ಕೋರೋನಾ ನಿಯಂತ್ರಣಕ್ಕೆ ತಾಲೂಕುಆಡಳಿತವತಿಯಿಂದ ಅಗತ್ಯಕ್ರಮ- ತಹಶೀಲ್ದಾರ

ಕುರುಗೋಡು.ಏ.18 ಮಹಾಮಾರಿ ಕೋರೋನಾ ನಿಯಂತ್ರಣಕ್ಕೆ ಕುರುಗೋಡು ತಾಲೂಕು ಆಡಳಿತ ವತಿಯಿಂದ ಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದು ಕುರುಗೋಡು ತಹಸೀಲ್ದಾರ್ ಕೆ.ರಾಘವೇಂದ್ರರಾವ್ ಹೇಳಿದರು.
ಅವರು ಸೋಮವಾರ ಪಟ್ಟಣದ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಕರೆಯಲಾಗಿದ್ದ ಕೋರೋನಾ ನಿಯಂತ್ರಣದ ಕುರಿತು ಏರ್ಪಡಿಸಲಾಗಿದ್ದ ಜನಜಾಗ್ರುತಿ ಸಭೆಯಲ್ಲಿ ಮಾತನಾಡಿದ ಅವರು, ಕುರುಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಕೊರೆತೆ ಹೆಚ್ಚಾಗಿದ್ದು, ಅದನ್ನು ನೀಗಿಸಲು ಜಿಲ್ಲಾಡಳಿತಕ್ಕೆ ಈಗಾಗಲೇ ಪ್ರಸ್ತಾವನೆಯನ್ನು ರವಾನಿಸಲಾಗಿದೆ ಎಂದು ನುಡಿದರು. ಆದ್ದರಿಂದ ಎಲ್ಲರೂ ಕೋರೋನಾ ನಿಯಮಗಳನ್ನು ಚಾಚು ತಪ್ಪದೇ ಪಾಲಿಸುವಂತೆ ವಿನಂತಿಸಿದರು.
ಕಂಪ್ಲಿಕ್ಷೇತ್ರದ ಶಾಸಕ ಜೆಎನ್.ಗಣೇಶ ಮಾತನಾಡಿ, ಕುರುಗೋಡು ತಾಲೂಕು ವ್ಯಾಪ್ತಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೋರೋನಾ ಹೆಚ್ಚಾಗಿದೆ. ಇದರ ನಿಯಂತ್ರಣಕ್ಕಾಗಿ ಯರ್ರಂಗಳಿಗಿ, ಮತ್ತು ಮುಷ್ಟಗಟ್ಟೆ ಗ್ರಾಮಗಳಲ್ಲಿನ ಮುರಾರ್ಜಿ ದೇಸಾಯಿ ವಸತಿ ನಿಲಯಗಳನ್ನು ತಾತ್ಕಾಲಿಕವಾಗಿ ಕೋವಿಡ್ ಸೆಂಟರ್‍ಗಳನ್ನಾಗಿ ತೆರೆಯಲು ಚಿಂತನೆ ನಡೆದಿದೆ ಎಂದು ನುಡಿದರು. ಜೊತೆಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಮತ್ತು ಔಷದಿಗಳ ಕೊರತೆಯಾಗದಂತೆ ನಿಗಾವಹಿಸಬೇಕೆಂದು ಅದಿಕಾರಿಗಳಿಗೆ ಸೂಚಿಸಿದರು. ಕುರುಗೋಡು ತಾಲೂಕುಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಬಸಪ್ಪ, ತಾಲೂಕುಆರೋಗ್ಯಅಧಿಕಾರಿ ಮೋಹನಕುಮಾರಿ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ, ಮ್ಯನೆಜರ್ ಗ್ರೇಡ್2 ತಹಶೀಲ್ದಾರ್ ಮಲ್ಲೇಶಪ್ಪ, ಉಪತಹಶೀಲ್ದಾರ್ ಯಾಕೂಬ್‍ಅಲಿ, ಶಿರಸ್ತೆದಾರ ಚೆನ್ನಪ್ಪ, ವಿಜಯಕುಮಾರ್, ಆರ್‍ಐ. ಬಸಲಿಂಗಪ್ಪ, ಗ್ರಾಮಲೆಕ್ಕಾಧಿಕಾರಿಗಳು, ಪಿಡಿಒ, ಸೇರಿದಂತೆ ಕುರುಗೋಡು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.