ಕೋಲಾರ, ಮಾ,೨೯- ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ಅವರು ಏಪ್ರಿಲ್ ೫ ರಂದು ಕೋಲಾರಕ್ಕೆ ಅಗಮಿಸುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಎಂಬ ಉಪನಾಮ ಹೊಂದಿರುವ ಮೂರು ಮಂದಿಯ ವಿರುದ್ದ ಮಾಡಿದ ಅರೋಪದಲ್ಲಿ ಎಲ್ಲರನ್ನೂ ಒಟ್ಟುಗೊಡಿಸಿ ಸಾರೇ ಮೋದಿ ಎಂದು ಬಳಿಸಿದ ಪದವನ್ನು ತಿರುಚಿ ನ್ಯಾಯಾಲಯದಲ್ಲಿ ದಾಖಲು ಮಾಡಿ ಶಿಕ್ಷೆಯ ತೀರ್ಪು ಬರುವಂತೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಾಂಶವನ್ನು ಬಹಿರಂಗ ಪಡೆಸಲಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಕಳೆದ ೨೦೧೯ರ ಲೋಕ ಸಭಾ ಚುನಾವಣೆಯ ಪ್ರಚಾರದಲ್ಲಿ ಈ ಅರೋಪವನ್ನು ಕೋಲಾರದಲ್ಲಿ ಬಹಿರಂಗ ಭಾಷಣದಲ್ಲಿ ಮಾಡಿದ ಹಿನ್ನಲೆಯಲ್ಲಿ ಕೋಲಾರದಲ್ಲಿಯೇ ಇದರ ಸತ್ಯಾಂಶವನ್ನು ಬಹಿರಂಗ ಪಡೆಸಿ ಹೋರಾಟವನ್ನು ಪ್ರಾರಂಭಿಸಲಿದ್ದಾರೆ ಎಂದರು.
ದೇಶದಲ್ಲಿ ಬಜೆಪಿ ಪಕ್ಷದ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಪ್ರಜಾಪ್ರಭುತ್ವದ ಸಂವಿಧಾನಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಲೋಕಸಭಾ ಸದಸ್ಯತ್ವದಿಂದ ಅಮಾನತ್ತು ಪಡೆಸುವ ಮೂಲಕ ವಾಕ್ ಸ್ವತಂತ್ರ್ಯವನ್ನು ಮೊಟಕು ಗೊಳಿಸಿ ಜನವಿರೋಧಿ ತೀರ್ಮಾನವನ್ನು ಕೈಗೊಂಡಿರುವುದು ಖಂಡನೀಯ ಎಂದು ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಬೇಸರ ವ್ಯಕ್ತ ಪಡೆಸಿದರು.
ಕೋಲಾರದ ಜಿ.ಪಂ. ಮಾಜಿ ಸದಸ್ಯ ರಘುನಾಥ್ ಎಂಬುವರು ಗುಜರಾಜ್ ಶಾಸಕರ ಮೂಲಕ ನ್ಯಾಯಾಲಯದಲ್ಲಿ ದಾವೆ ಹೊಡಿದ್ದಾರೆ.ನ್ಯಾಯಲಯದಲ್ಲಿ ಸಾರೇ ಎಂಬ ಪದವನ್ನು ತಿರುಚುವ ಮೂಲಕ ದಿಕ್ಕು ತಪ್ಪಿಸಿ ಜೂತೆಗೆ ವಿಚಾರಣೆ ನಡೆಸಿ ನ್ಯಾಯಾಮೂರ್ತಿಗಳನ್ನು ಬದಲಾವಣೆ ಮಾಡಿ ಬೇರೆಯವರನ್ನು ನೇಮಿಸುವ ಮೂಲಕ ಶಿಕ್ಷೆಗೆ ಗುರಿ ಪಡೆಸಿದ್ದಾರೆ.ಲೋಕಸಭಾ ಸಭಾ ಸದಸ್ಯತ್ವದಿಂದ ಅನಾರ್ಹಗೊಳಿಸುವ ನ್ಯಾಯಾಮೂರ್ತಿಗಳ ಮೂಲಕ ದುರುದ್ದೇಶದಿಂದ ೨ ವರ್ಷ ಶಿಕ್ಷೆ ಕೊಡಿಸಲಾಗಿದೆ ಎಂದು ದೂರಿದರು.
