ಕೋಲಾರದಲ್ಲಿ ಮಹಿಳೆಯರಿಗೆ ವಿಷಯಾಧಾರಿತ ಕಾರ್ಯಾಗಾರ

ಕೋಲಾರ,ಮಾ,೧೫- ಪ್ರತಿದಿನ ಉಪಯೋಗಿಸುವ ವಸ್ತುಗಳನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಹಣ್ಣು, ತರಕಾರಿ ಸಿಪ್ಪೆ ಹಾಗೂ ಇತರೆ ಪದಾರ್ಥಗಳಿಂದ ತಯಾರಿಸಬಹುದು. ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸದಿರುವುದರಿಂದ ಮಣ್ಣಿಗೆ ಮತ್ತು ನೀರಿಗೆ ಯಾವುದೇ ರೀತಿಯ ಮಾಲಿನ್ಯವಾಗುವುದಿಲ್ಲ ಎಂದು ಸಂಪನ್ಮೂಲವ್ಯಕ್ತಿ ಮಂಜುಳ ಭೀಮರಾವ್ ತಿಳಿಸಿದರು,
ಭಾರತ ಸರ್ಕಾರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಲಾಯ ನೆಹರು ಯುವ ಕೇಂದ್ರ, ಕೋಲಾರ ಹಾಗೂ ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಕೊಂಡರಾಜನಹಳ್ಳಿ ಡಿಜಿಟಲ್ ಸೇವಾ ಕೇಂದ್ರ ಹತ್ತಿರ ಹಮ್ಮಿಕೊಂಡಿದ್ದ ಸ್ಥಳೀಯ ವಿಷಯಾಧಾರಿತ ಕಾರ್ಯಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನೆಯಲ್ಲಿ ಮಹಿಳೆಯರು ಬಿಡುವಿನ ವೇಳೆಯಲ್ಲಿ ಮಾಡಿಕೊಳ್ಳಬಹುದಾದ ಲಿಕ್ವಿಡ್ ಸೋಪು, ದೂಪ, ಹಲ್ಲುಪುಡಿ ಮತ್ತು ಸ್ನಾನ ಚೂರ್ಣಗಳನ್ನು ಪ್ರತ್ಯಕ್ಷವಾಗಿ ಮಾಡಿ ತೋರಿಸಿದರು. ಇವುಗಳನ್ನು ಯಾರಿಸಲು ಕಿತ್ತಳೆ ಹಣ್ಣಿನ ಸಿಪ್ಪೆ, ನಿಂಬೆ ಹಣ್ಣಿನ ಸಿಪ್ಪೆ, ಮಾವಿನ ಎಲೆ, ಬೇವಿನ ಎಲೆ, ಬಿಲ್ವಪತ್ರೆ, ತೆಂಗಿನಕಾಯಿ ಚಿಪ್ಪಿನ ಇದ್ದಿಲು, ಉಪ್ಪು, ಅರಿಶಿಣ, ಕಡಲೆ ಇಟ್ಟು, ಬೆಲ್ಲ, ಪಚ್ಚಕರ್ಪೂರ ಮತ್ತು ಜೇನು ತುಪ್ಪವನ್ನು ಅಂಟುವಾಳಕಾಯಿ, ಬೆಟ್ಟದ ನಲ್ಲಿಕಾಯಿಗಳನ್ನು ಬಳಸಲಾಯಿತು. ತಯಾರಿಸುವ ವಿಧಾವನ್ನು ಮಹಿಳೆಯರಿಂದಲೇ ಮಾಡಿಸಿದ್ದರಿಂದ ಅವರಿಗೂ ಕಲಿತ ಅನುಭವದಿಂದ ಸಂತೋಷಪಟ್ಟರು
ಕಲಾವಿದ ಬಿ.ವೆಂಕಟಾಚಲಪತಿ ಮಾತನಾಡಿ ರಾಸಾಯನಿಕ ವಸ್ತುಗಳ ಬಳಕೆಯಿಂದ ನಮ್ಮ ಆರೋಗ್ಯದ ಮತ್ತು ಚರ್ಮದ ಕಾಂತಿಯು ಕುಂದುತ್ತದೆ. ಆಗಾಗಿ ನೈಸರ್ಗಿಕ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಆರೋಗ್ಯ ಹೆಚ್ಚಿಸಿಕೊಂಡು ಅರ್ಥಿಕವಾಗಿ ಉಳಿತಾಯ ಮಾಡಬೇಕು. ಇದೇ ರೀತಿ ತಾವು ಕಲಿತದದ್ದನ್ನು ಇತರರಿಗೆ ತಿಳಿಸುವ ಮೂಲಕ ಸಾಮಾಜಕ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಹೆಚ್ಚಿನ ಸಮಯವಿದ್ದರೆ ತಾವು ತಯಾರಿಸಿದ ಪದಾರ್ಥಗಳನ್ನು ಮಾರಾಟ ಮಾಡಿ ಸ್ವಯಂ ಉದ್ಯೋಗ ಸೃಷ್ಠಿ ಮಾಡಿಕೊಳ್ಳಬಹುದು ಎಂದರು.
ಈನೆಲ ಈಜಲ ಕಲಾ ತಂಡವು ಸಾಂಸ್ಕೃತಿ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟ ಸಂದರ್ಭದಲ್ಲಿ ಕೊಂಡರಾಜನಹಳ್ಳಿ ಲಕ್ಷ್ಮಿದೇವಿ, ಕುಡುವನಹಳ್ಳಿ ಗಣೇಶಪ್ಪ ಎಂ, ಮಂಜುಳಮ್ಮ, ವಿ.ನಾರಾಯಣಸ್ವಾಮಿ, ಪ್ರಮೀಳಮ್ಮ ಹಾಜರಿದ್ದರು.