ಕೋರೋನ ಸೋಂಕಿರಿಗೆ ತರಕಾರಿ-ಮೊಟ್ಟೆ ವಿತರಣೆ

ಜಗಳೂರು.ಮೇ.3;  ತಾಲೂಕಿನ ಮೆದಗಿನಕೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ  ಶಾಸಕ ಎಸ್.ವಿ  ರಾಮಚಂದ್ರಪ್ಪ ಅವರ ಮಾರ್ಗಸೂಚಿಯಂತೆ  ಪ್ರಾರಂಭವಾಗಿರುವ ಕೋವಿಡ್ ಕೇರ್ ಸೆಂಟರ್ ಉಸ್ತುವಾರಿ ವಹಿಸಿಕೊಂಡಿರುವ  ಸಹಾಯಕ ನೋಡಲ್ ಅಧಿಕಾರಿಯಾದ ಬಿ. ಮಹೇಶ್ವರಪ್ಪ ಅವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಕೋರೋನ ಸೋಂಕಿರಿಗೆ ತರಕಾರಿ ಮೊಟ್ಟೆ ಬಾಳೆಹಣ್ಣು , ನೀರು ಮತ್ತು ಶೌಚಾಲಯ ಸೇರಿದಂತೆ ಕೋವಿಡ್ ಸೋಂಕಿತ  ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಕೋವಿಡ್ ಕೇರ್ ಸೆಂಟರ್ ಉಸ್ತವಾರಿ ಸಿಬ್ಬಂದಿಗಳಿಗೆ  ಮತ್ತು ಅಡುಗೆ ಭಟ್ಟರಿಗೆ ಸಲಹೆ ನೀಡಿದರು  ಕೋರೋನ  ವೈರಸ್ ಭಯವಿಲ್ಲದೆ ಜೀವದ ಹಂಗನ್ನೇ ತೊರೆದು ಕೋವಿಡ್ ಸೋಂಕಿತರ  ನೆರವಿಗೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