ಕೋಲಾರದಲ್ಲಿ ಕ್ರಿಸ್ತಮಸ್ , ಮಕ್ಕಳನ್ನು ಅಕರ್ಷಿಸಿದ ಸಾಂತಕ್ಲಾಸ್

ಕೋಲಾರ,ಡಿ,೨೫- ಯೇಸು ಕ್ರಿಸ್ತನ ಜನ್ಮದಿನವಾದ ಇಂದು ಕ್ರಿಸ್ತಮಸ್ ಕೈಸ್ತ ಧರ್ಮಿಯರಿಗೆ ವರ್ಷದಲ್ಲಿಯೇ ಪ್ರಮುಖ ಹಬ್ಬವಾಗಿದ್ದು ದೇಶದ ಎಲ್ಲಡೆ ಈ ಹಬ್ಬವನ್ನು ಸಡಗರ ಸಂಭ್ರದಿಂದ ಆಚರಿಸುತ್ತಿದ್ದಾರೆ.
ಕರ್ತನಾದ ಯೇಸು ಪ್ರಭು ಇಡೀ ಜಗತ್ತಿಗೆ ಪ್ರೀತಿ, ದಯೆ ಮತ್ತು ಸೌಹಾರ್ದತೆಯ ಸಂದೇಶವನ್ನು ನೀಡಿದನು ಎಂಬುವ ಬಲವಾದ ನಂಬಿಕೆಯಿದೆ. ಕ್ರಸ್ತನ ಜನ್ಮ ದಿನವನ್ನೆ ಕ್ರಿಸ್ ಮಸ್ ಹಬ್ಬವಾಗಿ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ ಕೊನೆಯ ವಾರದ ೨೫ ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ಕ್ರಿಸ್ ಮಸ್ ಎಂದ ಕೊಡಲೇ ಮೊದಲು ಎಲ್ಲರಿಗೂ ನೆನಪಾಗುವುದು ಟ್ವೀಕಲ್ ಟ್ವೀಕಲ್ ಲಿಟ್ಲ್ ಸ್ಟಾರ್ ಎಂಬ ಪದ್ಯದ ಮಿನುಗುವ ನಕ್ಷತ್ರ, ಕ್ರಿಸ್ ಮಸ್ ಟ್ರೀ, ಸಾಂತಕ್ಲಾಸ್ ಕ್ಯಾರಲ್ಸ್ (ಭಜನೆ) ಹಾಗೂ ಮನೆ, ಮನೆಗಳಲ್ಲಿ ಮಾಡುವಂತ ವಿಶೇಷವಾದ ಬಗೆ ಬಗೆಯ ತಿಂಡಿ ತಿನಿಸುಗಳು, ಬಣ್ಣ ಬಣ್ಣದ, ವಿವಿಧ ವಿನ್ಯಾಸಗಳನ್ನು ಹಲವಾರು ರುಚಿಗಳನ್ನು ಹೊಂದಿರುವಂತ ಕೇಕ್ ಮತ್ತು ಉಡುಗೊರೆಗಳನ್ನು ಪರಸ್ಪರ ಹಂಚುವಂತ ಒಂದು ಪ್ರಮುಖ ಆಚರಣೆಯಾಗಿದೆ.
ಡಿ.೨೪ರ ಭಾನುವಾರ ರಾತ್ರಿಯೇ ೧೨ ಗಂಟೆಯ ನಂತರ ಕ್ರಿಸ್ತ ಸಮುದಾಯದ ಪ್ರಮುಖರ ಮನೆಗಳ ಬಳಿ ವಾಹನಗಳಲ್ಲಿ ಸಾಮೂಹಿಕವಾಗಿ ಭಜನೆ ಮಾಡುತ್ತಾ ಅಗಮಿಸುವ ತಂಡವು ಶುಭಷಯಗಳನ್ನು ತಿಳಿಸುವುದು ಸಂಪ್ರಾದಯವಾಗಿದೆ. ಇವರೊಂದಿಗೆ ಸಾಂತಕ್ಲಾಸ್ ವಿಶೇಷ ಅಕರ್ಷಣೆಯಾಗಿರುತ್ತಾರೆ. ಮನೆಗಳಲ್ಲಿ ಕ್ರಿಸ್ ಮಸ್ ಗಿಡವನ್ನು ಸುಂದರವಾಗಿ ಅಲಂಕರಿಸಿ ಅದಕ್ಕೆ ಬಣ್ಣ,ಬಣ್ಣದ ದೀಪಗಳಿಂದ ಅಲಂಕರಿಸಿರುತ್ತಾರೆ. ಕ್ರಿಸ್ ಮಸ್ ಟ್ರೀ ಸಂತೋಷದ ಸಂಕೇತವೆಂಬುವುದು ಕೈಸ್ತರ ವಾಸ್ತುವೆಂದು ಪರಿಗಣಿಸಲಾಗಿದೆ.
