ಕೋಲಾರದಲ್ಲಿ ರಾಜ ಗಣಪತಿ ಪ್ರತಿಷ್ಠಾಪನೆ

ಕೋಲಾರ,ಸೆ,೧೪-ನಗರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯ ಸರ್ಕಲ್‌ನಲ್ಲಿ ಅಖಂಡ ಭಾರತ ವಿನಾಯಕ ಮಹಾಸಭಾದಿಂದ ೧೦ನೇ ವರ್ಷದ ವಿನಾಯಕ ಪ್ರತಿಷ್ಟಾಪನೆಗೆ ಮಂಗಳವಾರ ಚಪ್ಪರದ ಪೂಜೆ ನೆರವೇರಿಸಲಾಯಿತು.
ಕೆಡಿಎ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಜಿಲ್ಲೆಗೆ ಶಾಶ್ವತ ಶುದ್ದ ಕುಡಿಯುವ ನೀರಿಗಾಗಿ ಅಗ್ರಹಿಸಿ ೨೦ ಅಡಿ ಎತ್ತರದ ಕೋಲಾರದ ರಾಜಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ, ಸೆ.೧೮ ರಿಂದ ೨೫ ರವರೆಗೆ ಎಂಟು ದಿನಗಳ ಕಾಲ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಸೆ.೧೯ ರಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ನೇತೃತ್ವದಲ್ಲಿ ನಗೆಹಬ್ಬ ಹಮ್ಮಿಕೊಳ್ಳಲಾಗಿದೆ, ಗುರುಕಿರಣ್ ನೇತೃತ್ವದ ವಾದ್ಯಗೋಷ್ಠಿಗೆ ಚಿತ್ರ ನಟನಟಿಯರು ಭಾಗವಹಿಸಲಿದ್ದಾರೆ. ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು.
ಮಹಾಸಭಾ ಮುಖಂಡರಾದ ನಾಮಾಲ ಮಂಜು, ಸಾ.ಮಾ.ಅನಿಲ್‌ಬಾಬು, ಕಿಲಾರಿಪೇಟೆ ನಾಗ, ಎಬಿವಿಪಿ ಹರೀಶ್, ಸುರೇಶ್, ರಮೇಶ್ ರಾಜ್, ಅಡಿಕೆ ನಾಗ, ಅಚಾರಿ ಕಿಶೋರ್, ಶಶಿಕುಮಾರ್, ಅಮರ್, ಹೊಗರಿ ರವಿ, ಮಹೇಶ್, ವಿನಯ್, ಕರವೇ ಸೋಮಣ್ಣ, ಸಂದೀಪ್, ಶ್ರೀನಾಥ್, ಗಂಗಮ್ಮನಪಾಳ್ಯ ಚಂದ್ರು, ಲಕ್ಷ್ಮಣ್ ಇದ್ದರು.