ಕೋಲಾರದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಕೋಲಾರ,ಜೂ,೨೨- ನಗರದ ಮಿನಿ ಕ್ರೀಡಾಂಗಣದಲ್ಲಿ ೯ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ ಲೋಕ ಸಭಾ ಸದಸ್ಯ ಎಸ್ ಮುನಿಸ್ವಾಮಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕೇಂದ್ರ ಆಯುಷ್ ಮಂತ್ರಾಲಯ,ಆಯುಷ್ ಇಲಾಖೆ, ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಪತಾಂಜಲಿ ಯೋಗ ಶಿಕ್ಷಣ ಸಮಿತಿ ಇವರುಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಗರದ ಶಿಕ್ಷಣ ಇಲಾಖೆ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನಿಮಾ, ಎ.ಎಫ್.ಐ, ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು,ವಿವಿಧ ಯೋಗ ಸಂಘ ಸಂಸ್ಥೆಗಳು ಭಾಗವಹಿಸಿದ್ದವು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಗುರುಗಳಾದ ನಂಜುಂಡ ಶ್ರೇಷ್ಟಿ, ಮಾರ್ಕೋಂಡಪ್ಪ, ನಾಗರಾಜ್, ಡಾ. ರಾಜೇಂದ್ರ,ವೇಣುಗೋಪಾಲ್. ಶ್ರೀನಿವಾಸ್,ಜಯಣ್ಣ, ಆಶಾ, ರಮ್ಯ, ವಿಜಯಮ್ಮ, ಮಂಜುಳ,ಪೃತ್ವಿ, ಮುಂತಾದವರು ವೇದಿಕೆಯಲ್ಲಿ ಯೋಗ ಪ್ರದರ್ಶನ ನೀಡಿದರು, ದೈಹಿಕ ಶಿಕ್ಷಕ ನಾಗರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು,
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ, ಅಪರ ಜಿಲ್ಲಾಧಿಕಾರಿ ಶಂಕರ್ ವಾಣಿಕ್ಯ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಗದೀಶ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ವಿಜಯ ಕುಮಾರ್, ಜಿ.ಪಂ. ವೆಂಕಟಚಲಪತಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರಪ್ಪ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಚೌಡಪ್ಪ,ಡಾ.ನಾಗರಾಜ್ ಮುಂತಾದವರು ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ಮುಳಬಾಗಿಲಿನ ಸೀಗೆಹಳ್ಳಿ ಸುಂದರ್, ಜಿ.ಪಂ. ಮಾಜಿ ಸದಸ್ಯೆ ಎಸ್.ಬಿ. ಮುನಿವೆಂಕಟಪ್ಪ, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ಸರ್ಕಾರಿ ವಕೀಲರಾದ ಮಾಗೇರಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್, ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಪುರೋಷೋತ್ತಮ್, ಬಿ.ಎಲ್. ಲಕ್ಷ್ಮೀ ನಾರಾಯಣ, ಕಾಡುಗುರು ನಾಗಭೋಷಣ್, ಮುಂತಾದವರು ಯೋಗ ಪ್ರದರ್ಶನದಲ್ಲಿ ಭಾಗವಹಿಸಿದ್ದರು,
ನಗರದ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಳೆಯ ಮುನ್ನೆಚ್ಚರಿಕೆಯ ಕ್ರಮವಾಗಿ ಮಿನಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು, ಸ್ಥಳದ ಅಭಾವದ ಹಿನ್ನಲೆಯಲ್ಲಿ ಮಿನಿ ಕ್ರೀಡಾಂಗಣದ ಮುಂಭಾಗದ ರಸ್ತೆಯಲ್ಲೂ ಸಾವಿರಾರು ಮಂದಿ ಯೋಗ ಪಟುಗಳು ಯೋಗ ಪ್ರದರ್ಶನವನ್ನು ನೀಡಿದರು, ಕಾರ್ಯಕ್ರಮಕ್ಕೆ ಪೋಲಿಸ್ ಇಲಾಖೆ ಸೋಕ್ತ ಬಂದೋಬಸ್ತ್ ಸಾಥ್ ನೀಡಿತು,