ಕೋರೋನಾ ವಾರಿಯರ್ಸ್ಗೆ ಆಹಾರ ನೀಡಿಕೆ

ಹರಪನಹಳ್ಳಿ,ಮೇ.೨೭; ಲಾಕ್ ಡೌನ್ ಸಂದರ್ಭದಲ್ಲಿ ಜನರ ಓಡಾಟ ತಡೆದು ಕೋರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಕೋರೋನಾ ವಾರಿಯರ್ಸ್ ಗಳಾದ ಪಟ್ಟಣದ ಪೋಲೀಸ್ ಹಾಗೂ ಗೃಹ ರಕ್ಷಕದಳದ ಸಿಬ್ಬಂದಿಗಳಿಗೆ ಸ್ಥಳೀಯ ಆಡಿಟರ್ ಬೂದಿ ನಾಗರಾಜಭಟ್ ಅವರು ಬುಧವಾರ ಮದ್ಯಾಹ್ನ ಊಟದ ವ್ಯವಸ್ಥೆ ಮಾಡಿದ್ದರು.ಇಲ್ಲಿಯ ಪೋಲೀಸ್ ಠಾಣಾ ಆವರಣದಲ್ಲಿ ಸಿದ್ದ ಪಡಿಸಿಕೊಂಡ ಆಹಾರದ ಪೊಟ್ಟಣಗಳನ್ನು ಪಿಎಸ್ ಐ ಪ್ರಕಾಶ ಸಿಬ್ಬಂದಿಗೆ ವಿತರಿಸಿದರು. ಬಿ.ಮಾದವರಾವ್ , ಕೊಟ್ರೇಶ ಇದ್ದರು.