
ಕೋಲಾರ,ಏ.೨-ಕಾಂಗ್ರೇಸ್ ಪಕ್ಷದವರು ಕೋಲಾರಕ್ಕೆ ರಾಹುಲ್ ಗಾಂಧಿ ಅವರನ್ನು ಕರೆ ತಂದರೆ ನಾವು ವಿಶ್ವನಾಯಕರಾದ ನರೇಂದ್ರ ಮೋದಿಯವರನ್ನು ಕರೆ ತರುತ್ತೇವೆ. ರಾಹುಲ್ ಗಾಂಧಿ ಬಂದರೇ ಏನು ಸತ್ಯನೂ ಇಲ್ಲ ಜಯನೂ ಇಲ್ಲ ರಾಹುಲ್ ಕರೆದು ಬಂದು ಸಿದ್ದರಾಮಯ್ಯ ಇನ್ನು ಅಟ್ಟರೂ ಫೈಲೋರ್ ಅಗಿಬಿಡುತ್ತಾರೆ ಎಂದು ಬಿಜೆಪಿ ಪಕ್ಷದ ಕೋಲಾರ ವಿಧಾನಸಭಾ ಕ್ಷೇತ್ರದ ಸಂಭಾವನೀಯ ಅಭ್ಯರ್ಥಿ ವರ್ತೂರು ಪ್ರಕಾಶ್ ತಿಳಿಸಿದರು,
ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ ನಾನು ಕಳೆದ ಒಂದು ವರ್ಷದಿಂದ ಬಿಜೆಪಿ ಪಕ್ಷವನ್ನು ಸಂಘಟನೆಯನ್ನು ಮಾಡುತ್ತಿದ್ದೇನೆ. ಕಳೆದ ಎರಡು ಅವಧಿಯಲ್ಲಿ ಶಾಸಕನಾಗಿ ಕ್ಷೇತ್ರದ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ವರ್ಧಿಸಿದ್ದರೆ ಚೆನ್ನಾಗಿತ್ತು. ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದರೆ ಚುನಾವಣಾ ರಂಗ ರಂಗೇರಿತ್ತಿತ್ತು ಇಲ್ಲದೆ ಹೋದರೆ ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷವು ಬಿಜೆಪಿಗೆ ಸ್ವರ್ಧೆ ನೀಡುವಲ್ಲಿ ವಿಫಲವಾಗಲಿದೆ ಎಂದು ಅಭಿಪ್ರಾಯ ಪಟ್ಟರು,
ಈಗಾಗಲೇ ಗ್ರಾಮೀಣ ಭಾಗದಲ್ಲಿ ಚುನಾವಣಾ ಪ್ರಚಾರ ಕಾರ್ಯ ಮುಗಿಸಿದ್ದೇನೆ. ನಾಳೆಯಿಂದ ನಗರದ ೩೫ ವಾರ್ಡ್‌ಗಳಿಗೂ ಭೇಟಿ ನೀಡಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತೇನೆ. ಬಿಜೆಪಿ ವಿರುದ್ದ ಯಾರೇ ಸ್ವರ್ಧಿಸಿದರೂ ಎದುರಿಸುತ್ತೇನೆ ಎಂಬ ವಿಶ್ವಾಸವನ್ನು ವ್ಯಾಕ್ತ ಪಡೆಸಿದರು,
ರಾಹುಲ್ ಗಾಂಧಿಗೂ ಕೋಲಾರಕ್ಕೂ ಏನು ಸಂಬಂಧ ? ರಾಹುಲ್ ಗಾಂಧಿಯವರನ್ನು ಕರೆದು ಕೊಂಡು ಬಂದರೆ ಕಾಂಗ್ರೇಸ್ ಮತ್ತು ಸಿದ್ದರಾಮಯ್ಯ ಬದಲಾಗುತ್ತಾರಾ.? ರಾಹುಲ್ ಗಾಂಧಿಯವರಿಗೆ ಇಮೇಜ್ ಇಲ್ಲ. ಏನೊಂದು ಬದಲಾವಣೆಯೂ ಅಗುವುದಿಲ್ಲ. ಹಿಂದುಳಿದ ವರ್ಗದವರ, ಆಲ್ಪಸಂಖ್ಯಾತರ ಮೀಸಲಾತಿ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ ಅವರು ಅದೇ ಭಾಷಣ ಮಾಡುತ್ತಾರೆ. ತಲೆ ಕೆಟ್ಟಿರುವರು ಓಟ್‌ಗಾಗಿ ಇನ್ನೊಂದು ಅರ್ಜಿ ಹಾಕಿಕೊಳ್ಳುತ್ತಾರೆ ಎಂದು ವ್ಯಂಗವಾಡಿದರು,
ಕಾಂಗ್ರೇಸ್ ಪಕ್ಷದವರು ರಾಹುಲ್ ಗಾಂಧಿಯವರ ಸಮಾವೇಶಕ್ಕೆ ಇಡೀ ರಾಜ್ಯದಿಂದ ಜನರನ್ನು ಕರೆ ತಂದರೂ ಅವರ ಕೈಯಲ್ಲಿ ೫೦ ಸಾವಿರ ಜನರನ್ನು ಸೇರಿಸಲು ಸಾಧ್ಯವಿಲ್ಲ. ಜೆ.ಡಿ.ಎಸ್. ಬಗ್ಗೆ ನನಗೆ ಮೊದಲಿಂದಲೂ ಸಾಫ್ಟ್ ಕಾರ್ನರ್ ಇದೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಬಗ್ಗೆಯೂ ಮೊದಲಿನಿಂದಲೂ ನಂಬಿಕೆ ಇದೆ. ಬಿಜೆಪಿ ಪಕ್ಷವು ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡಿ ಗೆಲ್ಲಿಸುತ್ತೇನೆ.ಚುನಾವಣೆಯಲ್ಲಿ ಕೆ.ಶ್ರೀನಿವಾಸಗೌಡರು ಕಳೆದ ೫ ವರ್ಷದಿಂದ ಮಲಗಿರುವುದೇ ನನಗೆ ಆಶೀರ್ವಾದವಿದೆ ಎಂದರು.