ಕೋರೋನಾದಿಂದ ಮೃತಪಟ್ಟ ಕುಟುಂಬಕ್ಕೆ 10 ಸಾವಿರ ಸಹಾಯ ಧನ

ಚಾಮರಾಜನಗರ, ಮೇ. 31- ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ನಿಂದ ಸಾವಿಗೀಡಾಗಿರುವ 130ಕ್ಕು ಹೆಚ್ಚು ಮೃತರ ಕುಟುಂಬಗಳಿಗೆ ತಲಾ 10 ಸಾವಿರ ರೂ.ಗಳ ವೈಯುಕ್ತಿಕ ಧನ ಸಹಾಯ ಮಾಡಲು ಮೂಲಕ ಆ ಕುಟುಂಬಗಳಿಗೆ ಅತ್ಮಸ್ಥೈರ್ಯವನ್ನು ತುಂಬುವ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.
ತಾಲೂಕಿನ ಜ್ಯೋತಿಗೌಡನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋವಿಡ್ ಟಾಸ್ಕ್ ಪೋರ್ಸ್ ಸಮಿತಿಯ ಅಧ್ಯಕ್ಷತೆ ವಹಿಸಿ, ಇತ್ತೀಚೆಗೆ ಕೋವಿಡ್ ಸೋಂಕು ತಗಲು ಮೃತಪಟ್ಟಿದ್ದ ನಾಲ್ವರು ಮೃತ ಕುಟುಂಬದವರಿಗೆ 10 ಸಾವಿರ ರೂ. ಗಳ ಸಹಾಯಧನ ವಿತರಿಸಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ ಕೋರೊನಾ ಸೋಂಕು ಉಲ್ಬಣವಾಗುತ್ತಿದೆ. ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್‍ಗಳನ್ನು ಕಡ್ಡಾಯ ಧರಿಸಿ, ಅನಗತ್ಯವಾಗಿ ಮನೆಯಿಂದ ಹೊರ ಹೋಗುವುದು ಸರಿಯಲ್ಲ. ದೇಶದಂತ್ಯ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಈಗಾಗಲೇ ಸರ್ಕಾರದಿಂದ ಪಡಿತರ ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಜನರು ಯಾವುದೇ ಕೆಲಸ ಕಾರ್ಯಗಳಿದ್ದರು ಸಹ ಮುಂದೂಡಿ, ಮನೆಯಲ್ಲಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಶಾಸಕರು ತಿಳಿಸಿದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಕಳೆದ 40 ದಿನಗಳಿಂದ ಕೋವಿಡ್ ಸೋಂಕು ತಗಲು 130ಕ್ಕು ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.ಅವರ ಅತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ಹಾಗೆಯೇ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಬೇಡಿಕೊಳ್ಳುತ್ತೆವೆ. ಕೋವಿಡ್ ಸಂದರ್ಭವಾಗಿರುವ ಕಾರಣದಿಂದ ಕುಟುಂಬದವರನ್ನು ಖುದ್ದು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಂಚಾಯಿತಿ ವಾರು ಟಾಸ್ಕ್‍ಪೋರ್ಸ್ ಸಭೆಗಳಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಆ ಕುಟುಂಬಗಳಿಗೆ ಸಹಾಯಧನ ನೀಡುವ ಜೊತೆಗೆ ಇತರೇ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಬದ್ದನಾಗಿದ್ದೇನೆ.
ಯಾರು ಸಹ ಧೃತಿಗಡಬೇಡಿ. ಧೈರ್ಯವಾಗಿರಿ. ಮಾಸ್ಕ್ ಧರಿಸಿ, ನಿಮ್ಮ ಗ್ರಮಗಳನ್ನು ಕೋರೊನಾ ಮುಕ್ತ ಗ್ರಮನ್ನಾಗಿ ಮಾಡಿ, ಎಲ್ಲರು ಸಹ ಸಹಭಾಳ್ವೆಯಿಂದ ಇರಬೇಕು. ಇದೊಂದು ಮಹಾಮಾರಿ ಈಗಾಗಲೇ ವ್ಯಾಕ್ಸಿನ್ ಹಾಕಲಾಗುತ್ತಿದೆ. ಇದನ್ನು ಪಡೆದುಕೊಂಡು ಪ್ರತಿಯೊಬ್ಬರು ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.
ಬಳಿಕ ಜ್ಯೋತಿಗೌಡನಪುರ, ನಾಗವಳ್ಳಿ, ಹೆಬ್ಬಸೂರು, ಚಂದಕವಾಡಿ, ದೊಡ್ಡಮೋಳೆ ಗ್ರಾಮ ಪಂಚಾಯಿತಿಗಳಿಗೆ ತಲಾ 1 ಸಾವಿರ ಎನ್-95 ಮಾಸ್ಕ್‍ಗಳನ್ನು ಪಂಚಾಯತಿ ಅಧ್ಯಕ್ಷರು ಹಾಗು ಪಿಡಿಓಗಳಿಗೆ ನೀಡಿದರು. ಪ್ರಮುಖವಾಗಿ ಕೋರೊನಾ ವಿರುದ್ದ ಅರಿವು ಮೂಡಿಸುವ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಸ್ವಯಂ ಸೇವಾ ಕಾರ್ಯಕರ್ತರು ಹಾಗು ಗ್ರಾ.ಪಂ.ಸದಸ್ಯರು ಮತ್ತು ಕೋರೋನಾ ವೈರಸ್ ಸೋಂಕು ಕಾಣಿಸಿಕೊಂಡು ಪ್ರದೇಶ ಹಗೂ ಕುಟುಂಭಸ್ಥರಿಗೆ ನೀಡಿ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.
ಸಭೆಯಲ್ಲಿ ಗ್ರಾ.ಪಂ. ಅದ್ಯಕ್ಷೆ ರಾಜಮ್ಮ, ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಸಿಡಿಪಿಓ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾ.ಪಂ. ಅಭಿವೃದ್ದಿ ಅಧಿಕಾರಿಗಳು ಗ್ರಾ.ಪಂ. ಸದಸ್ಯರು, ಇದ್ದರು.