ಕೋರೊನಾದಿಂದ ಮೃತಪಟ್ಟ ಶ್ರೀಶೈಲ ಶಾಬಾದಿ ಧರ್ಮಪತ್ನಿಗೆ ಯತ್ಳಾಳರಿಂದ ಒಂದು ಲಕ್ಷ ರೂ.ಸಹಾಯಧನ

ವಿಜಯಪುರ, ಮೇ.26-ಕೋರೊನಾದಿಂದ ಮೃತಪಟ್ಟ ಜೋರಾಪೂರ ಪೇಠ ಶ್ರೀಶೈಲ ಶಾಬಾದಿ ಇವರ ಧರ್ಮಪತ್ನಿ ಗೀತಾಂಜಲಿ ಶಾಬಾದಿ ಇವರಿಗೆ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ತಮ್ಮ ವೈಯಕ್ತಿಕವಾಗಿ 1,00,000 ರೂ ಸಹಾಯಧನ ನೀಡಿದ್ದು, ಅವರ ಎರಡು ಮಕ್ಕಳ ಹೆಸರಿನಲ್ಲಿ ತಲಾ 50,000 ರೂ ಠೇವಣಿ ನೀಡಿದರು.
ಶ್ರೀಮತಿ ಗೀತಾಂಜಲಿ ಶಾಬಾದಿಯವರು ವಿಜಯಪುರ ನಗರದ ಜೋರಾಪೂರ ಪೇಠೆಯ ಬಣಗಾರ ಓಣಿಯಲ್ಲಿ ವಾಸಿಸುತ್ತಿದ್ದು, ಇವರ ಪತಿ, ಕುಟುಂಬದ ಯಜಮಾನ ಶ್ರೀಶೈಲ ಶಾಬಾದಿ ಟೇಲರಿಂಗ್ ಕೆಲಸ ಮಾಡಿ ವೃತ್ತಿ ಜೀವನ ನಡೆಸುತ್ತಿದ್ದರು, ಕರೋನ ಸಂದರ್ಭದಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದು ಅವರಿಗೆ ಸಣ್ಣ ಸಣ್ಣ ಎರಡು ಮಕ್ಕಳಿದ್ದು ಅವರ ಜೀವನ ನಿರ್ವಹಣೆಯನ್ನರಿತು ಆ ಕುಟುಂಬಕ್ಕೆ ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳರವರು ತಮ್ಮ ವೈಯಕ್ತಿಕವಾಗಿ 1,00,000 ರೂ ಸಹಾಯಧನ ನೀಡಿದರು.
ಸದರಿ ಶ್ರೀಮತಿ ಗೀತಾಂಜಲಿ ಶಾಬಾದಿಯವರನ್ನು ಸಂಪರ್ಕಿಸಿದಾಗ ಅವರ ಮಕ್ಕಳ ಹೆಸರಿನಲ್ಲಿ ಠೇವಣಿ ಇಡಲು ವಿನಂತಿಸಿದರು. ಶ್ರೀಮತಿ ಗೀತಾಂಜಲಿ ಶ್ರೀಶೈಲ ಶಾಬಾದಿ ಇವರ ಮಕ್ಕಳಾದ ಸಿದ್ಧೇಶ ಶಾಬಾದಿ ಹಾಗೂ ಶಂಕರ್ ಶಾಬಾದಿ ಎಂಬ ಅವರ ಎರಡು ಮಕ್ಕಳ ಹೆಸರಿನಲ್ಲಿ ತಲಾ 50,000 ರೂ. ಒಟ್ಟು 100,000 ರೂ ಮೊತ್ತವನ್ನು ಸಿದ್ಧಸಿರಿ ಸೌಹಾರ್ದ ಸಹಕಾರಿಯಲ್ಲಿ ಠೇವಣಿ ಇಟ್ಟು ಆ ಠೇವಣಿ ಪ್ರತಿಯನ್ನು ಅವರಿಗೆ ಹಸ್ತಾಂತರಿಸಿದರು.