ಕೋರ್ಟ್ ಖರ್ಚಿಗಾಗಿ ಮಾಡಿದ ಆರೋಪಿಗಳು ಕದ್ದದು: 25ಬೈಕುಗಳು

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ4: ಕೊಲೆ, ಅತ್ಯಾಚಾರ ಪ್ರಕರಣಗಳಲ್ಲಿ ಸಿಲುಕಿದ ಆರೋಪಿಗಳು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದು ಕೋರ್ಟ್ ಖರ್ಚಿಗಾಗಿ ವಿಜಯನಗರ, ಬಳ್ಳಾರಿ ಮತ್ತು  ಕೊಪ್ಪಳ ಜಿಲ್ಲೆಯ ವಿವಿಧಡೆ 25 ಬೈಕ್‍ಗಳನ್ನು ಕದ್ದು ಮತ್ತೊಂದು ಪ್ರಕರಣದಲ್ಲಿ ಸಿಲುಕುವಂತಾಗಿದೆ.
ಬಳ್ಳಾರಿ , ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ನಕಲಿ ಕೀ ಬಳಸಿ ಜನನಿಭಿಡ ಪ್ರದೇಶಗಳಲ್ಲಿ ಬಿಟ್ಟಿರುವ ಬೈಕುಗಳನ್ನು ಕದ್ದು ಸದ್ಯ ಹೊಸಪೇಟೆ ಪೊಲೀಸರ ವಶವಾಗಿದ್ದಾರೆ. ಒಟ್ಟು 25 ಬೈಕ್ ಕಳ್ಳತನ ಪ್ರಕರಣದಲ್ಲಿ 5 ಆರೋಪಿಗಳು ಪಾಲ್ಗೊಂಡಿದ್ದು ನಾಲ್ವರನ್ನು ಹೊಸಪೇಟೆ ಪೊಲೀಸರು ಹಾಗೂ ಒಬ್ಬನನು ಕೊಪ್ಪಳದ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
29 ರಂದು ನಗರಠಾಣೆಯ ಪಿಎಸ್‍ಐ ಗಸ್ತಿನಲ್ಲಿದ್ದಾಗ ಕನಕದಾಸ ವೃತ್ತದಬಳಿ ಅನುಮಾನಗೊಂಡು ಹಿಂಬಾಲಿಸಿ ತಡೆದು ವಿಚಾರಿಸಲಾಗಿ ಬೈಕ್ ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ವಿಚಾರಣೆ ಮುಂದುವರೆಯುತ್ತಿದ್ದಂತೆಯೇ 1,2,3, ಹೀಗೆ ಸಂಖ್ಯೆ ಬಂದು ನಿಂತದ್ದು 25ಕ್ಕೆ ನಾವು 5ಜನ ಸೇರಿ ಬರೋಬರಿ 25 ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳು ಬೈಕುಗಳನ್ನು ಕಡಿಮೆ ಬೆಲೆಗೆ ವಿವಿಧಡೆ ಮಾರಾಟಮಾಡಿದ್ದು ಅವುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಈಲ್ಲ ಪೊಲೀಸ ವರಿಷ್ಠಾಧಿಕಾರಿ
ಜಿಲ್ಲಾ ಪೊಲೀಸವರಿಷ್ಠಾಧಿಕಾರಿ ಸೈದುಲು ಅಡಾವತ್, ಹೆಚ್ಚುವರಿ ವರಿಷ್ಠಾಧಿಕಾರಿ  ಲಾವಣ್ಯ, ಹೊಸಪೇಟೆ ಉಪ ವಿಭಾಗದ  ಡಿಎಸ್‍ಪಿ ವಿಶ್ವನಾಥರಾವ್ ಕುಲಕರ್ಣಿ ಇವರ ಮಾರ್ಗದರ್ಶನದಂತೆ ಇನ್ಸ್‍ಪೆಕ್ಟರ್ ಶ್ರೀನಿವಾಸ ಎಂ, ಪಿಎಸ್‍ಐ ಬಿ. ಕುಮಾರ್ ಎಎಸ್‍ಐ ಕೋದಂಡಪಾಣಿ ಸಿಬ್ಬಂದಿಗಳಾದ ರಾಮರೆಡ್ಡಿ, ಶ್ರೀನಿವಾಸ, ಫಣಿರಾಜ್, ತಿಮ್ಮಪ್ಪ, ಅಡಿವೆಪ್ಪ, ಗಾಳೆಪ್ಪ, ಲಿಂಗರಾಜ್, ಮಲಕಾಜಪ್ಪ, ಯಮನೂರುನಾಯಕ್ ಆರೋಪಿಯ ಪತ್ತ ಹಾಗೂ ಬೈಕುಗಳನ್ನು ವಶಪಡಿಸಿಕೊಳ್ಳುವಲ್ಲಿ ಶ್ರಮವಹಿಸಿದ್ದಾಕ್ಕಾಗಿ ಕಾರ್ಯವನ್ನು ಶ್ಲಾಘಿಸಿದ್ದಾರೆ.