ಕೋರೋನ ವೈರಸ್ಸಿನ ಜಾಗೃತಿಗೆ ಸಾರ್ವಜನಿಕರ ಶ್ಲಾಘನೀಯ

ಜಗಳೂರು.ಏ.೨೭; ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕೋರೋನ  ವೈರಸ್  ಜಾಗೃತಿ ಅಭಿಯಾನ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರಾಜು ಡಿ ಬಣಕರ್ ಮತ್ತು ಪೊಲೀಸ್ ಇಲಾಖೆ  ಉಪನಿರೀಕ್ಷಕ ಸಂತೋಷ್ ಬಾಗೋಜಿ ನೇತೃತ್ವದಲ್ಲಿ  ಮಾಡಲಾಯಿತು.ನಂತರ ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರಾಜು ಡಿ ಬಣಕರ್  ಮಾತನಾಡಿ .ಪ ಪಂ ಇಲಾಖೆ ಹಾಗೂ ಪೋಲಿಸ್ ಇಲಾಖೆ ಸಂಯುಕ್ತಶ್ರಯದಲ್ಲಿ ಪಟ್ಟಣದ ಮಾರಮ್ಮನ ದೇವಾಸ್ಥಾನ ರಾಮಾಯ ರಸ್ತೆ ಓಂಕಾರೇಶ್ವರ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಹಾಗೂ ಪಟ್ಟಣ ಪಂಚಾಯತಿ ಪೊಲೀಸ್ ಇಲಾಖೆ ಸಿ.ಡಿ.ಪಿ.ಓ ಇಲಾಖೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಯಿತು.ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರಿಗೆ ಕೋರೊನ ನಿಯಮಗಳನ್ನು ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರಬೇಕು ಮುಖಕ್ಕೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೋರೋನ ವೈರಸ್ಸನ್ನು ಹೋಗಲಾಡಿಸಲು ಸಹಕರಿಸಬೇಕೆಂದು ಪ.ಪಂ ಮುಖ್ಯ ಅಧಿಕಾರಿ ರಾಜು ಬಣಕಾರ್ ತಿಳಿಸಿದರು. ನಂತರ ಪೊಲೀಸ್ ಇಲಾಖೆ ಆರಕ್ಷಕ ಉಪ ನಿರೀಕ್ಷಕ ಮಾತನಾಡಿ ಪಟ್ಟಣದಲ್ಲಿ ಸಾರ್ವಜನಿಕರು ಓಡಾಡುವಾಗ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಮತ್ತು ಅನವಶ್ಯಕವಾಗಿ  ಬೀದಿಗಿಳಿಯ ಬಾರದು ಇಂದು ಸಂಜೆ 6 ಗಂಟೆಯಿಂದ ಹದಿನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಮಾಡಲಾಗುತ್ತದೆ ಸಾರ್ವಜನಿಕರು ಮತ್ತು ವ್ಯಾಪಾರಿಗಳು ವರ್ತಕರು  ಇದಕ್ಕೆ ಸರಿಸಬೇಕು ಯಾರು ಗುಂಪು ಸೇರಬಾರದು  ಸ್ಯಾನಿಟೈಜರ್ ಬಳಸಬೇಕು ಈ ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಮತ್ತು ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಕೋವಿಡ್ ಲಸಿಕೆ ಜ್ವರ ಮತ್ತು ಕೆಮ್ಮು ನೆಗಡಿ ಇಂಥ ಲಕ್ಷಣಗಳು ಕಂಡರೆ ನೇರವಾಗಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆಗೊಳಗಾದ ಬೇಕು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ವಿವಿಧ ಬಡಾವಣೆಗಳ ಸಾರ್ವಜನಿಕರಿಗೆ  ಕೋರೋನ  ವೈರಸ್ಸಿನ ಗಂಟಲು ದ್ರವ ಪರೀಕ್ಷಿಸಲಾಯಿತು ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಮಂಜಪ್ಪ ಕಂದಾಯ ನಿರೀಕ್ಷಕ ಸಂತೋಷ್ ಕುಮಾರ್ ಪ .ಪಂ ಆರೋಗ್ಯ ನಿರೀಕ್ಷಕ ಖಿಫಾಯತ್ ಅಮದ್ ಸಿಡಿಪಿಓ ಬಿರೇಂದ್ರ ಕುಮಾರ್ ಮತ್ತು  ಎಲ್ಲಾ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.