ಕ್ರಸ್ ಮಸ್ ಆಚರಣೆ ಮಾಡುವ ಪ್ರತಿ ಮನೆ,ಮನೆಗಳ ಬಳಿ ಬಣ್ಣ, ಬಣ್ಣದ ಕಾಗದಗಳಿಂದ ಅಲಂಕರಿಸಿರುವ ಸ್ಟಾರ್‌ಗಳನ್ನು, ಅಕಾಶದ ಬುಟ್ಟಿಗಳನ್ನು ಕಟ್ಟಿ ಅದರೊಳಗೆ ಝಗಮಗಿಸುವಂತ ವಿದ್ಯುತ್ ದೀಪವನ್ನು ಹೊತ್ತಿಸಿರುತ್ತಾರೆ. ಕೆಲವೊಂದು ಮಿನುಗುವ ದೀಪಗಳಿಂದ ಆರ್ಕಷಿಸುವಂತೆ ಸಿಂಗರಿಸಿರುತ್ತಾರೆ. ಇನ್ನ ಕೆಲವರು ಅನುಕೊಲಸ್ಥರು ರೋಮನ್ ಕ್ಯಾಥೋಲಿಕ್ ಪಂಗಡದವರು ವಿಶೇಷವಾಗಿ ಕ್ರಿಸ್ತನ ಜನನದ ಕಥೆಯನ್ನು ಸಾರುವಂತ ಗೋದಲಿ( ದನದ ಕೊಟ್ಟಿಗೆ)ಯನ್ನು ಕೃತಕವಾಗಿ ನಿರ್ಮಿಸಿ ಅದರಲ್ಲಿ ಬಾಲ ಯೇಸುವಿನ ಗೊಂಬೆಯನ್ನು ಮಲಗಿಸಿರುತ್ತಾರೆ. ಪಕ್ಕದಲ್ಲಿಯೇ ಯೇಸುವಿನ ತಂದೆ ಯೋಸೆಪ್ ಮತ್ತು ತಾಯಿ ಮರಿಯಮ್ಮ, ಗೋದಲಿಯಲ್ಲಿರುವ ಹಸು,ಕರುಗಳು, ಕುರಿಗಳು, ಬಾಲಯೇಸುವನ್ನು ಸಂದಿಸಲು ಬಂದ ಕುರುಬರು ಹಾಗೂ ಜೋಯಿಸರ ಮೂರ್ತಿಗಳನ್ನು ಇರಿಸಿ ಅಲಂಕರಿಸುವ ಮೂಲ ಕೃತಕ ಬೆತ್ಲಹೇಮ್ ಗ್ರಾಮವನ್ನೇ ಸೃಷ್ಠಿಸಿ ಮಾಡಿರುವಂತ ಅಲಂಕಾರವನ್ನು ವೀಕ್ಷಿಸುವುದೇ ಮಕ್ಕಳಿಗೆ ಸಡಗರ ಸಂಭ್ರವಾಗಿ ಕಾಣಲಿದೆ.
ಕ್ರಿಸ್‌ಮಸ್ ಹಬ್ಬದಲ್ಲಿ ಮಕ್ಕಳು ಸಾಂತಕ್ಲಾಸ್ ( ಕ್ರಿಸ್‌ಮಸ್ ಫಾದರ್) ಹಬ್ಬದ ಉಡುಗೊರೆ ತರುತ್ತಾನೆ ಎಂದು ಕಾಯುತ್ತಿರುತ್ತಾರೆ. ಅದರರಲ್ಲೂ ಸಣ್ಣ,ಪುಟ್ಟ ಮಕ್ಕಳು ಕ್ರಿಸ್ ಮಸ್ ತಾತಾ ಎಂದರೆ ಬಲು ಪ್ರೀತಿ ,ಕ್ಯಾರೆಲ್‌ಗೆ ಬರುವ ತಂಡದಲ್ಲಿ ಕಾಣುವಂತ ಸಾಂತಕ್ಲಾಸ್ ವಿಶಿಷ್ಟ ರೀತಿಯ ವೇಷ ಧರಿಸಿ ಬರುತ್ತಾರೆ ಮಕ್ಕಳು ಇವರನ್ನು ಸುತ್ತುವರೆದು ಪ್ರೀತಿಯಿಂದ ನೀಡುವಂತ ಚಾಕ್ಲಾಲೇಟ್‌ಗಳನ್ನು ಪಡೆದು ಕೊಳ್ಳುವುದು ಕಾಣ ಬಹುದಾಗಿದೆ. ಚಾಕಲೇಟ್ ಪಡೆದು ಕೊಂಡು ಬಾಯಲ್ಲಿ ಚಪ್ಪರಿಸುತ್ತಾ ಸಂತೋಷದಿಂದ ಕುಣಿದಾಡುವುದನ್ನು ನೋಡುವುದಕ್ಕೆ ಎರಡು ಕಣ್ಣುಗಳ ಸಾಲದು.ಸಾಂತಕ್ಲಾಸ್ ಸಹ ಇವರೊಂದಿಗೆ ಹೆಜ್ಜೆ ಹಾಕುವುದು ಮಕ್ಕಳಿಗೆ ಇನ್ನಷ್ಟು ಹುರುಪು ನೀಡಿದಂತಾಗುವುದು,
