ಕೋರೋನಾ 2ನೇ ಅಲೆ ಬೀತಿ ಮಾಸ್ಕ್ ಇಲ್ಲದೆ ಸಂಚರಿಸಿದರೆ ದಂಡ-ತಹಶೀಲ್ದಾರ ಎಚ್ಚರಿಕೆ

ಕುರುಗೋಡು.ಏ.8 ಮಹಾಮಾರಿ ಕೋರೋನಾ 2ನೇ ಅಲೆಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅದರ ನಿಯಂತ್ರಣಕ್ಕಾಗಿ ಪ್ರತಿಯೊಬ್ಬ ನಾಗರಿಕರು ಮಾಸ್ಕ್ ಇಲ್ಲದೆ ಸಂಚರಿಸಬಾರದು ಒಂದುವೇಳೆ ಸಂಚರಿಸಿದರೆ ದಂಡ ಖಚಿತ ಎಂದು ಕುರುಗೋಡು ತಹಶೀಲ್ದಾರ್ ಕೆ.ರಾಘವೇಂದ್ರರಾವ್ ಎಚ್ಚರಿಸಿದರು.
ಅವರು ಬುಧವಾರ ಸಂಜೆ ಪಟ್ಟಣದ ಮುಖ್ಯ ವೃತ್ತದಲ್ಲಿ ಕಂದಾಯ, ಪೋಲೀಸ್, ಪುರಸಭೆ, ಆರೋಗ್ಯ ಸೇರಿದಂತೆ ಇತರೆ ಇಲಾಖೆಗಳ ನೇತ್ರುತ್ವದಲ್ಲಿ ಮಾಸ್ಕ್ ಇಲ್ಲದೆ ಸಂಚರಿಸಿದ ನಾಗರಿಕರಿಗೆ ದಂಡವಿಧಿಸಿ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಪರುಶುರಾಮ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ಮಾಸ್ಕ್‍ಧರಿಸಬೇಕು, ಸಮಾಜಿಕ ಅಂತರ ಕಾಪಾಡಿಕೊಂಡು ಕೋರೋನಾ ಹಿಮ್ಮಟ್ಟಿಸಿರಿ ಎಂದು ಮನವಿಮಾಡಿದರು.
ನಂತರ ಮಾಸ್ಕ್ ಇಲ್ಲದ ನಾಗರಿಕರು, ಬೈಕ್ ಸವಾರರು, ಇತರೆ ವಾಹಗಳಲ್ಲಿ ಮಾಸ್ಕ್ ಇಲ್ಲದೆ ಸಂಚರಿಸುವ ನಾಗರಿಕರಿಗೆ ಸುಮಾರು ರೂ.2000 ದಂಡ ವಿದಿಸಿದರು. ಗ್ರೇಡ್-2 ತಹಶೀಲ್ದಾರ್ ಮಲ್ಲೇಶಪ್ಪ, ಎಎಸ್‍ಐ. ಹೂವಣ್ಣ, ಗ್ರಾಮಲೆಕ್ಕಾದಿಕಾರಿ ಯಮನೂರಪ್ಪ, ಪುರಸಭೆ ಮ್ಯಾನೇಜರ್ ಭಾಸ್ಕರ್‍ರಾವ್, ಮೋಹನ್‍ಶಾಸ್ತಿ, ರಾಜೇಶ್, ಹಿ.ಆರೋಗ್ಯಸಹಾಯಕ ಮಂಜುನಾಥ, ಸ್ವರ್ಣಲತ, ಹುಲಿಗೆಮ್ಮ, ಜಡಿಮೂರ್ತಿ, ಶಿವುರಾಜ ಸೇರಿದಂತೆ ಇತರೆ ಸಿಬ್ಬಂದಿವರ್ಗ ಇದ್ದರು.