ಕೋರೋನಾ: ಪ್ಯಾಕೇಜ್‍ಗೆ ಮಂಠಾಳಕರ ಸ್ವಾಗತ

ಬೀದರ:ಮೇ.20: ಕೋವಿಡ್ ಎರಡನೇ ಅಲೆಯಲ್ಲಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಸಮಾಜದ ವಿವಿಧ ದುಡಿಯುವ ವರ್ಗಗಳಿಗೆ ಜನಪ್ರೀಯ ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪನವರು ಪ್ಯಾಕೇಜ್ ಘೋಷಣೆಯಿಂದ ಅನೂಕೂಲವಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಠಾಳಕರ ವಿಶ್ವಸ ವ್ಯಕ್ತ ಪಡಿಸಿದ್ದಾರೆ.

ರಾಜ್ಯದ ಜನರು ಕಷ್ಟದಲ್ಲಿ ಇರುವಾಗ ಮುಖ್ಯಮಂತ್ರಿಗಳು 1250 ಕೋಟಿ ರೂ.ಗಳ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಸರಕಾರ ಜನರ ಪರವಾಗಿದೆ ಎಂಬು ಸ್ಪಷ್ಟವಾಗುತ್ತಿದೆ.

ಅಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರಿಗೆ, ಕಟ್ಟಡ ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕರಿಗೆ, ಕಲಾವಿದರಿಗೆ, ಚಮ್ಮಾರರು, ಕಮ್ಮಾರರಿಗೆ, ಕ್ಷೌರಿಕರು, ಅಗಸರು, ದರ್ಜಿಗಳು, ಹಮಾಲಿಗಳು, ಕುಂಬಾರರು, ಭಟ್ಟಿ ಕಾರ್ಮಿಕರು, ಅಕ್ಕಸಾಲಿಗರು, ಮೆಕ್ಯಾನಿಕಗಳು, ಗೃಹ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ ವಿವಿಧ ವೃತ್ತಿಯವರಿಗೆ ಪ್ಯಾಕೇಜದಿಂದ ಲಾಭವಾಗಲಿದೆ.