ಚಚ್ ಕಟ್ಟಡಗಳಿಗೆ ವಿಶೇಷ ಬಣ್ಣಗಳನ್ನು ಬಳಿದು ಉದರ ಜೂತೆಗೆ ಬಣ್ಣ ಬಣ್ಣದ ವಿವಿಧ ವಿನ್ಯಾಸಗಳಲ್ಲಿ ವಿದ್ಯುತ್ ದೀಪಗಳಿಂದ ಚರ್ಚ ಕಟ್ಟಡವನ್ನು ಅಲಂಕಾರ ಮಾಡಿರುತ್ತಾರೆ. ಕ್ರಿಸ್‌ಮಸ್‌ಗೆ ಹಲವು ತಿಂಗಳು ಇರುವಾಗದೆ ಬಣ್ಣ, ಬಣ್ಣದ ಹೊ ಗಿಡಗಳನ್ನು ಕುಂಡಗಳಲ್ಲಿ ಬೆಳೆಸಿ ಚರ್ಚ್‌ನ ಅವರಣದಲ್ಲಿ ಸಿಂಗರಿಸಿರುತ್ತಾರೆ. ಅಲ್ಲದೆ ನೀರಿನ ಕಾರಂಜಿಗಳನ್ನು ಅಳವಡಿಸಿ ಅದಕ್ಕೆ ವಿವಿಧ ಬಣ್ಣದ ದೀಪದ ಬೆಳಕಿನಲ್ಲಿ ಮ್ಯೂಸಿಕ್ ಸಣ್ಣ ಧ್ವನಿಯಲ್ಲಿ ಹಾಕಿರುತ್ತಾರೆ. ಇದರಿಂದ ಎಂಥವರ ಮನಸ್ಸಿಗೂ ಶಾಂತಿ ನೆಮ್ಮದಿಯುಂಟು ಮಾಡುತ್ತದೆ. ಇದೇ ಸಂದರ್ಭದಲ್ಲಿ ಮಕ್ಕಳು ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸುತ್ತಿರುತ್ತಾರೆ.
ಕೆಲವರು ಮಕ್ಕಳಿಗೆ ಕ್ರಿಸ್‌ಮಸ್ ಪ್ರಯುಕ್ತ ಪ್ರತಿವರ್ಷ ಅಟಿಕೆ ಗೊಂಬೆಗಳನ್ನು ಚಾಕೋಲೇಟ್‌ಗಳನ್ನು ಉಡುಗೊರೆಯಾಗಿ ನೀಡುವಂತ ಅಭ್ಯಾಸವನ್ನು ರೋಡಿಸಿ ಕೊಂಡು ಬಂದಿರುವುದನ್ನು ಈಗಲು ಕಾಣಬಹುದಾಗಿದೆ. ಸಂತಾಕ್ಲಾಸ್ ಮಾದರಿಯ ಬಟ್ಟೆಗಳನ್ನು ಹಾಕಿಕೊಂಡು ಜಿಂಗಲ್ ಬೆಲ್ ಹಾಡಿಗೆ ಹೆಜ್ಜೆ ಹಾಕಿ ಕೊಂಡು ಹಿರಿಯರನ್ನು ರಂಜಿಸುವುದು ಕಾಣಬಹುದಾಗಿದೆ.
ಇಂದು ಬೆಳಿಗ್ಗೆ ಕ್ರಿಸ್ತ ಸಮುದಾಯದವರು ಶ್ರದ್ದಾ ಭಕ್ತಿಯಿಂದ ಬೆಳಿಗ್ಗೆಯೇ ಸ್ಥಾನ ಮಾಡಿ ಹೊಸ ಉಡುಪುಗಳನ್ನು ಧರಿಸಿ ಬೆಳಗಿನ ಪ್ರಾರ್ಥನೆಗೆ ಚರ್ಚ್‌ಗೆ ಅಗಮಿಸಿ ಯೇಸು ಪ್ರಭುವಿಗೆ ಬೈಬಲ್ ಪಠಣಾ ಮಾಡುವ ಮೂಲಕ ಭಕ್ತಿ ಗೀತೆಗಳನ್ನು ಹಾಡಿದರು, ಫಾದರ್ ಬೋಧನೆಯನ್ನು ವಾಚಿಸುವ ಮೂಲಕ ಪ್ರಾರ್ಥನೆ ಸಲ್ಲಿಸಿದರು, ನಂತರ ಪರಸ್ಪರ ಶುಭಷಾಯಗಳನ್ನು ಕೋರಿದರು, ಸ್ನೇಹಿತರನ್ನು ಮನೆಗೆ ಆಹ್ವಾನಿಸಿ ಸಾಮೂಹಿಕವಾಗಿ ಭೋಜನವನ್ನು ಸವಿಯುವ ಮೂಲಕ ಸಂಭ್ರಮಿಸಿದರು.