ಕೋರೋನಾ ನಡುವೆಯೂ ಸಂಭ್ರಮದ ದೀಪಾವಳಿ ಹಬ್ಬ ಆಚರಣೆ

ಚಿಂಚೋಳಿ,ನ.17- ಇಲ್ಲಿನ ಚಂದಾಪೂರದ ಪಟ್ಟಣದ ಸೇವಾಲಾಲ ಮಂದಿರದ ಆವರಣದಲ್ಲಿ ಆಯೋಜಿಸಿದ್ದ ದೀಪಾವಳಿ ಹಬ್ಬದ ಉತ್ಸವದಲ್ಲಿ ಬಂಜಾರ ಸಮಾಜದ ಮಹಿಳೆಯರು ನೃತ್ಯ ಮಾಡುವ ಮೂಲಕ ಸಂಭ್ರಮಕ್ಕೆ ಚಾಲನೆ ನೀಡಿದರು.
ಈ ಸಂಭ್ರಮ ಆಚರಣೆಯಲ್ಲಿ ತಾಲೂಕ ಪಂಚಾಯತ ಅಧ್ಯಕ್ಷ ರೇಣುಕಾ ಅಶೋಕ ಚವ್ಹಾಣ. ಬಂಜಾರ ಸಮಾಜದ ತಾಲ್ಲೂಕ ಅಧ್ಯಕ್ಷ ರಾಮಶೆಟ್ಟಿ ಪವಾರ. ರಾಠೋಡ. ಕುಂಚಾವರಂ ವನ್ಯಜೀವಿ-ಧಾಮ ವಲಯ ಅರಣ್ಯಧಿಕಾರಿಗಳಾದ ಸಂಜೀವಕುಮಾರ ಚವ್ಹಾಣ. ಪುರಸಭೆ ಸದಸ್ಯರಾದ ಭೀಮರಾವ ರಾಠೋಡ. ಪುರಸಭೆ ಮಾಜಿ ಉಪಾಧ್ಯಕ್ಷರಾದ ರಾಜು ಪವಾರ. ಯುವ-ಮುಖಂಡರಾದ ರಾಜು ಚವ್ಹಾಣ. ಜೈಭೀಮ ರಾಠೋಡ. ತಾಂಡದ ಹಿರಿಯರಾದ ಮೇಘುನಾಯಕ ಖೂಬಾ ರಾಠೋಡ. ಮತ್ತು ಅನೇಕ ಬಂಜಾರ ಸಮಾಜದ ಮುಖಂಡರು ಭಾಗವಹಿಸಿದ್ದರು.