ಕೋರ್ಟ್ ಕಲಾಪಗಳಿಗೆ ಅಡ್ಡಿ : ಅನಧಿಕೃತ ಅಂಗಡಿಗಳ ತೆರವು

ಸಿಂಧನೂರು,ಜ.೧೭- ನಗರದಲ್ಲಿ ನ್ಯಾಯಾಲಯದಲ್ಲಿ ನಡೆಯುವ ಕಾರ್ಯ ಕಲಾಪಗಳಿಗೆ ಶಬ್ದ ,ವಾಹನಗಳಿಗೆ ರಸ್ತೆ ಸೇರಿದಂತೆ ಅಡ್ಡಿ ಪಡಿಸುತ್ತಿದ್ದ ಅನಧಿಕೃತ ಡಬ್ಬಿ ,ಅಂಗಡಿಗಳನ್ನು ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ಜೆ.ಎಂ.ಎಫ್.ಸಿ ಸಿಂಧನೂರು ಅವರ ಆದೇಶದ ಮೇರೆಗೆ ನಗರಸಭೆ ವತಿಯಿಂದ ಇಂದು ಹತ್ತರು ಡಬ್ಬಿ (ಅಂಗಡಿ) ತೆರವುಗೊಳಿಸಿದರು.
ನ್ಯಾಯಾಲಯ ಕಾಂಪೌಂಡ್ ಹೊರಗೊಡೆಗೆ ಹೊಂದಿಕೊಂಡು ಗಂಗಾವತಿ ರಸ್ತೆಯಲ್ಲಿನ ಪ್ರವಾಸಿ ಮಂದಿರದ ವರೆಗೆ ಹಾಗೂ ನ್ಯಾಯಾಲಯದ ಹಿಂಬಾಗ ಮಹಿಬೂಬ ಕಾಲೋನಿ ಹೋಗುವ ರಸ್ತೆವರೆಗಿನ ಕಾಂಪೌಂಡ್ ವರೆಗೆ ಅನಧಿಕೃತ ಇರುವ ಹೂ – ಹಣ್ಣಿನ ಅಂಗಡಿಗಳು ,ಡಬ್ಬಿ ,ಟೀ ಪಾಯಿಂಟ್ ,ಝರಾಕ್ಸ್ ,ಹೋಟೆಲ್ ಅಂಗಡಿಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ತಿಳಿಸಿದರೂ ಮನ್ನಣೆ ಕೊಡದ ಅಂಗಡಿ ಮಾಲಿಕರಿಗೆ ಇಂದು ಕೊನೆಯಾದಾಗಿ ನಗರಸಭೆ ಹಾಗೂ ಪೋಲಿಸ್ ಇಲಾಖೆ ಸಹಯೋಗದಲ್ಲಿ ಹತ್ತಾರು ಅಂಗಡಿಗಳನ್ನು ತೆರವುಗೊಳಿಸಿ ನ್ಯಾಯಾಲಯದ ಕಾರ್ಯ ಕಲಾಪಗಳು ನಿಶಬ್ದವಾಗಿ ,ಶಾಂತಿಯುತ ರೀತಿಯಲ್ಲಿ ನಡೆಯಲು ಮತ್ತು ನ್ಯಾಯಾಧೀಶರ ವಾಹನಗಳು ,ನ್ಯಾಯವಾದಿಗಳ ,ಕಕ್ಷಿದಾರರ ವಾಹನಗಳಿಗೆ ಅಡ್ಡಿಯಾಗುತ್ತದೆಂಬ ಕಾರಣದಿಂದ ಇಂದು ತೆರವುಗೊಳಿಸಿ ಸುಲಭ ಕಾರ್ಯ ಕಲಾಪಕ್ಕೆ ಅವಕಾಶ ಮಾಡಿ ಕೊಡಲಾಯಿತು.
ಇದೇ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ,ಕಿಶನ್ ರಾವ್ ,ಲಕ್ಷ್ಮೀ ಪತಿ ,ಮಹೇಶ ಹಾಗೂ ಎ.ಎಸ್. ಐ ವಿರೇಶ ಸೇರಿದಂತೆ ಅನೇಕರು ತೆರವಿನಲ್ಲಿ ಉಪಸ್ಥಿತರಿದ್ದರು.