ಕೋರೋನಾ ಜಾಗೃತಿ ಅಭಿಯಾನ, 29 ಸಾವಿರ ರೂ. ದಂಡ

ಹಗರಿಬೊಮ್ಮನಹಳ್ಳಿ.ಏ.೧೮ : ಪಟ್ಟಣದಲ್ಲಿ ಕರೋನ ಜಾಗೃತಿ ಕಾರ್ಯಕ್ರಮ ಅಭಿಯಾನಕ್ಕೆ ತಹಸೀಲ್ದಾರ್ ಶರಣಮ್ಮ ಶನಿವಾರ ಚಾಲನೆ ನೀಡಿದರು.
ಈ ವೇಳೆ ಪಟ್ಟಣದ ಪ್ರಮುಖ ರಸ್ತೆ ಅಂಗಡಿ ಮಾಲೀಕರು ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ ರಿಂದ ತಾಲೂಕಾಡಳಿತ ದಂಡ ವಿಧಿಸಿತು. ಕೆಲವು ಸಾರ್ವಜನಿಕರು ಮಾಸ್ಕ ಧರಿಸದ ಹಲವರಿಗೆ ಪುರಸಭೆ ಅಧಿಕಾರಿಗಳು ದಂಡ ವಿಧಿಸಿದರು. ತಹಸೀಲ್ದಾರ್ ಮಾತನಾಡಿ ಕೊರೋನಾ ರಕ್ಷಣೆಗೆ ಸಾಮಾಜಿಕ ಅಂತರ ಮಾಸ್ಕ್ ಧರಿಸಿ ಬೇಕು ಎಂದು ಹೇಳಿದರು ಕೇಳದ ಜನರಿಗೆ ದಂಡ ವಿಧಿಸಲಾಗಿದೆ ಎಂದರು.
ದಂಡದ ಮೊತ್ತ ಒಟ್ಟು 29 ಸಾವಿರ ರೂಪಾಯಿ ಸಂಗ್ರಹವಾಗಿದೆ.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಡಾ, ದಿನೇಶ್ ಕುಮಾರ್, ತೋಟಗಾರಿಕೆ ಇಲಾಖೆಯ ಪರಮೇಶ್ವರಪ್ಪ ,ಪುರಸಭೆಯ ಸ್ಥಾಪಕ ಚಂದ್ರಶೇಖರ್ ಆರೋಗ್ಯ ಸಹಾಯಕರಾದ ನಾಗರತ್ನ , ವಿಜಯಲಕ್ಷ್ಮಿ ಮೇಲ್ವಿಚಾರಕ ಪ್ರಭಾಕರ ಇತರರು ಇದ್ದರು