ಕೋರೋನಾ ನಿರ್ಮೂಲನೆಗಾಗಿ ಹೋಮ, ಹವನ.

 ಹರಪನಹಳ್ಳಿ.ಮೇ.೩೧; ಕೋರೋನಾ ಮಹಾಮಾರಿಯನ್ನು  ತೊಲಗಿಸಲು  ಹರಪನಹಳ್ಳಿ ತಾಲೂಕಿನ ಹೊಂಬಳಗಟ್ಟಿಯಲ್ಲಿ  ಕುಟುಂಬ ವೊಂದು ಕಳೆದ 20 ದಿನಗಳಿಂದ ವಿವಿಧ ಹೋಮ, ಹವನಗಳನ್ನು ಕೈಗೊಂಡಿದೆ. ಹೊಂಬಳಗಟ್ಟಿ ಗ್ರಾಮದ ವಿಶ್ವಾರಾದ್ಯ ಮಠದಲ್ಲಿ  ಸುರಪುರ ಹಿರೇಮಠದ ಹೊಳಿಬಸಯ್ಯ ಶಾಸ್ತಿಗಳು ತಮ್ಮ ಕುಟುಂಬ ಸಮೇತರಾಗಿ  ಮೃತ್ಯಂಜಯ ಹೋಮ, ಗಣ ಹೋಮ, ದನ್ವಯಂತರಿ ಹೋಮ, ನವಗ್ರಹ ಹೋಮ ಹೀಗೆ ವಿವಿಧ ಹೋಮಗಳನ್ನು ಮಾಡುತ್ತಿದ್ದಾರೆ.
ಪ್ರತಿದಿನ ಸಂಜೆ 5 ಗಂಟೆಯಿಂದ ರಾತ್ರಿ 8.30 ರವರೆಗೆ ಮೂರುವರೆ ತಾಸು ಹೋಮ,ಹವನ, ಯಾಗ, ಯಜ್ಞೆ ಮಾಡಿ ಕೋರೋನಾ ನಿರ್ಮೂಲನೆಗೆ ಪ್ರಾರ್ಥಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅರ್ಚಕ ಹೊಳಿಬಸಯ್ಯಶಾಸ್ತ್ರೀಗಳು,ಕಲಿತ ವಿದ್ಯೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಉಪಯೋಗವಾಗಲಿ, ಕೋರೋನಾ ಸೇರಿದಂತೆ ಸರ್ವ ವೈರಾಣುಗಳು  ನಿರ್ಮೂಲನೆಯಾಗಿ ನಾಡಿಗೆ ಒಳ್ಳೆಯದಾಗಲಿ ಎಂದು ಈ ಹೋಮ ಕೈಗೊಂಡಿದ್ದು, ಕೋರೋನಾ ಸಂಪೂರ್ಣ ತೊಲಗುವವರೆಗೂ  ಈ ನಮ್ಮ ಕಾರ್ಯ ಮುಂದುವರೆಯುತ್ತದೆ ಎಂದು ಹೇಳಿದರು. ಇವರು ಹರಪನಹಳ್ಳಿ ಪಟ್ಟಣದ ಮಹಲಿಂಗೇಶ್ವರ ದೇವಾಲಯದ ಅರ್ಚಕರಾಗಿಯೂ ಕೆಲಸ ಮಾಡುತ್ತಾರೆ.  ಈ ಹೋಮ ಕಾರ್ಯದಲ್ಲಿ ಹೊಳಿಬಸಯ್ಯ ಶಾಸ್ತಿಗಳ ಜೊತೆ ಪತ್ನಿ, ಮೂವರು ಮಕ್ಕಳು, ಸೊಸೆ ಹಾಗೂ ಮುಖ್ಯ ಶಿಕ್ಷಕ ಮಂಜುನಾಥ ಪೂಜಾರ ರವರು ಪ್ರತಿನಿತ್ಯ ಪಾಲ್ಗೊಳ್ಳುತ್ತಿದ್ದಾರೆ.