ಕೋಲಾರದಲ್ಲಿ ಸಂಭ್ರಮದ 77ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕೋಲಾರ,ಆ.೧೬-ಮುಂಬರುವ ದಿನಗಳಲ್ಲಿ ಕೃಷಿ, ಉದ್ಯಮ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸ್ನೇಹಿ ಜಿಲ್ಲೆಯನ್ನಾಗಿ ಕೋಲಾರವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಖಾತೆ ಸಚಿವ ಬಿ. ಎಸ್ ಸುರೇಶ್ ಭರವಸೆ ನೀಡಿದರು.
ಅವರು ಮಂಗಳವಾರ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ೭೭ ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜಿಡಿಪಿ ಹೆಚ್ಚುತ್ತಿದೆ. ಸಾಮಾನ್ಯ ಜನರ ಮುಖದಲ್ಲಿ ಮಂದಹಾಸ ಕಾಣಲಾಗುತ್ತಿದೆ. ಹತ್ತು ಹಲವು ಅಭಿವೃದ್ಧಿಪರ ಯೋಜನೆಗಳಿಂದ ಕೋಲಾರವು ಅಭಿವೃದ್ಧಿ ಕಡೆಗೆ ದಾಪುಗಲು ಹಾಕುತ್ತಿದೆ. ಎಂದರು.
ಕೆಜಿಎಫ್ ತಾಲ್ಲೂಕಿನ ಕೇಂದ್ರ ಸರ್ಕಾರದ ವಶದಲ್ಲಿದ್ದ ೯೦೦ಕ್ಕೂ ಹೆಚ್ಚು ಎಕರೆ ಜಾಗದಲ್ಲಿ ಟೌನ್ಶಿಪ್ ನಿರ್ಮಾಣ ಮಾಡಲಾಗುವುದು. ಯಾರಗೊಳ್ ಜಾಲಷಯದ ಕುಡಿಯುವ ನೀರನ್ನು ಜಿಲ್ಲೆಯ ೩ ತಾಲ್ಲೂಕುಗಳಿಗೆ ಹರಿಸುವ ಯೋಜನೆ ಈಗಾಗಲೇಪ್ರಾಯೋಗಿಕ ಹಂತದಲ್ಲಿದೆ. ಸೆಪ್ಟೆಂಬರ್ ಮಾಸಾಂತ್ಯದಲ್ಲಿ ಜಿಲ್ಲೆಯ ಜನತೆಗೆ ಕುಡಿಯುವ ನೀರು ಲಭ್ಯವಾಗುವಂತೆ ಮಾಡುವ ಗುರಿ ಹೊಂದಲಾಗಿದೆ ಎಂದರು. ವಿವಿಧ ಇಲಾಖೆಗಳ ಅಭಿವೃದ್ಧಿ ವಿಶೇಷಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕೋಲಾರ ಕ್ಷೇತ್ರದ ಲೋಕಸಭಾ ಸದಸ್ಯರಾದ ಎಂ. ಮುನಿಸ್ವಾಮಿ,ಶಾಸಕರಾದ ಕೊತ್ತೂರು ಜಿ ಮಂಜುನಾಥ್,ವಿಧಾನ ಪರಿಷತ್ ಸದಸ್ಯರಾದ ಎಂ ಎಲ್ ಅನಿಲಕುಮಾರ್, ಇಂಚರ ಗೋವಿಂದರಾಜು ಸೇರಿದಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ , ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮದ ೧೦ ಸಿಬ್ಬಂದಿಗಳಿಗೆ ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ಎಸ್ ಸುರೇಶ್ ಹಾಗೂ ಜನಪ್ರತಿನಿಧಿಗಳು ನೀಡಿ ಗೌರವಿಸಿದರು.
ಕು. ಧರಣಿ, ಕೀರ್ತನ ಪಾಂಡ್ಯನ್, ಖುಡ್ಸಿಯ ನಸೀರ್, ನಾಗೇಶ್, ಎಂ ಎಸ್ ಕೌಶಿಕ್, ರವಿಶಂಕರ್ ಎಂ ಎನ್., ಇವರ ಜೊತೆಗೆ ಅಂಗಾಂಗ ದಾನ ಕೊಯ್ಲು ಮಾಡಲು ಶ್ರಮಿಸಿದ ವೈದ್ಯರ ತಂಡಕ್ಕೆ ಹಾಗೂ ದಾನಿಯ ಮಾತೃಶ್ರೀ ಯವರಿಗೆ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ಎಲ್ಲ ಪುರಸ್ಕೃತರು ಉಪಸ್ಥಿತರಿದ್ದರು.