ಅದರೆ ಮೇಲ್ಮನವಿಗೆ ಹಲವು ನ್ಯಾಯಾಲಯಗಳಿರುವುದು ಬೇರೆ ವಿಷಯವಾದರೂ ಸಹ ಲೋಕಸಭಾ ಸಭಾಪತಿಗಳಿಗೆ ನ್ಯಾಯಾಲಯದ ಅದೇಶ ತಲುಪುವ ಮುನ್ನವೇ ರಾಹುಲ್ ಗಾಂಧಿ ಅವರನ್ನು ಅಧಿವೇಶನಕ್ಕೆ ಬಾರದಂತೆ ಅನರ್ಹದ ಅದೇಶವನ್ನು ಒತ್ತಾಯಪೂರ್ವಕವಾಗಿ ಮಾಡಿರುವುದು ಸ್ವಷ್ಟವಾಗಿದೆ ಎಂದು ದೂರಿದರು,
ರಾಹುಲ್ ಗಾಂಧಿ ಅಧಿವೇಶನದಲ್ಲಿ ಬಿಜೆಪಿಯ ಹಲವು ಕರ್ಮಕಾಂಡಗಳನ್ನು ಪ್ರಸ್ತಾಪಿಸುತ್ತಾರೆ ಎಂಬ ಭೀತಿಯಿಂದ ಲೋಕಸಭೆ ಅಧಿವೇಶನಕ್ಕೆ ಬಾರದಂತೆ ತಡೆಯಲು ಈ ಸಂಚು ರೂಪಿಸಿ ಮೌಲ್ಯ ರಹಿತವಾದ ಕೆಲಸವನ್ನು ಮಾಡಿದ್ದಾರೆಂದು ಆರೋಪಿಸಿದರು.
ರಾಹುಲ್ ಗಾಂಧಿಯವರು ಭಾರತದಲ್ಲಿ ೩೭೫೦ ಕಿ.ಮಿ. ಪಾದಯಾತ್ರೆಯು ಅತ್ಯಂತ ಯಶಸ್ವಿಯಾಗಿರುವುದು ಕಂಡು ಬಿಜೆಪಿಗೆ ಭೀತಿ ಉಂಟಾಗಿದೆ. ಭಾರತವು ಜಾತ್ಯಾತೀತ ದೇಶವಾಗಿದೆ. ಸಂವಿಧಾನವನ್ನು ಉಳಿಸಿ ಕೊಳ್ಳುವುದು ನಮ್ಮೆಲ್ಲಾರ ಕರ್ತವ್ಯವಾಗಿದೆ ಎಂದರು. ನಾವೆಲ್ಲಾ ಒಟ್ಟಾಗಿ ಕೊಡಿ ಬಾಳುವಂತಾಗ ಬೇಕು.ಭಾರತದಲ್ಲಿ ಎಲ್ಲಾ ಜಾತಿ, ಧರ್ಮಗಳು ಸಹೋದರತ್ವದ ಭಾವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಪ್ರಾಣ ತ್ಯಾಗ ಬಲಿದಾನಗಳನ್ನು ಮಾಡಲಾಗಿದೆ,ಸಹಬಾಳ್ವೆ ಸಾಮರಸ್ಯ, ಸೌಹಾರ್ದತೆಗಳ ಕುರಿತು ನೀಡಿದ ಸಂದೇಶಗಳಿಂದ ಭಾರತ ಜೋಡೋ ಯಾತ್ರೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
೨೦೨೩ರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವು ಗೆಲವು ಸಾಧಿಸಲಿದೆ. ೨೦೨೪ರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವು ಇತರೆ ಪಕ್ಷಗಳೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದ ಅವರು ಲೋಕಸಭಾ ತೀರ್ಪಿನ ಬಗ್ಗೆ ಅನೇಕ ಪಕ್ಷಗಳು ಅಕ್ಷೇಪಿಸಿ ಖಂಡಿಸಿದೆ. ಈ ತೀರ್ಪು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದರು.
ಕೆಲವು ಪ್ರಭಾವಿತರ ಖಾತೆಗೆ ಸರ್ಕಾರದ ಹಣ ನೇರವಾಗಿ ಜಮ ಅಗಿರುವುದನ್ನು ರಾಹುಲ್ ಗಾಂಧಿ ಅಧಿವೇಶನದಲ್ಲಿ ಪ್ರಸ್ತಾಪಿಸಿ ಬಹಿರಂಗ ಪಡೆಸಲಿದ್ದಾರೆ ಎಂಬ ಭೀತಿಯಿಂದ ಸಣ್ಣ ವಿಷಯವನ್ನು ದೊಡ್ಡದಾಗಿ ಬಿಂಬಿಸಿ ತಪ್ಪು ಅರ್ಥ ಬರುವಂತೆ ನ್ಯಾಯಾಲಯದ ದಿಕ್ಕು ತಪ್ಪಿಸಿ ಶಿಕ್ಷೆಯನ್ನು ಉದ್ದೇಶ ಪೂರ್ವಕವಾಗಿ ಸದಸ್ಯತ್ವದಿಂದ ಅನಾರ್ಹಗೊಳಿಸಲಾಗಿದೆ ಎಂದರು.