ಕೋಲಾರ, ಜೂ.೨೩- ಭಾರತದ ಪ್ರಧಾನಿಯಾದ ನರೇಂದ್ರ ಮೋದಿಯವರು ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಪ್ರತಿ ವರ್ಷವು ಯೋಗ ದಿನಾಚರಣೆಯನ್ನು ಭಾರತದಾದ್ಯಂತ ಆಚರಿಸಿ ಕೊಂಡು ಬರುತ್ತಿದ್ದು ಇದು ೯ನೇ ವರ್ಷದ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು,
ನಗರದ ಮಿನಿ ಕ್ರೀಡಾಂಗಣದಲ್ಲಿ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ, ಅರೋಗ್ಯ ಇಲಾಖೆ,ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ .ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸೇರಿದಂತೆ ವಿವಿಧ ಯೋಗ ಶಿಕ್ಷಣ ಸಮಿತಿಗಳು, ಸರ್ಕರಿ ಮತ್ತು ಖಾಸಗಿ ಶಾಲಾ ಕಾಲೇಜುಗಳ ಸಹಯೋಗದಲ್ಲಿ ಆಯೋಜಿಸಿದ್ದ ೯ ನೇ ಯೋಗದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯೋಗದ ತವರು ಭಾರತ ದೇಶವಾಗಿದೆ. ಇದು ಭಾರತದ ಪ್ರಾಚೀನ ಕಲೆಯಾಗಿದೆ. ಈ ಹಿಂದೆ ಋಷಿ ಮುನಿಗಳು ಯೋಗಾ ಧ್ಯಾನಗಳಿಂದ ಸಿದ್ದಿಗಳನ್ನು ಪಡೆಯುತ್ತಿದ್ದರು. ಚಿರಾಯುಗಳಾಗಿ ಅರೋಗ್ಯವನ್ನು ಸಧೃಡಗೊಳಿಸಿ ಕೊಳ್ಳುತ್ತಿದ್ದರು. ಭಾರತದ ಶ್ರೀಮಂತ ಯೋಗ ಶಿಕ್ಷಣವನ್ನು ವಿದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. “ಯೋಗ ಫಾರ್ ವಸುದೈವ ಕುಟುಂಬಕಂ” ಹರ್ ಅಂಗನ್ ಯೋಗ ಹಾಗೂ ಪ್ರತಿ ಅಂಗಳದಲ್ಲಿ ಯೋಗ ಎಂಬ ಘೋಷ ವಾಕ್ಯವನ್ನು ವ್ಯಾಕನಿಸಿದ ಅವರು ಪ್ರತಿ ಯೊಬ್ಬರು ಯೋಗವನ್ನು ಕಲಿತು ಭೋಗದ ಜೀವನ ನಡೆಸುವಂತಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷದಲ್ಲಿ ಶತಶೃಂಗ ಪರ್ವತದಲ್ಲಿನ ತೇರಹಳ್ಳಿಯ ತಪಲಿನ ವಿಶಾಲವಾದ ಪ್ರದೇಶದಲ್ಲಿ ಸುಮಾರು ೨೫ ಸಾವಿರ ಮಂದಿ ಶಾಲಾ, ಕಾಲೇಜು, ಯುವ ಸಂಘಟನೆಗಳು. ಸಂಘ. ಸಂಸ್ಥೆಗಳನ್ನು ಒಗ್ಗೂಡಿಸಿ ಕೊಂಡು ಯೋಗ ಪ್ರದರ್ಶನ ನೀಡಿದ್ದು ಭಾರತದ ಇತಿಹಾಸದಲ್ಲಿ ಪ್ರಪ್ರಥಮವಾಗಿದ್ದು, ಗಿನ್ನಿಸ್ ದಾಖಾಲೆಯಾಗಿದೆ ಎಂದು ಹರ್ಷ ವ್ಯಕ್ತ ಪಡೆಸಿದರು.ಇದೇ ಸಂದರ್ಭದಲ್ಲಿ ಯೋಗ ಶಿಕ್ಷಣ ಸಮಿತಿ ತರಭೇತಿದಾರರು ಯೋಗ ಪ್ರದರ್ಶನ ನಡೆಸಿ ಕೊಟ್ಟರು. ಸುಮಾರು ೩ ಸಾವಿರಕ್ಕೂ ಹೆಚ್ಚು ಮಂದಿ ಯೋಗ ಪಟುಗಳು ಭಾಗವಹಿಸಿದ್ದದರು .
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಂಕರ್ ವಾಣಿಕ್ಯಂ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕರಿ ಡಾ. ಜಗದೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ವಿಜಯ ಕುಮಾರ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದೇರ್ಶಕಿ ಶಶಿಕಲಾ, ಪಿ.ಯು ಇಲಾಖೆಯ ಉಪನಿದೇಶಕ ರಾಮಚಂದ್ರಪ್ಪ, ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚೌಡಪ್ಪ, ಡಾ.ನಾಗರಾಜ್, ಕ್ರೀಡಾ ಸಂಘದ ಮಂಜುನಾಥ್, ಜಿ.ಪಂ.ವೆಂಕಟಚಲಪತಿ, ಪತಾಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ನಂಜುಂಡಯ್ಯ ಶ್ರೇಷ್ಠಿ. ಮಾರ್ಕೋಂಡಪ್ಪ, ನಾಗರಾಜ್, ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಪುರುಷೋತ್ತಮ್, ಕಾಡಿಗುರು ನಾಗಬೊಷಣ್, ಲಕ್ಷ್ಮೀ ನಾರಾಯನ್ ಮುಂತಾದವರು ಉಪಸ್ಥಿತರಿದ್ದರು.