ಕೋರೋನಾದಿಂದ ಮೃತಪಟ್ಟ, ಖಾಸಗಿ ಉದ್ಯೋಗದಲ್ಲಿರುವ ಕುಟುಂಬಕ್ಕೆ ಸಹಾಯಹಸ್ತಃ ಶಾಸಕ ಯತ್ನಾಳ

ವಿಜಯಪುರ, ಮೇ.26-ನಗರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಯಾವುದೇ ಕುಟುಂಬವು ಅವರ ಕುಟುಂಬದಲ್ಲಿರುವ ಮುಖ್ಯ ಯಜಮಾನರು ಖಾಸಗಿ ಉದ್ಯೋಗನಿರತರಾಗಿದ್ದಲ್ಲಿ, ಕೋರೊನ ಸೋಂಕಿನಿಂದ ಮೃತಪಟ್ಟಲ್ಲಿ, ಅವರ ಕುಟುಂಬದ ಮೂಲ ಆಧಾರ ಸ್ತಂಭವಾದ ಮುಖ್ಯ ಯಜಮಾನ ತೀರಿಕೊಂಡು ಕುಟುಂಬ ನಿರ್ವಹಣೆ ಕಷ್ಟವಾದಲಿ,್ಲ ಇನ್ನೂ ಕೆಲ ಕುಟುಂಬಗಳಲ್ಲಿ ತಾಯಿಯನ್ನು ಕಳೆದುಕೊಂಡು, ಕೆಲ ಸಂದರ್ಭದಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಮಕ್ಕಳು ಅನಾಥರಾದಲ್ಲಿ ಇಂತಹ ಖಾಸಗಿ ಉದೋಗದಲ್ಲಿರುವಂತ ಕುಟುಂಬವು ಜೀವನ ನಿರ್ವಹಣೆ ಮಾಡುವದು ಕಷ್ಟವಾಗುತ್ತದೆ. ಈ ಕಷ್ಟದ ಸಂದರ್ಭದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳರವರು ಅವರ ನೆರವಿಗೆ ಮುಂದಾಗಿದ್ದಾರೆ.
ಈ ರೀತಿಯಾದಂತ ಪರಿಸ್ಥಿತಿ ಎದುರಾದಲ್ಲಿ ಖಾಸಗಿ ಉದೋಗದಿಂದ ಜೀವನವನ್ನು ನಿರ್ವಹಣೆ ಮಾಡತಕ್ಕಂತ ಸಂದರ್ಭ ನಿಂತು ಹೋದಲ್ಲಿ ಕರೋನಾದಿಂದ ಮೃತಪಟ್ಟ ಕುಟುಂಬಗಳಲ್ಲಿ ಅವರ ಜೀವನ ನಿರ್ವಹಣೆಗೆ ಸಹಾಯಹಸ್ತವಾಗಿ ಶ್ರೀ ಸಿದ್ಧೇಶ್ವರ ಸಂಸ್ಥೆ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಹಭಾಗಿತ್ವದಲ್ಲಿ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲು ಮುಂದೆ ಬಂದಿರುತ್ತಾರೆ.
ಶ್ರೀ ಸಿದ್ಧೇಶ್ವರ ಸಂಸ್ಥೆ, ಸಿದ್ಧಸಿರಿ ಸೌಹಾರ್ದ ಸಹಕಾರಿ ಅಧ್ಯಕ್ಷರಾಗಿ, ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳರವರು ಇಂತಹ ಕಷ್ಟವನ್ನು ಎದುರಿಸುತ್ತಿರುವ ಪ್ರತಿ ಕುಟುಂಬದವರು ಅಥವಾ ಆ ಕುಟುಂಬದ ಬಗ್ಗೆ ಅಲ್ಲಿಯ ಬಡಾವಣೆ, ಓಣಿಯ, ಕಾಲನಿಯ ನಮ್ಮ ಕಾರ್ಯಕರ್ತರು ಅವರ ಬಗ್ಗೆ ವಿವರವನ್ನು ಶ್ರೀ ಸಿದ್ಧೇಶ್ವರ ಸಂಸ್ಥೆಗೆ ಸಲ್ಲಿಸಿದಲ್ಲಿ ಸಂಸ್ಥೆಯಿಂದ ಆ ಕುಟುಂಬದ ಬಗ್ಗೆ ಪರಿಶೀಲಿಸಿ ಆರ್ಥಿಕ ನೆರವು ನೀಡಲಾಗುವದು ಎಂದು ನಗರ ಶಾಸಕರು ತಿಳಿಸಿರುತ್ತಾರೆ.
ಸದರಿ ಕುಟುಂಬಕ್ಕೆ ಆರ್ಥಿಕವಾಗಿ ಸದೃಡ ಹೊಂದಲು, ಆರ್ಥಿಕ ಸಹಾಯ ಮಾಡಲು ನಗರ ಶಾಸಕರು ನಿರ್ದರಿಸಿರುತ್ತಾರೆ. ಇಂತಹ ಕುಟುಂಬದವರು ಸ್ವಂತವಾಗಿ ಅಥವಾ ಅಲ್ಲಿಯ ಬಡಾವಣೆ, ಓಣಿಯ, ಕಾಲನಿಯ ನಮ್ಮ ಕಾರ್ಯಕರ್ತರು ಅವರ ಬಗ್ಗೆ ವಿವರವನ್ನು ಶ್ರೀ ಸಿದ್ಧೇಶ್ವರ ಸಂಸ್ಥೆಗೆ ಸಲ್ಲಿಸಿದಲ್ಲಿ ತಕ್ಷಣವೇ ಅವರಿಗೆ ಆರ್ಥಿಕ ಸಹಾಯ ಮಾಡಲು ಸಂಸ್ಥೆಯು ಮುಂದಾಗಿದೆ ಎಂದು ನಗರ ಶಾಸಕರು ತಿಳಿಸಿರುತ್ತಾರೆ.
ಸದರಿ ಕುಟುಂಬದವರು ನಿರ್ಗತಿಕರಾಗಲು ಯಾವುದೇ ಕಾರಣಕ್ಕೂ ಆಸ್ಪದವಿರದೇ ನಗರ ಶಾಸಕರು ಅವರ ಕುಟುಂಬವನ್ನು ಎತ್ತಿ ಹಿಡಿಯಲು ಮುಂದಾಗಿದ್ದಾರೆ, ಸದರಿ ಕುಟುಂಬದ ಬಗ್ಗೆ ಮಾಹಿತಿಯನ್ನು ಶ್ರೀ ಸಿದ್ಧೇಶ್ವರ ಸಂಸ್ಥೆಗೆ ತಿಳಿಸಿದಲ್ಲಿ ಅವರಿಗೆ ಸಿದ್ಧಸಿರಿ ಸೌಹಾರ್ದ ಸಹಕಾರಿ ಮತ್ತು ಶ್ರೀ ಸಿದ್ಧೇಶ್ವರ ಸಂಸ್ಥೆ ವತಿಯಿಂದ ಸಹಾಯಧನವನ್ನು ನೀಡಲಾಗುವದು ಎಂದು ತಿಳಿಸಿರುತ್ತಾರೆ.