ಕೋರೋನಾ ಸೋಂಕು ಆರಂಭದಲ್ಲಿ ಭಾರತದ ಕ್ರಮ: ವಿಶ್ವಕ್ಕೆ ಸ್ಪೂರ್ತಿ

ಜಿನೇವಾ,ಅ.25- ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಭಾರತ ಕೈಗೊಂಡ ಕ್ರಮಗಳಿಂದಾಗಿ ಡಿಜಿಟಲ್ ಮತ್ತು ಸುಸ್ಥಿರ ಆರ್ಥಿಕತೆಯ ಪೂರಕವಾಗಿದೆ ಎಂದು ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಅಜೆಂಡಾ ಮುಖ್ಯಸ್ಥ ಕ್ಲಾಸ್ ಸ್ಚವೆಬ್ ಹೇಳಿದ್ದಾರೆ.

ಸೋಂಕು ಕಾಣಿಸಿಕೊಂಡ ತಕ್ಷಣ ಅದಕ್ಕೆ ಭಾರತ ಸೂಕ್ತವಾಗಿ ಸ್ಪಂದಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿತ್ತು ಇದಿಂದಾಗಿ ಭಾರತದಲ್ಲಿ ಇನ್ನಷ್ಟು ಸೋಂಕು ಪ್ರಮಾಣ ಹೆಚ್ಚುವುದು ಕಡಿಮೆಯಾಯಿತು ಇದರಿಂದಾಗಿ ಆರ್ಥಿಕತೆ ಚೇತರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕೊರೋನಾ ಸೋಂಕಿನ ನಡುವೆಯೂ ಭಾರತ ಆಶಾವಾದಿ ಆಗಿದೆ. ಬಲವಾದ ಮತ್ತು ಶಕ್ತಿಶಾಲಿ ರಾಷ್ಟ್ರ ನಿರ್ಮಿಸುವ ಉದ್ದೇಶವನ್ನು ಮುಂದುವರಿಸಿದೆ. ಇದು ಜಗತ್ತಿನ ಅನೇಕ ದೇಶಗಳಿಗೆ ಸ್ಫೂರ್ತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿ ಸಂಸ್ಥೆಯೊಂದಕ್ಕೆ ಮಾತನಾಡಿರುವ ಅವರು ವಿಶ್ವ ಆರ್ಥಿಕ ವೇದಿಕೆ ಸ್ಥಾಪಿಸಿ ಐವತ್ತು ವರ್ಷಗಳು ಕಳೆದಿವೆ ಈ ಅವಧಿಯಲ್ಲಿ ಅನೇಕ ಮಿತಿಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಕೊರೋನಾ ಸೋಂಕು ನಿರ್ವಹಣೆ ಸಂಬಂಧ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳು ಜಗತ್ತಿನ ಇತರ ದೇಶಗಳಿಗೆ ಮಾದರಿಯಾಗುವ ಜೊತೆಗೆ ಸೋಂಕು ಕನ್ನಡ ತಡೆಯಲು ಸಾಧ್ಯವಾಗದೆ ಇಲ್ಲದಿದ್ದರೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ

ಭಾರತದಲ್ಲಿ ವಲಸೆ ಕಾರ್ಮಿಕರ ರಕ್ಷಣೆಗೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ 80 ಕೋಟಿ ಕಾರ್ಮಿಕರಿಗೆ ಅನೇಕ ಅನುಕೂಲ ಮಾಡಿಕೊಟ್ಟಿದೆ. ಜೊತೆಗೆ ಸಣ್ಣ ಉದ್ದಿಮೆದಾರರಿಗೆ ಮತ್ತಷ್ಟು ಅನುಕೂಲವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೊರೋನಾ ಕೊರೋನಾ ಸೋಂಕಿನ ನಡುವೆಯೂ ಭಾರತ ,ದೇಶ ಕಟ್ಟುವ ಕೆಲಸದಲ್ಲಿ ನಿರತವಾಗಿದೆ ಡಿಜಿಟಲ್ ಮತ್ತು ಸುಸ್ಥಿರ ಆರ್ಥಿಕ ಸಂಕಷ್ಟದ ಸಮಯದಲ್ಲಿ ಚೇತರಿಕೆಗೆ ಸಹಕಾರಿಯಾಗುತ್ತದೆ ಇದು ಜಗತ್ತಿನ ವಿವಿಧ ದೇಶಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದ್ದಾರೆ

ಅನೇಕ ದೇಶಗಳು ವಿಫಲ:

ಜಗತ್ತಿನ ಹಲವು ದೇಶಗಳು ಕೊರೋನಾ ಸೋಂಕು ನಿರ್ವಹಣೆಗೆ ಹೆಚ್ಚಿನ ಗಮನ ಹರಿಸಿವೆ ಆದರೆ ಬಹುತೇಕ ದೇಶಗಳು ನಿರ್ಲಕ್ಷ್ಯ ವಹಿಸಿವೆ.ಇದರಿಂದಾಗಿ ಇನ್ನಷ್ಟು ಸೋಂಕು ಹೆಚ್ಚಾಗಲು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವುದು ನೂರು ವರ್ಷಕ್ಕೆ ಒಮ್ಮೆ ಬಾರಿ. ಹೀಗಾಗಿ ಇಂತಹ ಸೋಂಕಿನ ವಿರುದ್ಧ ಜನರು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ತಿಳಿಸಿದ್ದಾರೆ