನು ಬಲಿ ಕೊಡಲು ಸಿದ್ದತೆ ಮಾಡಿ ಕೊಳ್ಳುತ್ತಿದ್ದಾರೆ ಎಂದು ವ್ಯಂಗವಾಡಿದರು,
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಇವತ್ತು ಕೋಲಾರದಲ್ಲಿ ಸಾಮೂಹಿಕ ವಿವಾಹ ಉದ್ಟಾಟನೆಗೆ ಬಂದಿರುವೆ, ಕೋಲಾರ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆಯಾಗಿದೆ, ಕಳೆದ ಬಾರಿ ಶ್ರೀನಿವಾಸಗೌಡ ಜೆಡಿಎಸ್ ಪಕ್ಷದಿಂದ ೪೦ ಸಾವಿರ ಮತಗಳಿಂದ ಗೆದಿದದ್ದರು, ಈ ಬಾರಿ ಜೆಡಿಎಸ್ ಶ್ರೀನಾಥ್ ಅವರು ೭೦ ಸಾವಿರ ಮತಗಳು ಬರುವುದು ಖಚಿತ ಎಂದು ನುಡಿದರು.
ಸಿದ್ದರಾಮಯ್ಯ ಅವರು ಕೆಲವರ ಬಲವಂತದಿಂದ ಬಂದು ನಿಲ್ಲುತ್ತಿದ್ದಾರೆ, ಕೆ.ಎಚ್.ಮುನಿಯಪ್ಪರನ್ನು ಸೋಲಿಸಿದವರು ಇವತ್ತು ಕಾಂಗ್ರೆಸ್‌ಗೆ ಮತ ಕೇಳುತ್ತಿದ್ದಾರೆ, ಗೆದ್ದ ಮೇಲೆ ಅವರು ಬಿಜೆಪಿಗೆ ಹೋಗುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ ? ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅವರು ಹಣ ಪಡೆದು ಶ್ರೀನಿವಾಸಗೌಡರಿಂದ ಬಿಜೆಪಿಗೆ ಮತ ಹಾಕಿಸಿದರು, ಲೆಹರ್ ಸಿಂಗ್‌ರನ್ನು ಗೆಲ್ಲಿಸಿದರು, ಕುಪೇಂದ್ರ ರೆಡ್ಡಿರನ್ನು ಸೋಲಿಸಿದರು, ಕೋಲಾರದಲ್ಲಿ ಕಾಂಗ್ರೆಸ್ ಪಾಲಿಟಿಕ್ಸ್ ನೆಲೆಕಚ್ಚಿದೆ ಎಂದರು.
ಕೆ.ಎಚ್.ಮುನಿಯಪ್ಪ ಸಿದ್ದರಾಮಯ್ಯರಿಗೆ ಮಾಡುತ್ತಾರಾ ?, ಕೋಲಾರ ಜಿಲ್ಲೆಯೇ ಕಾಂಗ್ರೆಸ್‌ನಿಂದ ಮುಕ್ತವಾಗಲಿದೆ, ಸಿದ್ದರಾಮಯ್ಯ ಬಂದಾಗ ೨ ಸಾವಿರ ಜನ ಸೇರಿಸಿಲ್ಲ, ೭ ಎಂಎಲ್‌ಎ ಗಳು ಸೇರಿಸಿ ಕಾರ್ಯಕ್ರಮ ಮಾಡಿದ್ದು ೨ ಸಾವಿರ ಸೇರಿಸಲು ಆಗಿಲ್ಲ ಎಂದರೆ ಕಾಂಗ್ರೆಸ್ ಪಕ್ಷವು ಈ ಭಾಗದಲ್ಲಿ ತನ್ನ ವರ್ಚಸ್ಸು ಕಳೆದುಕೊಂಡಿದೆ ಎಂದು ಯಾರಿಗಾದರೂ ಅರ್ಥವಾಗುತ್ತೆ ಎಂದು ಹೇಳಿದರು,
ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಶ್ರೀನಾಥ್ ಬದಲಾವಣೆ ಇಲ್ಲ, ಗೆಲ್ಲುವುದು ಖಚಿತ, ಕಳೆದ ಚುನಾವಣೆಯಲ್ಲಿ ಮುಸ್ಲಿಂ ರನ್ನು ಸೋಲಿಸಿ ಶ್ರೀನಿವಾಸಗೌಡರನ್ನು ಗೆಲ್ಲಿಸಿದರು, ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಕೈ ಹಿಡಿದಿದ್ದಾರೆ, ೧೯ ಕೌನಿಲ್ ಸದಸ್ಯರನ್ನು ಗೆಲ್ಲಿಸಿ ಕಳುಹಿಸಿದೆ, ಅವರಿಗೆ ನನ್ನ ಉಳಿಸಿಕೊಳ್ಳಲು ಆಗಿಲ್ಲ ಮುಂಡೆದಕ್ಕೆ, ನನ್ನ ಮುಂದೆ ಬರಲಿ ಕಾಂಗ್ರೆಸ್ ಮುಂಡೆವು, ಹಿಜಾಬ್ ವಿಷಯಕ್ಕೆ ಕಾಂಗ್ರೆಸ್ ನವರು ಯಾರು ಬಂದಿಲ್ಲ ಎಂದು ತಿಳಿಸಿದರು.