
ಕೋಲಾರ, ಮಾ,೨೨- ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಶುಕ್ರವಾರ ರಾತ್ರಿ ಶ್ರೀನಿವಾಸಪುರದ ಶಾಸಕ ಕೆ.ಆರ್.ರಮೇಶ್ ಕುಮಾರ್, ಮತ್ತು ವಿಧಾನಪರಿಷತ್ ಸದಸ್ಯ ನಸ್ಸೀರ್ ಆಹಮದ್ ಅವರು ಬೇಟಿ ಮಾಡಿ ಕೋಲಾರದಲ್ಲಿ ಸ್ವರ್ಧಿಸಲು ಒಪ್ಪಿಸಿದ್ದಾರೆ. ಸಿದ್ದರಾಮಯ್ಯ ಅವರು ಸಹ ಸ್ವರ್ಧಿಸಲು ಸಮ್ಮತಿಸಿದ್ದಾರೆ ಎಂದು ಕೋಲಾರದ ಶಾಸಕ ಕೆ. ಶ್ರೀನಿವಾಸಗೌಡ ಸ್ವಷ್ಟ ಪಡೆಸಿದರು,
ನಗರದ ತಮ್ಮ ಗೃಹ ಕಚೇರಿಯಲ್ಲಿ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆದ ೧೦ ಮಂದಿ ರೋಗಿಗಳಿಗೆ ೨,೨೦ ಲಕ್ಷರೂ ಗಳ ಇಪ್ಕೋ ಸೇವಾ ಸಂಸ್ಥೆಯ ಚೆಕ್‌ಗಳನ್ನು ವಿತರಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು,
ಸಿದ್ದರಾಮಯ್ಯ ಅವರನ್ನು ಪ್ರಥಮವಾಗಿ ಕೋಲಾರದಿಂದ ಸ್ವರ್ದಿಸಲು ಆಹ್ವಾನಿಸಿದ್ದು ನಾನೇ. ಅವರ ಸಹ ಕಳೆದ ೩-೪ ತಿಂಗಳಿಂದ ೩-೪ ಭಾರಿ ಕೋಲಾರಕ್ಕೆ ಬೇಟಿ ನೀಡಿದ್ದು ಕೋಲಾರದಿಂದ ಸ್ವರ್ಧಿಸಲು ಹಲವು ಖಾಸಗಿ ಸಂಸ್ಥೆಗಳಿಂದ ಸಮೀಕ್ಷೆಗಳನ್ನು ಮಾಡಿಸಿ ಅದರ ವರದಿಯನ್ನು ತಿಳಿದು ನಂತರವೇ ಸ್ವರ್ಧಿಸಲು ಸಮ್ಮತಿಯನ್ನು ಘೋಷಿಸಿದ್ದರು. ಜೂತೆಗೆ ಹೈಕಮಾಂಡ್ ಸಮ್ಮತಿಸಿ ಟಿಕೆಟ್ ನೀಡ ಬೇಕೆಂದು ತಿಳಿಸಿದ್ದರು. ಈಗಾ ಹೈ ಕಮಾಂಡ್ ವರುಣಾ ಕ್ಷೇತ್ರದ ಸಲಹೆ ನೀಡಿದ ನಂತರ ಎರಡು ಕಡೆ ಸ್ವರ್ಧಿಸುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ ಎಂದು ಹೇಳಿದರು, ಸಿದ್ದರಾಮಯ್ಯ ಅವರ ಕೋಲಾರ ಕ್ಷೇತ್ರದಿಂದ ಸ್ವರ್ಧಿಸದಿದ್ದರೆ ನೀವೇನಾದರೂ ಸ್ವರ್ಧಿಸುವಿರಾ ? ಎಂಬ ಪ್ರಶ್ನೆಗೆ ಈಗಾ ಆ ಪ್ರಶ್ನೆಯೇ ಬರುವುದಿಲ್ಲ ಎಂದ ಅವರು ಒಂದು ವೇಳೆ ನಿಮ್ಮ ಪ್ರಶ್ನೆಯಂತೆ ಸಿದ್ದರಾಮಯ್ಯ ಕೋಲಾರದಲ್ಲಿ ಸ್ವರ್ಧಿಸದೆ ಇದ್ದಾಗ ನೋಡೋಣಾ ಈಗಾ ಈ ವಿಷಯ ಬಿಡಿ ಎಂದರು.
ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ಉತ್ತಮ ವಾತವರಣ ಇದೆ ಅವರು ಕೋಲಾರದಲ್ಲಿ ಸ್ವರ್ಧಿಸಿದರೆ ಗೆಲವು ಖಚಿತವಾಗಿ ಹೇಳಬಹುದಾಗಿದೆ. ಅದರೂ ಸಹ ವರುಣಾ ಸೇರಿದಂತೆ ಎರಡು ಕಡೆ ಸ್ವರ್ಧಿಸಲಿ, ಈ ಹಿಂದೆ ಹಲವಾರು ಮಂದಿ ಎರಡು ಸ್ವರ್ಧಿಸಿರುವಂತ ಉದಾಹರಣೆಗಳು ಇದೆ. ಎರಡು ಕಡೆ ಸ್ವರ್ಧಿಸುವುದು ರಾಜಕಾರಣದ ಇತಿಹಾಸದಲ್ಲಿ ಹೊಸದೇನು ಆಲ್ಲ ಎಂದು ಪ್ರತಿಪಾದಿಸಿದರು,
ಸಿದ್ದರಾಮಯ್ಯ ಅವರು ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು ಕೊಟ್ಟು ಬರಡು ಜಿಲ್ಲೆಗೆ ಜೀವ ಬರುವಂತೆ ಮಾಡಿದರು, ಕೆ.ಸಿ. ವ್ಯಾಲಿ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸಿದ ಹಿನ್ನಲೆಯಲ್ಲಿ ಅಂತರ್ಜಲ ಅಭಿವೃದ್ದಿ ಗೊಂಡಿದೆ. ಜಾನುವಾರುಗಳಿಗೆ ಮೇವು ಸಿಗುವಂತಾಗಿದೆ. ಇದರ ಜೂತೆಗೆ ಒಂದಷ್ಟು ಮಳೆಯಾಗಿ ಜಿಲ್ಲೆಯಲ್ಲಿ ನೀರಿನ ಅಭಾವ ನೀಗಿತು. ಇಲ್ಲವಾಗಿದ್ದಾರೆ ೨ ಸಾವಿರ ಪಾತಳ ಹೊಕ್ಕರು ನೀರು ಸಿಗುತ್ತಿರಲಿಲ್ಲ ಎಂದು ಕಳವಳ ವ್ಯಕ್ತ ಪಡೆಸಿದ ಅವರು ಸಿದ್ದರಾಮಯ್ಯ ಅವರು ಕೋಲಾರಕ್ಕೆ ನೀರು ನೀಡಿದ ಭಗೀರಥ ಎಂದು ಶ್ಲಾಘಿಸಿದರು,
ಯರ್‌ಗೋಳ್ ಯೋಜನೆಯು ಬಹುತೇಕ ಪೂರ್ಣಗೊಂಡಿದೆ ಅದರೆ ಉಳಿದ ಕಾಮಗಾರಿಗೆ ಮತ್ತು ಮೂರನೇ ಹಂತದ ಕೆ.ಸಿ.ವ್ಯಾಲಿ ಸಂಸ್ಕರಣೆಗೆ ಅನುದಾನವನ್ನು ಈಗಿನ ಸರ್ಕಾರ ಬಿಡುಗಡೆ ಮಾಡದ ಕಾರಣ ಭಾಕಿ ಉಳಿದಿದೆ. ಇಲ್ಲವಾಗಿದ್ದರೆ ಈ ಎರಡು ಸಮಸ್ಯೆ ಬಗೆಹರಿಯುತ್ತಿತ್ತು ಎಂದರು.
ಪ್ರಶ್ನೆಯೊಂದಕ್ಕೆ ಕಳೆದ ೩೭ ವರ್ಷಗಳಿಂದ ಇಫ್ಕೋ ಮತ್ತು ಕ್ರಿಪ್ಕೋ ಸಂಸ್ಥೆಯಿಂದ ನೂರಾರು ಕೋಟಿ ರೂ ಬಡವರಿಗೆ ಆರೋಗ್ಯ ಮತ್ತು ಉನ್ನತ ಶಿಕ್ಷಣಕ್ಕೆ ಸಹಾಯ ಧನದ ಚೆಕ್‌ಗಳನ್ನು ನಿರಂತರವಾಗಿ ಕೊಡುತ್ತಾ ಬರುತ್ತಿದ್ದೇನೆ. ಇದರಲ್ಲಿ ಯಾವೂದೇ ಜಾತಿ, ಧರ್ಮ, ಪಕ್ಷದ ಭೇಧವಿಲ್ಲದೆ ಅವರು ನೀಡುವುದನ್ನು ಸಾರ್ವಜನಿಕರಿಗೆ ಪ್ರಮಾಣಿಕವಾಗಿ ತಲುಪಿಸುತ್ತಿದ್ದೇನೆ ಎಂದು ಹೇಳಿದರು,
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಧರ್, ಗಾಂಧಿನಗರ ಮಂಜುನಾಥ್ ಮುಂತಾದವರು ಇದ್ದರು,