ಕೋರೊನಾ ಬಗ್ಗೆ ಹೆಚ್ಚು ಜಾಗೃತಗೊಳ್ಳುವಂತೆ ಸಾರ್ವಜನಿಕರಲ್ಲಿ ವಿನಂತಿ: ಬಿ ರಮಾನಾಥ ರೈ

ಬಂಟ್ವಾಳ, ಮೇ ೨೭- ಬಂಟ್ವಾಳ ತಾಲೂಕು ಬಡಗಕಜೆಕಾರ್ ಗ್ರಾಮ ಪಂಚಾಯಾತ್ ವ್ಯಾಪ್ತಿಯ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯಾತ್ ಸದಸ್ಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ಕೋರೊನಾ ಸಾಂಕ್ರಮಿಕ ರೋಗ ಅತೀ ವೇಗವಾಗಿ ಹರಡುತ್ತಿದ್ದು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಜನತೆ ಜಾಗೃತರಾಗಿ ಸರಕಾರದ ಮಾರ್ಗಸೂಚಿಯನ್ನು ಪಾಲಿಸುವಂತೆ ತಿಳಿಸಿದರು. ಹಾಗೂ ಗ್ರಾಮದಲ್ಲಿ ಸೋಂಕಿತರ ಮಾಹಿತಿಯನ್ನು ಪಡೆದು ಸೋಂಕಿತರ ಕುಟುಂಬಕ್ಕೆ ದಿನಬಳಕೆಯ ಸಾಮಗ್ರಿಗಳನ್ನು ಪಂಚಾಯಾತ್‌ನಿಂದಲೆ ವ್ಯವಸ್ಥೆ ಕಲ್ಪಿಸುವಂತೆ ವಿನಂತಿಸಿದರು. ಬಡಗಕಜೆಕಾರ್ ಗ್ರಾಮ ಪಂಚಾಯಾತ್ ಸಂಪೂರ್ಣ ಕೋರೊನ ರಹಿತ ಗ್ರಾಮ ಪಂಚಾಯಾತ್ ಆಗಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಜಿಲ್ಲಾ ಪಂಚಾಯಾತ್ ಸದಸ್ಯರಾದ ಪದ್ಮಶೇಖರ್ ಜೈನ್ ಪಂಚಾಯಾತ್ ಅಧ್ಯಕ್ಷರಾದ ಆಸ್ಮ ಅಜೀಜ್ ಉಪಾಧ್ಯಕ್ಷರಾದ ಡೀಕಯ್ಯ ಬಂಗೇರ ಸದಸ್ಯರಾದ ಜಾನ್ ಡಿಸೋಜ, ಹರಿಣಾಕ್ಷಿ ಪೂಜಾರಿ ಮುಖಂಡರಾದ ಮೋಹನ್ ಗೌಡ ಕಲ್ಮಂಜ, ಜಯ ಬಂಗೇರ, ಸುಧಾಕರ್ ಶೆಣೈ, ವಾಸು ಪೂಜಾರಿ, ವಿಶ್ವನಾಥ್ ಪೂಜಾರಿ, ಬಾಲಕೃಷ್ಣ ಪ್ರಭು, ಯಾಕುಬ್ ಉದ್ದದಗುಡ್ಡೆ ಉಪಸ್ಥಿತರಿದ್ದರು.